ಮಂಗಳೂರು : Ambulance driver : 41 ಗಂಟೆಯಲ್ಲಿ 2700 ಕಿ.ಮೀ ಆಂಬ್ಯುಲೆನ್ಸ್ ಚಾಲನೆ ಮಾಡಿ ಅಸ್ವಸ್ಥ ಕಾರ್ಮಿಕನನ್ನು ಹುಟ್ಟೂರಿಗೆ ಸಾಗಿಸಿ ಆಂಬ್ಯುಲೆನ್ಸ್ ಚಾಲಕರೊಬ್ಬರು ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ಐರಾವತ ಆ್ಯಂಬುಲೆನ್ಸ್ ನ ಅನಿಲ್ ರೂಬನ್ ಮೆಂಡೋನ್ಸಾ ಈ ಸಾಧನೆ ಮಾಡಿದ್ದಾರೆ. ಇವರು ಮೂಡಬಿದರೆಯಿಂದ ಉತ್ತರ ಪ್ರದೇಶದ ಮುರಾದಾಬಾದ್ ಗೆ ಅಸ್ವಸ್ಥ ಕಾರ್ಮಿಕನನ್ನು ಇವರು ಸುರಕ್ಷಿತವಾಗಿ ಸಾಗಿಸಿದ್ದಾರೆ.
ಉತ್ತರಪ್ರದೇಶದ ಮುರದಾಬಾದ್ ನಿವಾಸಿ ಮಹಾಂದಿ ಹಸನ್ ಮೂಡಬಿದಿರೆಯ ಅಡಿಕೆ ಗೋದಾಮೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಾಸ್ತಿಕಟ್ಟೆಯ ಅಡಿಕೆ ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಹಾಂದಿ ಹಸನ್ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತೆರಳಿದ್ದರು. ಹೀಗಾಗಿ ಮಹಾಂದಿ ಹಸನ್ ಸಂಬಂಧಿಕರು ಆತನನ್ನು ಮುರದಾಬಾದ್ ನಲ್ಲೇ ಆರೈಕೆ ಮಾಡುವ ನಿರ್ಧಾರ ಮಾಡಿದ್ದರು. ಹೀಗಾಗಿ ಅಸ್ವಸ್ಥ ಕಾರ್ಮಿಕ ಮಹಾಂದಿ ಹಸನ್ ನನ್ನು ವಿಮಾನದ ಮೂಲಕ ಸಾಗಿಸಲು ಗೋದಾಮಿನ ಮಾಲಿಕರು ವ್ಯವಸ್ಥೆ ಮಾಡಿದ್ದರು. ಆದ್ರೆ ವೈದ್ಯರು ಅಥವಾ ದಾದಿಯರಿಲ್ಲದೆ ಅಸ್ವಸ್ಥ ಕಾರ್ಮಿಕನನ್ನು ಕೊಂಡೊಯ್ಯಲು ವಿಮಾನಯಾನ ಸಂಸ್ಥೆ ನಿರಾಕರಿಸಿತ್ತು.
ಹೀಗಾಗಿ ಮೆಹಾಂದಿ ಹಸನ್ ನನ್ನು ಆ್ಯಂಬುಲೆನ್ಸ್ ಮೂಲಕ ಸಾಗಿಸುವ ನಿರ್ಧಾರ ಮಾಡಲಾಯಿತು. ಮೂಡಬಿದ್ರೆ ಅನಿಲ್ ರೂಬನ್ ಮೆಂಡೋನ್ಸಾ ಮಾಲೀಕತ್ವದ ಐರಾವತ ಆ್ಯಂಬುಲೆನ್ಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಯಿತು. ಆದ್ರೆ ಅಂಬ್ಯುಲೆನ್ಸ್ ಮೂಲಕ ಅಷ್ಟು ದೂರ ರೋಗಿಯನ್ನು ಸಾಗಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಆದ್ರೂ ಸಹ ಆ್ಯಂಬುಲೆನ್ಸ್ ಚಾಲಕ ಅನಿಲ್ ರೂಬನ್ ಮೆಂಡೋನ್ಸಾ ಇದನ್ನು ಸವಲಾಗಿ ಸ್ವೀಕರಿಸಿ ಅಂಬ್ಯುಲೆನ್ಸ್ ನಲ್ಲಿ ಹೊರಟೆ ಬಿಟ್ಟರು.
ಮತ್ತೊಬ್ಬ ಚಾಲಕನೊಂದಿಗೆ ಮೊರಾದಾಬಾದ್ ಗೆ ಅಂಬ್ಯುಲೆನ್ಸ್ ಡ್ರೈವ್ ಮಾಡಿದ ಅನಿಲ್ ರೂಬನ್ ಮೆಂಡೋನ್ಸಾ ಸೆಪ್ಟೆಂಬರ್ 10 ರಂದು ಮಹಾಂದಿ ಹಸನ್ ನನ್ನು ಹೊತ್ತು ಮೂಡುಬಿದಿರೆ ನಿಂದ ಹೊರಟರು. ಸೆಪ್ಟೆಂಬರ್ 12 ರ ಮುಂಜಾನೆ 10:30 ಕ್ಕೆ ಮೂರಾದಾಬಾದ್ ನ್ನು ಈ ಅಂಬ್ಯುಲೆನ್ಸ್ ತಲುಪಿತು. ಆ ಬಳಿಕ ಮೂರಾದಾಬಾದ್ ನ ಖಾಸಗಿ ಆಸ್ಪತ್ರೆಗೆ ಹಸನ್ ನನ್ನು ಕುಟುಂಬ ಸದಸ್ಯರು ದಾಖಲಿಸಿದರು.
ಸದ್ಯ 41 ಗಂಟೆಯಲ್ಲಿ 2700 ಕಿ.ಮೀ ದೂರ ಆಂಬ್ಯುಲೆನ್ಸ್ ಚಾಲನೆ ಮಾಡಿ ರೋಗಿಯನ್ನು ಸುರಕ್ಷಿತವಾಗಿ ತಲುಪಿಸಿದ ಅನಿಲ್ ರೂಬನ್ ಮೆಂಡೋನ್ಸಾ ಅವರ ಸಾಹಸಕ್ಕೆ ಸಾವರ್ಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ವಾಹನಕ್ಕೆ ಇಂಧನ ಮತ್ತು ಊಟ ತಿಂಡಿ ಮಾಡಲು ವಾಹನ ನಿಲ್ಲಿಸಿದ್ದು ಹೊರತುಪಡಿಸಿ ಬೇರೆ ಎಲ್ಲಿಯೂ ವಾಹನ ನಿಲ್ಲಿಸದೇ ಈ ಯಶಸ್ಸಿ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ : Project Cheetah team :ಪ್ರಾಜೆಕ್ಟ್ ಚೀತಾ ತಂಡದಲ್ಲಿ ಪುತ್ತೂರಿನ ಡಾ ಸನತ್ ಕೃಷ್ಣ
Ambulance driver drove 2700 km ambulance in 41 hours and delivered patient safely