sova virus :ನಿಮ್ಮ ಫೋನ್‌ನಲ್ಲೂ ಇರಬಹುದು ಭಯಾನಕ ‘ಸೋವಾ ವೈರಸ್’

sova virus : ವರ್ಷಗಳ ಹಿಂದೆ ಬಂದ ಕರೊನಾ ವೈರಸ್ ಮಾನವನ ಜೀವಕ್ಕೆ ಹಾನಿ ಮಾಡಿರುವುದು ನಿಮಗೆಲ್ಲಾ ಗೊತ್ತೆ ಇದೆ. ಇದೀಗ ತಂತ್ರಜ್ಞಾನಕ್ಕೆ ಹಾನಿ ಮಾಡುವ ಭಯಾನಕ ವೈರಸ್ ಒಂದು ಭಾರತಕ್ಕೆ ಲಗ್ಗೆ ಇಟ್ಟಿದೆ. ನಿಮಗೆ ಗೊತ್ತಾಗದಂತೆ ಮೊಬೈಲ್, ಕಂಪ್ಯೂಟರ್ ಒಳಗೆ ಸೇರಿಕೊಳ್ಳುವ ಈ ವೈರಸ್ ನಿಮ್ಮ ವೈಯಕ್ತಿಕ ವಿವರ, ಬ್ಯಾಂಕಿಂಗ್, ಹಣಕಾಸು ಮಾಹಿತಿ ಸೇರಿದಂತೆ ಎಲ್ಲವನ್ನು ಕಳವು ಮಾಡುತ್ತೆ.

ಹೌದು..ಇವತ್ತು ಡಿಜಿಟಲ್ ವ್ಯವಹಾರ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ಬ್ಯಾಂಕಿಂಗ್ ಅನ್ನುವುದು ಜನರ ಬದುಕನ್ನು ಸುಲಭಗೊಳಿಸಿದೆ. ಆದ್ರೆ ಇದೀಗ ಆ್ಯಂಡ್ರಾಯ್ಡ್‌ ಮೊಬೈಲ್‌ ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಲು, ಸೋವಾ ಎಂಬ ಮೊಬೈಲ್‌ ಬ್ಯಾಂಕಿಂಗ್‌ ಟ್ರೋಜನ್‌ ವೈರಸ್‌ ಲಗ್ಗೆ ಇಟ್ಟಿದೆ. ಈ ಬಗ್ಗೆ ಎಚ್ಚರವಹಿಸುವಂತೆ ಕೇಂದ್ರ ಸರಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿ ಸಲಹೆ ನೀಡಿದೆ. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗಳನ್ನು ಗುರಿಯಾಗಿಸಿಕೊಂಡು ದಾಳಿ‌ ಮಾಡುವ ಈ ವೈರಸ್ ಅಮೇರಿಕಾ, ರಷ್ಯಾ ಮತ್ತು ಸ್ಪೇನ್‌ನ ಬಳಿಕ ಈಗ ಭಾರತೀಯ ಬ್ಯಾಂಕಿಂಗ್ ಬಳಕೆದಾರರನ್ನು ಗುರಿ ಮಾಡಿದೆ. ಪೇಮೆಂಟ್, ಬ್ಯಾಂಕಿಂಗ್, ಇ-ಕಾಮರ್ಸ್ ಆ್ಯಪ್‌ಗಳ ಮೂಲಕವೂ ಮೊಬೈಲ್‌ನಲ್ಲಿ ಬಂದು ಕೂರುವ ಈ ವೈರಸ್ ಗ್ರಾಹಕರ ವೈಯಕ್ತಿಕ ವಿವರ, ಬ್ಯಾಂಕಿಂಗ್, ಹಣಕಾಸು ಮಾಹಿತಿ ಎಲ್ಲವನ್ನು ಕಳವು ಮಾಡುತ್ತೆ.

ಮೊಬೈಲ್ ಗೆ ಬರುವ ಲಿಂಕ್‌ಗಳನ್ನು ಯೋಚಿಸದೆ ಕ್ಲಿಕ್ ಮಾಡಿದ್ರೆ ಮೊಬೈಲ್‌ಗೆ ಈ ವೈರಸ್ ಬಂದು ಕೂರುತ್ತೆ. ಅಶ್ಲೀಲ ವೆಬ್‌ಸೈಟ್‌ಗಳು ಸೋವಾ ವೈರಸ್ ಹರಡುವಲ್ಲಿ ಸಿಂಹಪಾಲು ಹೊಂದಿದೆ. ಬಳಕೆದಾರರಿಗೆ ಯಾವುದೇ ಸುಳಿವು ಸಿಗದಂತೆ ಪಾಸ್‌ವರ್ಡ್, ಲಾಗಿನ್ ವಿವರವನ್ನು ಇದು ಕದಿಯುತ್ತೆ. ಇದರ ಜೊತೆ ರ್ಯಾಡಂಮ್ ಸಮ್‌ವೇರ್ ಸೇರಿಕೊಂಡು ಅಕೌಂಟ್‌ಗಳನ್ನೇ ಲಾಕ್ ಮಾಡುತ್ತೆ. ಇದನ್ನು ಅನ್‌ಲಾಕ್ ಮಾಡುವುದಕ್ಕೆ ಖದೀಮರು ಹಣಕ್ಕೆ ಬೇಡಿಕೆ ಇಡುತ್ತಾರೆ. ಹೀಗಾಗಿ ಸೋವಾ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಂಗಳೂರಿನ ಸೈಬರ್ ತಜ್ಞ ಜಿ. ಅನಂತ ಪ್ರಭು ಎಚ್ಚರಿಸಿದ್ದಾರೆ. ಮೊಬೈಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಎರಡು ಹಂತದ ದೃಢೀಕರಣಕ್ಕೆ ಅವರು ಸೂಚಿಸಿದ್ದಾರೆ. ಬ್ಯಾಂಕಿಂಗ್ ಆ್ಯಪ್‌ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕು. ಮೊಬೈಲ್‌ಗೆ ಬರುವ ಯಾವುದೇ ಲಿಂಕ್‌ನ್ನು ಯೋಚಿಸದೆ ಕ್ಲಿಕ್ ಮಾಡದಂತೆ ಅವರು ಸೂಚನೆ ನೀಡಿದ್ದಾರೆ.

ಜುಲೈನಲ್ಲಿ ಮೊದಲ ಸಲ ಈ ವೈರಸ್‌ ಭಾರತದಲ್ಲಿ ಕಂಡುಬಂತು. ಈಗ ಅದು ಮತ್ತಷ್ಟು ಅಪ್‌ಗ್ರೇಡ್‌ ಆಗಿದ್ದು, ಹಾವಳಿ ಮಿತಿ ಮೀರುತ್ತಿದೆ. ಒಟ್ಟಿನಲ್ಲಿ ಟೆಕ್ನಾಲಜಿ ಮುಂದುವರಿದಂತೆ ನಾವು ಸಹ ಹೆಚ್ಚಿನ ಅಲರ್ಟ್ ಆಗಿರಬೇಕಾದ ಅವಶ್ಯಕತೆಯಿದೆ.

ಇದನ್ನು ಓದಿ : Project Cheetah team :ಪ್ರಾಜೆಕ್ಟ್ ಚೀತಾ ತಂಡದಲ್ಲಿ ಪುತ್ತೂರಿನ ಡಾ ಸನತ್ ಕೃಷ್ಣ

ಇದನ್ನೂ ಓದಿ :Ambulance driver :41 ಗಂಟೆಯಲ್ಲಿ 2700 ಕಿ.ಮೀ ಆಂಬ್ಯುಲೆನ್ಸ್ ಚಾಲನೆ ಮಾಡಿ ರೋಗಿಯನ್ನು ಸುರಕ್ಷಿತವಾಗಿ ತಲುಪಿಸಿದ ಅಂಬ್ಯುಲೆನ್ಸ್ ಚಾಲಕ

Scary ‘sova virus’ can be in your phone too

Comments are closed.