ಸೋಮವಾರ, ಏಪ್ರಿಲ್ 28, 2025
HomeCoastal NewsAnti Riot Drill: ಬೆಳ್ತಂಗಡಿ: ಪೊಲೀಸ್‌ ಸಿಬ್ಬಂದಿಗಳಿಗೆ ದೊಂಬಿ ನಿಗ್ರಹ ತರಬೇತಿ

Anti Riot Drill: ಬೆಳ್ತಂಗಡಿ: ಪೊಲೀಸ್‌ ಸಿಬ್ಬಂದಿಗಳಿಗೆ ದೊಂಬಿ ನಿಗ್ರಹ ತರಬೇತಿ

- Advertisement -

ಉಜಿರೆ : (Anti Riot Drill) ದೊಂಬಿ, ಗಲಾಟೆ ನಡೆದಾಗ ಪೊಲೀಸರು ಹೇಗೆ ಕಾರ್ಯನಿರ್ವಹಿಸಬೇಕು. ಇಂತಹ ಸಮಯದಲ್ಲಿ ತಮ್ಮ ರಕ್ಷಣೆ ಹೇಗೆ. ತುರ್ತು ಸಂದರ್ಭಗಳಲ್ಲಿ ಪೊಲೀಸರು ಹೇಗೆಲ್ಲಾ ಪ್ರತಿಕ್ರಿಯಿಸಬೇಕು ಅನ್ನೋ ಕುರಿತು ಪೊಲೀಸ್‌ ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಇಲಾಖೆ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿನ ಪೊಲೀಸ್‌ ಠಾಣೆಗಳಲ್ಲಿ ದೊಂಬಿ ನಿಗ್ರಹ ಕವಾಯತು ನಡೆಯಿತು.

ಉಜಿರೆಯಲ್ಲಿ ನಡೆದ ದೊಂಬಿ ನಿಗ್ರಹ ಕವಾಯತು (ಆಂಟಿ ರಿಯೋಟ್‌ ಡ್ರಿಲ್)‌ ತರಬೇತಿಯಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿನ ಪೊಲೀಸ್‌ ಠಾಣೆಗಳ ಸಿಬ್ಬಂದಿಗಳು, ಅಧಿಕಾರಿಗಳು ಕವಾಯತು ನಡೆಸಿದ್ದಾರೆ. ಈ ಮೂಲಕ ಪೊಲೀಸ್‌ ಸಿಬ್ಬಂದಿಗಳು ತುರ್ತು ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸಬೇಕು, ಕಾನೂನು ಸುವ್ಯವಸ್ಥೆಗೆ ದಕ್ಕೆಯಾದಾಗ ಯಾವ ರೀತಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿ ಎದುರಿಸಬೇಕು ಎನ್ನುವುದರ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗಿದೆ.

ದೊಂಬಿ ನಿಗ್ರಹ ತರಬೇತಿಯಿಂದ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿನ ವೃತ್ತಿ ಕೌಶಲ್ಯ, ಜ್ಞಾನ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸಗಳನ್ನು ಹೆಚ್ಚಿಸಿಕೊಂಡು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಮೊದಲ ಪ್ರಾಯೋಗಿಕ ತರಬೇತಿ ಯಶಸ್ವಿಯಾದ ಬೆನ್ನಲ್ಲದೇ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಇಲಾಖೆಯು ಜಿಲ್ಲೆಯ ಎಲ್ಲಾ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿ ಇಂತಹ ತರಬೇತಿಯನ್ನು ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : The Sports School: ದಿ ಸ್ಪೋರ್ಟ್ಸ್‌ ಸ್ಕೂಲ್‌ಗೆ ಬಿಟಿಆರ್‌ ಶೀಲ್ಡ್‌ ಚಾಂಪಿಯನ್‌ ಪಟ್ಟ

ಇದನ್ನೂ ಓದಿ : ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ

ಇದನ್ನೂ ಓದಿ : SSlC Exams- Free travel: ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ

Anti Riot Drill: Belthangadi: Anti Riot Training for Police Personnel

RELATED ARTICLES

Most Popular