ನರೇಶ್-ಪವಿತ್ರಾ ಲೋಕೇಶ್ ಮದುವೆ ನಿಜನಾ ? ಇಲ್ಲಿದೆ ಅಸಲಿ ವಿಚಾರ

(Naresh-Pavitra Lokesh Marriage) ಖ್ಯಾತ ನಟ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಮದುವೆಯ ವಿಡಿಯೋ ಇದೀಗ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. ಮದುವೆ, ಹನಿಮೂನ್‌ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಆದ್ರೀಗ ಖ್ಯಾತ ನಿರ್ದೇಶಕ ಎಂ.ಎಸ್.ರಾಜು ಅವರು ನರೇಶ್‌ ಹಾಗೂ ಪವಿತ್ರ ಲೋಕೇಶ್‌ ಮದುವೆಯ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪವಿತ್ರಾ ಲೋಕೇಶ್‌ ಅವರ ಹೆಸರು ತೆಲುಗು ಚಿತ್ರರಂಗದ ನಟ ನರೇಶ್‌ ಅವರ ಜೊತೆ ಥಳಕು ಹಾಕಿಕೊಂಡಿತ್ತು. ಮೈಸೂರಿನ ಹೋಟೆಲ್‌ನಲ್ಲಿ ನರೇಶ್‌ ಪತ್ನಿಯ ಕೈಯಲ್ಲೇ ಜೋಡಿ ಸಿಕ್ಕಿಬಿದ್ದಿತ್ತು. ನಂತರದಲ್ಲಿ ನರೇಶ್‌ ಹಾಗೂ ಪವಿತ್ರ ಲೋಕೇಶ್‌ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡಿ ಬೆನ್ನಲ್ಲೇ ಇಬ್ಬರ ಮದುವೆಯ ವಿಡಿಯೋವೊಂದನ್ನು ಖುದ್ದು ನರೇಶ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮದುವೆಯ ಬೆನ್ನಲ್ಲೇ ಈ ಜೋಡಿ ದುಬೈಗೆ ಹಾರಿದ್ದು ಅಲ್ಲಿನ ಸುಂದರ ಸ್ಥಳಗಳಲ್ಲಿ ಜೋಡಿ ವಿಹರಿಸುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಹನಿಮೂನ್‌ ಮುಗಿಸಿದ್ದಾರೆ ಅನ್ನೋ ಕುರಿತು ಚರ್ಚೆ ನಡೆದಿತ್ತು.

ಆದರೆ ಮದುವೆ, ಹನಿಮೂನ್‌ನ ಅಸಲಿ ವಿಚಾರ ಇದೀಗ ಬಹಿರಂಗವಾಗಿದೆ. ಇದು ನಿಜವಾಗಿ ನಡೆದ ಮದುವೆಯಲ್ಲ ಬದಲಾಗಿ ಸಿನಿಮಾದ ದೃಶ್ಯ ಅನ್ನೋದನ್ನು ಖುದ್ದು ನಿರ್ದೇಶಕ ರಾಜು ತಿಳಿಸಿದ್ದಾರೆ. ದೇಶದಾದ್ಯಂತ ಬಹು ಚರ್ಚೆಗೆ ಗ್ರಾಸವಾಗಿದ್ದ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಲವ್‌ ಸ್ಟೋರಿ ಇದೀಗ ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಸಿನಿಮಾಕ್ಕೆ ಸದ್ಯ ಸೆಕೆಂಡ್‌ ಇನ್ನಿಂಗ್ಸ್‌ ಅಂತಾ ಹೆಸರಿಡಲಾಗಿದೆ.

ಹೊಸ ವರ್ಷದ ದಿನದಂದು ನರೇಶ್‌ ತುಟಿಗೆ ಪವಿತ್ರ ಲೋಕೇಶ್‌ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಅಭಿಮಾನಿಗಳು ಇಬ್ಬರೂ ಮದುವೆ ಆಗಿದ್ದಾರೆ ಅಂತಾ ಭಾವಿಸಿಕೊಂಡಿದ್ದರು. ಆದರೆ ಇದೀಗ ಅಸಲಿ ವಿಚಾರ ಬಯಲಾಗಿದ್ದು, ಸಿನಿಮಾದ ಪ್ರಮೋಷನ್‌ ಗಾಗಿ ಜೋಡಿ ಲಿಪ್‌ ಕಿಸ್‌, ಮದುವೆ, ಹನಿಮೂನ್‌ ಪೋಟೋಗಳನ್ನು ಹಂಚಿಕೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಹಿಂದುತ್ವವನ್ನು ಸುಳ್ಳಿನ ಮೇಲೆ ಕಟ್ಟಲಾಗಿದೆ ವಿವಾದಿತ ಟ್ವೀಟ್ ವೈರಲ್ : ನಟ ಚೇತನ್ ಕುಮಾರ್ ಅರೆಸ್ಟ್

ನರೇಶ್‌ ಹಾಗೂ ಪವಿತ್ರ ಲೋಕೇಶ್‌ ಲವ್‌ ಸ್ಟೋರಿಯ ಕಥೆಯನ್ನು ಹೊಂದಿರುವ ಸೆಕೆಂಡ್‌ ಇನ್ನಿಂಗ್ಸ್‌ ಸಿನಿಮಾಕ್ಕೆ ನರೇಶ್‌ ಬಂಡವಾಳ ಹೂಡಿದ್ದಾರೆ. ಸಿನಿಮಾ ಯಾವಾಗ ತೆರೆಗೆ ಬರಲಿದೆ ಅನ್ನೋದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಸಿನಿಮಾದ ಕುರಿತು ನರೇಶ್‌ ಅವರೇ ಸದ್ಯದಲ್ಲೇ ಮಾಹಿತಿ ನೀಡಲಿದ್ದಾರೆ ಎಂದು ನಿರ್ದೇಶಕ ರಾಜು ಹೇಳಿಕೊಂಡಿದ್ದಾರೆ.

Naresh-Pavitra Lokesh Marriage: Is Naresh-Pavitra Lokesh Marriage Real? Here’s the real deal

Comments are closed.