ಮಂಗಳೂರು : ಚಿಕನ್ ಸೆಂಟರ್ ನಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೊಹಮದ್ ಸಮೀರ್ ಹಾಗೂ ಮೊಹಮದ್ ಸಫಿಕ್ ಎಂಬವರೇ ಬಂಧಿತ ಆರೋಪಿಗಳು. ಮೂಡು ಪೆರರಾ ಗ್ರಾಮದ ಸೂರಲ್ಪಾಡಿ ಸಲ್ವಾ ಚಿಕನ್ ಸೆಂಟರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದರು.

ಸಾರ್ವಜನಿಕರ ದೂರಿನ ಹಿನ್ನೆಲೆ ಖಚಿತ ಮಾಹಿತಿಯ ಮೇರೆಗೆ ಬಜಪೆ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ 23 ಕೆ.ಜಿ. ದನದ ಮಾಂಸ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.