ಅಪ್ಪನದೇ ತದ್ರೂಪು ಜ್ಯೂನಿಯರ್ ಚಿರು…! ಅಭಿಮಾನಿಯ ಅಭಿಪ್ರಾಯಕ್ಕೆ ಮೇಘನಾ ಏನಂದ್ರು ಗೊತ್ತಾ…?!

ಯುವಸಾಮ್ರಾಟ್ ಚಿರು ಇನ್ನಿಲ್ಲವಾಗಿ ವರ್ಷವಾಗುತ್ತಾ ಬಂದರೂ ಅಭಿಮಾನಿಗಳು ಹಾಗೂ ಸರ್ಜಾ ಕುಟುಂಬ ದಲ್ಲಿ ಅನುಕ್ಷಣ ಜೀವಂತ. ಚಿರು ಹಾಗೂ ಜ್ಯೂನಿಯರ್ ಚಿರು  ಜೊತೆ ಅಭಿಮಾನಿಯು ಸಿದ್ಧಪಡಿಸಿದ‌ ಪೋಟೋ ಇದಕ್ಕೆ ಸಾಕ್ಷಿ.

ಆಗಾಗ ಮೇಘನಾ ರಾಜ್ ಚಿರು ಹಾಗೂ ಜ್ಯೂನಿಯರ್ ಚಿರು ಪೋಟೋ ಶೇರ್ ಮಾಡುತ್ತಾರೆ. ಆದರೆ ಈ ಭಾರಿ ಅಭಿಮಾನಿಯೊಬ್ಬ ಜ್ಯೂನಿಯರ್ ಚಿರು ಮತ್ತು ಚಿರಂಜೀವಿ ಸರ್ಜಾ ಬಾಲ್ಯದ ಪೋಟೋ ಶೇರ್ ಮಾಡಿದ್ದ.

ಚಿರು ಬಾಲ್ಯದ ಪೋಟೋ ಹಾಗೂ ಜ್ಯೂನಿಯರ್ ಚಿರು ಪೋಟೋ ನೋಡಿದರೇ  ಒಂದೇ ರೀತಿ ಕಾಣುತ್ತಾರೆ. ಚಿರು ತದ್ರೂಪಿನಂತೆ ಇದ್ದಾನೆ ಜ್ಯೂನಿಯರ್ ಚಿರು ಎಂದಿದ್ದಾನೆ.

ಅಭಿಮಾನಿ ಸಿದ್ಧಪಡಿಸಿದ ಈ ಕೋಲಾಜ್ ನ್ನು ಮೇಘನಾ ರಾಜ್ ಕೂಡ ಇಷ್ಟಪಟ್ಟಿದ್ದು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಒಂದೇ ರೀತಿ ಕಾಣಿಸುತ್ತಿದ್ದಾರೆ ಎಂಬ ಅಭಿಮಾನಿಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಮೊನ್ನೆ ಮೇಘನಾರಾಜ್ ಜ್ಯೂನಿಯರ್ ಚಿರುವನ್ನು ಎತ್ತಿ ಕೊಂಡಿರುವ ಪೋಟೋ ಹಂಚಿಕೊಂಡಿದ್ದರು.ಮುದ್ದಾದ ಪೋಟೋ ದಲ್ಲಿ ಮೇಘನಾ ನಗುತ್ತಿದ್ದರೇ ಜ್ಯೂನಿಯರ್ ಚಿರು ಕ್ಯಾಮರಾದತ್ತ ದಿಟ್ಟಿಸುತ್ತಿದ್ದ.

ಈಗ ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಚಿರು ಹಾಗೂ ಚಿರು ಪೋಟೋ ಸಖತ್ ವೈರಲ್ ಆಗಿದ್ದು ಫ್ಯಾನ್ಸ್ ಪೋಟೋ ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.

Comments are closed.