ಉಡುಪಿ : ಚಂಡಮಾರುತದಿಂದಾಗಿ ಸಮುದ್ರದಲ್ಲಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವಲ್ಲೇ ಕಾಪು ಬಳಿಯ ಸಮುದ್ರದಲ್ಲಿನ ಬಂಡೆಗಳ ಬೋಟ್ ಸಿಲುಕಿದ್ದು, 9 ಮಂದಿ ಸಿಬ್ಬಂದಿ ಸಹಾಯಕ್ಕೆ ಮೊರೆಯಿಟ್ಟಿದೆ.
ಬಂಡೆಗಳ ನಡುವಲ್ಲಿ ಸಿಲುಕಿರುವ ಬೋಟ್ ಯಾವುದೇ ಕ್ಷಣದಲ್ಲಿ ಯೂ ಮಗುಚುವ ಸಾಧ್ಯತೆ ಯಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ವಿಡಿಯೋ ಮೂಲಕ ರಕ್ಷಣೆಗೆ ಮನವಿ ಮಾಡಿದ್ದಾರೆ. ಆದರೆ ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ.
ಈಗಾಗಲೇ ಕೊಚ್ಚಿಯ ಕೋಸ್ಟ್ ಗಾರ್ಡ್ ಕಚೇರಿಗೆ ಸಿಬ್ಬಂದಿಗಳನ್ನು ಏರ್ ಲಿಫ್ಟ್ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಏರ್ ಲಿಫ್ಟ್ ಕಾರ್ಯ ಆರಂಭಗೊಂಡಿಲ್ಲ.
