ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಫಿಕ್ಸ್ : ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೆ ಲಾಕ್ ಡೌನ್ ವಿಸ್ತರಣೆಯಾಗೋದು ಖಚಿತ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಿದೆ.

ರಾಜ್ಯದಲ್ಲಿ ಈಗಾಗಲೇ ಲಾಕ್ ಡೌನ್ ಹೇರಿಕೆ ಮಾಡಲಾಗಿದೆ. ಮೇ 10 ರಂದು ಲಾಕ್ ಡೌನ್ ಹೇರಿಕೆಯಾದ ಬೆನ್ನಲ್ಲೇ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೆ ನಿತ್ಯವೂ ಸರಿ ಸುಮಾರು 40 ಸಾವಿರಕ್ಕೂ ‌ಅಧಿಕ ಸೋಂಕಿತ ಪ್ರಕರಣ ಪತ್ತೆಯಾಗುತ್ತಿದೆ. ಜೊತೆಗೆ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಸೋಂಕಿನ ಹರಡುವಿಕೆಯ ಪ್ರಮಾಣ ಏರಿಕೆಯಾಗಿದೆ. ಅಲ್ಲದೇ ಮರಣದ ಪ್ರಮಾಣವೂ ಹೆಚ್ಚುತ್ತಿದೆ.

ಮಹಾರಾಷ್ಟ್ರ, ‌ದೆಹಲಿ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಲಾಕ್ ಡೌನ್ ಹೇರಿಕೆ ಮಾಡಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಿವೆ. ಕರ್ನಾಟಕಕ್ಕಿಂತಲೂ ಕಡಿಮೆ ಸೋಂಕು ಇರುವ ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿಯೂ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ ಅನ್ನೋದನ್ನು ಕೋವಿಡ್ ತಾಂತ್ರಿಕ ಸಮಿತಿ ಈಗಾಗಲೇ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಅಲ್ಲದೇ ಸಚಿವರು,‌ ಶಾಸಕರು, ಪ್ರತಿಪಕ್ಷ‌ ನಾಯಕರು ಲಾಕ್ ಡೌನ್ ವಿಸ್ತರಣೆಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕನಿಷ್ಠ ಎರಡು ವಾರ ಲಾಕ್ ವಿಸ್ತರಣೆ ಆಗೋದು ಖಚಿತ ಎನ್ನಲಾಗು ತ್ತಿದೆ. ಆರಂಭದಲ್ಲಿ ಒಂದು ವಾರ ಮಾಡಿ ಮತ್ತೆ ಇನ್ನೊಂದು ವಾರ ವಿಸ್ತರಣೆ ಮಾಡುವ ಯೋಜನೆಯೂ ಸರಕಾರಕ್ಕಿದೆ.

ರಾಜ್ಯದಲ್ಲಿ ಸರಕಾರ ಪ್ರಸ್ತುತ ಅನಧಿಕೃತ ಲಾಕ್ ಡೌನ್ ಜಾರಿ ಮಾಡಿದೆ.‌ ಇದೀಗ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಲಾಕ್ ಡೌನ್ ಗೆ ಅಧಿಕೃತ ಮುದ್ರೆಯೊತ್ತುವ ಸಾಧ್ಯತೆಯೂ ಇದೆ. ಪ್ಯಾಕೇಜ್ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಜನರು ರಾಜ್ಯ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನೆರೆಯ ರಾಜ್ಯಗಳ ಮಾದರಿಯಲ್ಲಿಯೇ ಫ್ಯಾಕೇಜ್ ಘೋಷಣೆಗೆ ಮನಸ್ಸು ಮಾಡಿದಂತಿದೆ.

ಆಟೋ ಟ್ಯಾಕ್ಸಿ ಚಾಲಕರು, ಕಾರ್ಮಿಕ,‌ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಹಣಕಾಸಿನ ನೆರವು ನೀಡುವ ಸಾಧ್ಯತೆಯಿದೆ. ಬಡ ಹಾಗೂ ಮಧ್ಯಮ‌ ವರ್ಗದವರಿಗೆ ಮನೆ ಬಾಗಿಲಿಗೆ ಪುಡ್ ಕಿಟ್ ನೀಡಲು ಮುಂದಾಗಿದೆ. ಅಲ್ಲದೇ ಸ್ವಸಹಾಯ ಸಂಘಗಗಳಿಗೆ ಹಾಗೂ ದುಡಿಯುವ ವರ್ಗಕ್ಕೆ ಸುಲಭ ರೀತಿಯ ಸಾಲ ಸೌಲಭ್ಯ ಒದಗಿಸುವ ಸಾಧ್ಯತೆಯೂ ಇದೆ.

https://kannada.newsnext.live/one-rupees-get-1-lakh-big-offer/amp/

ರಾಜ್ಯ ಸರಕಾರ ಸಂಪೂರ್ಣ ಲಾಕ್ ಡೌನ್ ಹೇರಿಕೆ ಮಾಡಿದ್ರೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಈಗಾಗಲೇ ಎರಡನೇ ಅಲೆಯ ವೈಫಲ್ಯವನ್ನು ಸರಿ ಮಾಡಿಕೊಂಡು ಮೂರನೇ ಅಲೆಗೆ ಸಿದ್ದವಾಗಬೇಕಾದ ಸ್ಥಿತಿಯಲ್ಲಿದೆ ರಾಜ್ಯ ಸರಕಾರ‌.

https://kannada.newsnext.live/building-housing-al-jazeeera-office-in-gaza-hit-by-israeli-strike/

Comments are closed.