Brahmavara series theft : ಬ್ರಹ್ಮಾವರ : ಬಾರಕೂರು ಪೆಟ್ರೋಲ್‌ ಬಂಕ್‌ ಸೇರಿ ಸರಣಿ ಕಳ್ಳತನ

ಬ್ರಹ್ಮಾವರ : (Brahmavara series theft) ಪೆಟ್ರೋಲ್.‌ ನಂದಿನಿ ಮಿಲ್ಕ್‌ ಪಾರ್ಲರ್‌, ಗ್ಯಾರೇಜ್‌ಗಳಿಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮರಾ ಡಿವಿಆರ್‌ ಸೇರಿದಂತೆ ನಗದು ಕದ್ದು ಪರಾರಿಯಾಗಿರುವ ಘಟನೆ ಬ್ರಹ್ಮಾವರ ಸಮೀಪದ ಬಾರಕೂರಿನಲ್ಲಿ ನಡೆದಿದೆ.

ಆರಂಭದಲ್ಲಿ ಅಜಿತ್ ಕುಮಾರ್ ಶೆಟ್ಟಿಯವರ ಮಾಲಕತ್ವದ ಶ್ರೀ ಗಣೇಶ್ ಇಂಡಿಯನ್ ಆಯಿಲ್‌ ಪೆಟ್ರೋಲ್‌ ಬಂಕ್‌ಗೆ ನುಗ್ಗಿದ ಕಳ್ಳರು ಪೆಟ್ರೋಲ್‌ ಬಂಕ್‌ನಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ತಿರುಗಿಸಿ ನಂತರ ಕಚೇರಿಯ ಬಿಗ ಒಡೆದು ಒಳಗೆ ನುಗ್ಗಿದ್ದಾರೆ. ಪೆಟ್ರೋಲ್‌ ಬಂಕ್‌ನಲ್ಲಿ ಒಟ್ಟು 8 ಸಿಸಿ ಕ್ಯಾಮರಾಗಳಿದ್ದು, ಕಛೇರಿ ಹಿಂಭಾಗದಲ್ಲಿರುವ ಕ್ಯಾಮರಾಕ್ಕೆ ಸೊಪ್ಪು ಮತ್ತು ಬಟ್ಟೆ ಮುಚ್ಚಿ ಬಳಿಕ ಬೀಗ ಒಡೆದು 50 ಸಾವಿರ ರೂಪಾಯಿ ಕಳವು ಮಾಡಿದ್ದಾರೆ. ನಂತರದಲ್ಲಿ ತಮ್ಮ ಕೃತ್ಯ ಯಾರಿಗೂ ತಿಳಿಯಬಾರದು ಅನ್ನೋ ಕಾರಣಕ್ಕೆ ಸಿಸಿ ಕ್ಯಾಮರಾದ ಡಿವಿಆರ್‌ ಕದ್ದು ಪರಾರಿಯಾಗಿದ್ದಾರೆ.

ಇದನ್ನೂ ಓದಿ : Heavy rain alert : ಉಡುಪಿ,‌ ದ.ಕ‌ ಜಿಲ್ಲೆಯಲ್ಲಿ ಜೂನ್ 19ರ ವರೆಗೆ ಭಾರೀ ಮಳೆ

ಪೆಟ್ರೋಲ್‌ ಗಣೇಶ್‌ ಬಳೆಗಾರ್‌ ಮಾಲಕತ್ವದ ನಾಯಿರಾ ಪೆಟ್ರೋಲ್‌ ಬಂಕ್‌ ಹಾಗೂ ಆಟೋ ಗ್ಯಾಸ್‌ ನ ಬಂಕ್‌ನ ಸಿಸಿ ಕ್ಯಾಮರಾ ಡಿವಿಆರ್‌ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ. ಅಲ್ಲದೇ ಅಕ್ಕಪಕ್ಕದಲ್ಲಿರುವ ಗ್ಯಾರೇಜ್‌, ನಂದಿನಿ ಮಿಲ್ಕ್‌ ಪಾರ್ಲರ್‌ ಅಂಗಡಿಯ ಬಾಗಿಲು ಮುರಿದು ಕಳವು ಮಾಡಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ರಹ್ಮಾವರ ಠಾಣಾಧಿಕಾರಿ ರಾಜಶೇಖರ್‌ ವಂದಲಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ.

Brahmavara series theft : Brahmavara: Barakuru petrol station joined serial theft

Comments are closed.