ಮಂಗಳೂರು : CM Basavaraja Bommai : ಕರಾವಳಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸಾಲು ಸಾಲು ನೆತ್ತರು ಕೋಮು ದಳ್ಳುರಿಯ ಜ್ವಾಲೆಯನ್ನು ಮತ್ತಷ್ಟು ಕುದಿಸುತ್ತಿದೆ. ಕೇವಲ 10 ದಿನಗಳ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರು ಮರ್ಡರ್ ಆಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮಸೂದ್ ಹಾಗೂ ಫಾಜಿಲ್ ಮತ್ತು ಹಿಂದೂ ಸಮುದಾಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳು ಕರಾವಳಿಯಲ್ಲಿ ರಕ್ತಪಾತದ ಚರಿತ್ರೆಯನ್ನೇ ಬರೆಯುತ್ತಿದೆ.
ನಿನ್ನೆ ನೆಟ್ಟಾರುವಿನಲ್ಲಿರುವ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ವಿತರಿಸಿದ್ದ ಸಿಎಂ ಬೊಮ್ಮಾಯಿ ಇನ್ನೂ ಮಂಗಳೂರಿನಲ್ಲಿ ಇರಬೇಕಾದರೇ ಮಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಸುರತ್ಕಲ್ನಲ್ಲಿ ಫಾಜಿಲ್ ಎಂಬ ಯುವಕ ಬೀದಿ ಹೆಣವಾಗಿದ್ದಾನೆ. ಇದು ಮೇಲ್ನೋಟಕ್ಕೆ ಲವ್ಗೆ ಸಂಬಂಧಿಸಿದ ವಿಚಾರಕ್ಕೆ ನಡೆದ ಕೊಲೆಯಾಗಿದ್ದರೂ ಸಹ ನಡು ರಸ್ತೆಯಲ್ಲಿ ಇಷ್ಟೊಂದು ಧೈರ್ಯದಲ್ಲಿ ಕೊಲೆಗಳು ನಡೆಯುತ್ತಿರುವುದು ಭದ್ರತಾ ಇಲಾಖೆಯ ಮೇಲೆ ಬೊಟ್ಟು ಮಾಡಿ ತೋರಿಸುವಂತಿದೆ.
ಈ ಪ್ರಕರಣಗಳ ಸಂಬಂಧ ಇಂದು ಮಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಈ ಪ್ರಕರಣಗಳನ್ನು ಕೇವಲ ಕೊಲೆ ಪ್ರಕರಣಗಳೆಂದು ನೋಡುತ್ತಿಲ್ಲ. ಈ ಎಲ್ಲಾ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಫಾಜಿಲ್ ಕೊಲೆ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪಗಳ ಕುರಿತು ಗುಡುಗಿದ ಸಿಎಂ ಬೊಮ್ಮಾಯಿ ಆತ ಹೇಳಿದ್ದೆಲ್ಲ ವೇದವಾಕ್ಯವಲ್ಲ ಎಂದು ಏಕವಚನದಲ್ಲಿಯೇ ಆಕ್ರೋಶ ಹೊರ ಹಾಕಿದ್ದಾನೆ. ಕಾಂಗ್ರೆಸ್ ಪಕ್ಷದ ಆರೋಪಗಳು ಹಾಸ್ಯಾಸ್ಪದವಾಗಿದೆ. ನಾವು ಈ ಪ್ರಕರಣಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಯಾವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಈ ಸಂಬಂಧ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.
ಇದನ್ನು ಓದಿ : Fazil’s final darshan : ಫಾಜಿಲ್ ಹತ್ಯೆ ಪ್ರಕರಣ : ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
ಇದನ್ನೂ ಓದಿ : Siddaramaiah : ಬಸವರಾಜ ಬೊಮ್ಮಾಯಿಯನ್ನು ದುರ್ಬಲ ಮುಖ್ಯಮಂತ್ರಿ ಎಂದು ಕರೆದ ಸಿದ್ದರಾಮಯ್ಯ
CM Basavaraja Bommai spoke singularly against Siddaramaiah