Collapsed jetty :ಗಂಗೊಳ್ಳಿಯಲ್ಲಿ ಕುಸಿದ ಜೆಟ್ಟಿ : ಅವೈಜ್ಞಾನಿಕ ಕಾಮಗಾರಿ ವಿರುದ್ಧ ಮೀನುಗಾರರ ಆಕ್ರೋಶ

ಉಡುಪಿ : Collapsed jetty Gangolli : ರಾಜ್ಯ ಸರ್ಕಾರವು ಮೊದಲೇ 40 ಪರ್ಸೆಂಟ್​ ಕಮಿಷನ್​ ಸರ್ಕಾರ ಎಂಬ ಆರೋಪವನ್ನು ಎದುರಿಸುತ್ತಲೇ ಇದೆ. ಈ ಮಾತಿಗೆ ಪುಷ್ಠಿ ಎಂಬಂತೆ ಅಲ್ಲಲ್ಲಿ ಅವೈಜ್ಞಾನಿಕ ಕಾಮಗಾರಿಗಳು ಬಯಲಿಗೆ ಬರುತ್ತಲೇ ಇದ್ದು ವಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಜೀವ ಬಂದಂತೆ ಆಗುತ್ತಿದೆ. ನಾವು ಯಾವುದೇ ಕಾಮಗಾರಿಗಳಲ್ಲಿ ಕಮಿಷನ್​ ಪಡೆದಿಲ್ಲ ಎಂದು ಬಿಜೆಪಿ ನಾಯಕರು ಸಮರ್ಥನೆ ನೀಡುತ್ತಿದ್ದರೂ ಸಹ ಇಂತಹ ಕಳಪೆ ಕಾಮಗಾರಿಗಳು ರಾಜ್ಯ ಸರ್ಕಾರದ ಆಡಳಿತ ವೈಖರಿಯತ್ತ ಬೆರಳು ಮಾಡಿ ತೋರಿಸುವಂತೆ ಮಾಡುತ್ತಿದೆ. ಇದೀಗ ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿಯೂ ಅವೈಜ್ಞಾನಿಕ ಕಾಮಗಾರಿಗೆ ಕೈಗನ್ನಡಿ ಎಂಬಂತಹ ಘಟನೆಯೊಂದು ನಡೆದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ 150 ಮೀಟರ್​ಗೂ ಅಧಿಕ ಉದ್ದವನ್ನು ಹೊಂದಿದ್ದ ಜೆಟ್ಟಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದೆ. ಹಳೆ ಜೆಟ್ಟಿ ಆಧಾರವಾಗಿ ಇದ್ದ ರಾಡ್​ ತುಂಡರಿಸಿದ ಪರಿಣಾಮ ಜೆಟ್ಟಿ ಕುಸಿದು ಬಿದ್ದಿದೆ. ಇದು ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಈ ರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸದ್ಯ ನಡೆಯುತ್ತಿರುವ ಕಾಮಗಾರಿ ಮಾಡಿದ ಪಿಲ್ಲರ್​ ಮೇಲೆ ಹಳೆ ಜೆಟ್ಟಿ ಕುಸಿದು ಬಿದ್ದ ಪರಿಣಾಮ ಅನೇಕ ಪಿಲ್ಲರ್​ಗಳಿಗೆ ಹಾನಿಯುಂಟಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನ, ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯ ಮೀನುಗಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬರೋಬ್ಬರಿ 12 ಕೋಟಿ ರೂಪಾಯಿ ಮೌಲ್ಯದಲ್ಲಿ ನೂತನ ಜೆಟ್ಟಿ ಕಾಮಗಾರಿಯನ್ನು ನಡೆಸಲಾಗುತ್ತಿತ್ತು.

https://www.youtube.com/watch?v=q0jJWxBJ2Ps

13 ವರ್ಷದ ಹಿಂದೆ ಗಂಗೊಳ್ಳಿ ಜೆಟ್ಟಿ ನಿರ್ಮಾಣ ಮಾಡಲಾಗಿತ್ತು.ಇದೀಗ ನೂತನ ಜೆಟ್ಟಿ ನಿರ್ಮಾಣವಾಗುತ್ತೆ ಅಂತಾ ಸ್ಥಳೀಯ ಮೀನುಗಾರರು ಖುಷಿ ಪಟ್ಟಿದ್ದರು. ಆದರೆ ಇದೀಗ ಜೆಟ್ಟಿ ಭಾಗ ಕುಸಿದಿದ್ದು ಪ್ರಸ್ತುತ ಮೀನು ಖಾಲಿ ಮಾಡಲು ಮೀನುಗಾರರು ಭಟ್ಕಳ ಇಲ್ಲವೇ ಮಲ್ಪೆಗೆ ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. 40 ದೊಡ್ಡ ದೊಡ್ಡ ಬೋಟುಗಳು, 100ಕ್ಕೂ ಅಧಿಕ ಟ್ರಾಲ್​ ಬೋಟುಗಳು, ಸಿಂಗಲ್​ ಬೋಟುಗಳು ಹಾಗೂ ಮುನ್ನೂರಕ್ಕೂ ಅಧಿಕ ನಾಡದೋಣಿ ಮಾಲೀಕರಿಗೆ ಈ ಜೆಟ್ಟಿಯ ಅವಶ್ಯಕತೆಯಿತ್ತು. ಜೆಟ್ಟಿ ಕುಸಿತದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಸ್ಥಳೀಯರು 40 ಪರ್ಸೆಂಟ್​ ಸರ್ಕಾರ ಅಂತಾ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನು ಓದಿ : IAS officer rebukes girl:ಸ್ಯಾನಿಟರಿ ಪ್ಯಾಡ್​ ಬೇಕೆಂದು ಕೇಳಿದ ಬಾಲಕಿಗೆ ಉಚಿತ ಕಾಂಡೋಮ್​ ಬೇಕಾ ಎಂದ ಮಹಿಳಾ ಅಧಿಕಾರಿ : ವ್ಯಾಪಕ ಆಕ್ರೋಶ

ಇದನ್ನೂ ಓದಿ : Suryakumar Yadav : ಸಿಕ್ಸ್ ಹಿಟ್ಟಿಂಗ್‌ನಲ್ಲಿ ಪಾಕಿಸ್ತಾನದ ರಿಜ್ವಾನ್ ರೆಕಾರ್ಡ್ ಪೀಸ್ ಪೀಸ್.. ಹೊಸ ವಿಶ್ವದಾಖಲೆ ಬರೆದ ಸೂರ್ಯಕುಮಾರ್ ಯಾದವ್

Collapsed jetty in Gangolli: Fishermen protest against unscientific work

Comments are closed.