ಮಂಗಳೂರು: (College lecturer committed suicide) ಕಾಲೇಜು ಉಪನ್ಯಾಸಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಡಿ ಎಂಬಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು ಅಮಿತಾ (34 ವರ್ಷ) ಎಂದು ಗುರುತಿಸಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣಗಳು ಏನೆಂಬುದು ತಿಳಿದುಬಂದಿಲ್ಲ.
ಇವರು ಅತ್ಯಂತ ಕ್ರಿಯಾಶೀಲ ಮಹಿಳೆಯಾಗಿದ್ದು, ಮಂಗಳೂರಿನ ವಾಮಪದವು ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ ಹನ್ನೆರಡು ವರ್ಷಗಳು ಕಳೆದಿವೆ. ಓರ್ವ ಪುತ್ರಿಯೂ ಕೂಡ ಇವರಿಗಿದ್ದಾಳೆ. ಶಿಕ್ಷಕಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಸಂದರ್ಭದಲ್ಲಿ ತಮ್ಮ ಬೆಡ್ ರೂಮಿನ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣಗಳು ಇದುವರೆಗೂ ತಿಳಿದುಬಂದಿಲ್ಲ.
ಅಮಿತಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಸೋಮವಾರದಂದು ಕಾಲೇಜಿಗೆ ಆಗಮಿಸಿದ್ದ ಅಮಿತ ಅವರು ಸಂಜೆ ವೇಳೆ ಕಾಲೇಜು ಮುಗಿಸಿ ಗಂಡನ ಮನೆಗೆ ತೆರಳಿದ್ದರು. ಗಂಡನ ಮನೆಗೆ ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸರು ಅಸಹಜ ಸಾಹು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಿಕ್ಷಕಿ ತಮ್ಮ ಮಗಳು ಹಾಗೂ ಕುಟುಂಬವನ್ನು ಅಗಲಿದ್ದಾರೆ.
ವಿದ್ಯಾರ್ಥಿಗಳಿಗೆ ಕಲುಷಿತ ಆಹಾರ ಪೂರೈಕೆ: ಸಿಟಿ ಕಾಲೇಜು ವಿರುದ್ಧ ದೂರು
ಮಂಗಳೂರು ಸಿಟಿ ಹಾಸ್ಪಿಟಲ್ ಅಧೀನದಲ್ಲಿರುವ ಖಾಸಗಿ ಕಾಲೇಜು ಸಿಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿಷಾಹಾರ ಸೇವಿಸಿ 130 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ತಂಡವು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುವ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಇದೇ ವೇಳೆ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಡಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : Constable committed suicide: ಕುಂದಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ
ಇದನ್ನೂ ಓದಿ : ಬೆಳ್ತಂಗಡಿ ಲಾಡ್ಜ್ ಗಳ ಮೇಲೆ ವಿಶೇಷ ಪೊಲೀಸರ ದಾಳಿ
College lecturer committed suicide: Mangalore: College lecturer committed suicide by hanging