H D Kumaraswamy :ಕುಮಾರಸ್ವಾಮಿ ಪ್ರಲ್ಹಾದ್ ಜೋಶಿಯನ್ನುದ್ದೇಶಿಸಿ ಹೇಳಿದ ದೇಶಸ್ಥ ಬ್ರಾಹ್ಮಣರು ಅಂದ್ರೆ ಯಾರು?

ಇದೀಗ ಇಡೀ ರಾಜ್ಯ (Karnataka) ದಲ್ಲಿ ಬ್ರಾಹ್ಮಣ ಮುಖ್ಯಮಂತ್ರಿಯದ್ದೇ (Brahmin Chief Minister) ಮಾತು, ಬಿಜೆಪಿಗೆ (BJP) ವೊಟ್ ಹಾಕಿದ್ರೆ ಸಿಎಂ ಆಗೋದು “ದೇಶಸ್ಥ ಬ್ರಾಹ್ಮಣ” ಕೇಂದ್ರ ಕಲ್ಲಿದ್ದಲು ಸಚಿವ (Union Minister, Coal and Mines of India) ಪ್ರಲ್ಹಾದ್ ಜೋಶಿ (Pralhad Joshi). ಅವ್ರು ನಮ್ಮ ಕರ್ನಾಟಕ (Karnataka) ಮೂಲದ ಬ್ರಾಹ್ಮಣರಲ್ಲ, ನೋಡ್ಕೊಂಡ್ ಮತ ಹಾಕಿ ಅನ್ನೋ ಹೆಚ್ ಡಿ ಕುಮಾರಸ್ವಾಮಿ (H D Kumaraswamy) ಮಾತು ಹೆಚ್ ಡಿ ಕುಮಾರಸ್ವಾಮಿ ಆಡಿದ ಆ ಒಂದೇ ಒಂದು ಹೇಳಿಕೆ, ಯಾಕೆ? ಬ್ರಾಹ್ಮಣರು ಸಿಎಂ ಆಗ್ಲೇಬಾರ್ದಾ? ಎಂಬ ಪ್ರಶ್ನೆ ಹುಟ್ಟಿಸಿದೆ. ಹಾಗಾದ್ರೆ ಯಾರು ಈ ದೇಶಸ್ಥ ಬ್ರಾಹ್ಮಣರು? ನಾವ್ ಹೇಳ್ತೀವಿ ಕೇಳಿ.

ದೇಶಸ್ಥ ಎಂಬ ಪದವು ಸಂಸ್ಕೃತದ ದೇಶ ಮತ್ತು ಸ್ಥ ಅಂದ್ರೆ ನಿವಾಸಿ ಎಂಬುದರಿಂದ ಹುಟ್ಟಿಕೊಂಡಿದೆ. ಕೃಷ್ಣಾ ಮತ್ತು ಗೋದಾವರಿ ನದಿಗಳ ಕಣಿವೆಗಳು ಮತ್ತು ಪಶ್ಚಿಮ ಘಟ್ಟಗಳ ಪಕ್ಕದಲ್ಲಿರುವ ದಖ್ಖನ್ ಪ್ರಸ್ಥಭೂಮಿ ದೇಶಸ್ಥ ಬ್ರಾಹ್ಮಣರು ಮೂಲ ಎನ್ನಲಾಗುತ್ತೆ.

ಎಲ್ಲೆಲ್ಲ ವಾಸಿಸ್ತಾರೆ?
ದೇಶಸ್ಥ ಬ್ರಾಹ್ಮಣರು, ಹಿಂದೂ ಬ್ರಾಹ್ಮಣ ಉಪಸಂಸ್ಕೃತಿ. ಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ದೇಶಸ್ಥ ಬ್ರಾಹ್ಮಣರು ವಾಸಿಸುತ್ತಾರೆ.

ಈ ಎಲ್ಲ ಸರ್‌ನೇಮ್‌ಗಳಿವೆ
ಎಲ್ಲ ಸಮುದಾಯಗಳಲ್ಲಿ ಇರುವಂತೆ ದೇಶಸ್ಥ ಬ್ರಾಹ್ಮಣರಲ್ಲಿ ಸಹ ಹಲವು ಸರ್‌ನೇಮ್‌ಗಳಿವೆ. ಅಂದ್ರೆ ಉಪನಾಮಗಳು. ದೇಶಪಾಂಡೆ, ದೇಶಮುಖ್, ಜೋಶಿ, ಪಾಟೀಲ್, ಗಡ್ಕರಿ ಮತ್ತು ದೇಸಾಯಿ ಇವುಗಳೆಲ್ಲ ದೇಶಸ್ಥ ಬ್ರಾಹ್ಮಣರ ಸರ್‌ನೇಮ್‌ಗಳು. ಮರಾಠಿ ಸಮುದಾಯದಲ್ಲೂ ಈ ಉಪನಾಮಗಳಿದ್ದರೂ ಸಹ ದೇಶಸ್ಥ ಬ್ರಾಹ್ಮಣರಲ್ಲೂ ಬಳಕೆಯಲ್ಲಿದೆ. ಈ ಉಪನಾಮಗಳೆಲ್ಲ ಬಹುತೇಕ ಹಿಂದಿನ ಕಾಲದ ವೃತ್ತಿ ಸೂಚಕಗಳೇ ಆಗಿದ್ದವು.

ದೇಶಸ್ಥರಲ್ಲೇ ವೇದಗಳನ್ನು ಅಧ್ಯಯನ ಮಾಡುವ ದೇಶಸ್ಥರನ್ನು ವೈದಿಕ ಎಂದು ಕರೆಯಲಾಗ್ತಿತ್ತು. ಜ್ಯೋತಿಷಿಗಳನ್ನು ಜೋಷಿ ಎಂದು, ವೈದ್ಯಕೀಯ ವಿಜ್ಞಾನದ ಅಭ್ಯಾಸ ಮಾಡುವವರನ್ನು ವೈದ್ಯರು ಎಂದು ಕರೆಯಲಾಗ್ತಿತ್ತು. ಪುರಾಣಗಳನ್ನು ಪಠಿಸುವವರನ್ನು ಪುರಾಣಿಕರು ಎಂದು ಕರೆಯಲಾಗುತ್ತದೆ.

ಇತಿಹಾಸದ ಪುಟ ತೆರೆಯುತ್ತಾ ಹೋದ್ರೆ ಬಿಚ್ಚಿಕೊಳ್ಳೋದಿಷ್ಟು..

ಇತಿಹಾಸ ನೊಡೋದಾದ್ರೆ ದೇಶಸ್ಥ ಬ್ರಾಹ್ಮಣರಲ್ಲಿ ಹಲವು ಮಹಾಮಹಿಮರು ಆಗಿಹೊಗಿದ್ದಾರೆ. ಭಾಸ್ಕರ II ರಂತಹ ಗಣಿತಶಾಸ್ತ್ರಜ್ಞರನ್ನು, ಭವಭೂತಿಯಂತಹ ಸಂಸ್ಕೃತ ವಿದ್ವಾಂಸರು ದೇಶಸ್ಥ ಬ್ರಾಹ್ಮಣರೇ ಆಗಿದ್ರಂತೆ. ಭಕ್ತಿ ಸಂತರಾದ ಜ್ಞಾನೇಶ್ವರ, ಶ್ರೀಪಾದರಾಜ, ಏಕನಾಥ, ಪುರಂದರ ದಾಸ, ಸಮರ್ಥ ರಾಮದಾಸ್ ಮತ್ತು ವಿಜಯ ದಾಸ, ತರ್ಕಶಾಸ್ತ್ರಜ್ಞರಾದ ಜಯತೀರ್ಥ ಮತ್ತು ವ್ಯಾಸತೀರ್ಥ ಮುಂತಾದವರೆಲ್ಲ ಪೂರ್ವದಲ್ಲಿ ದೇಶಸ್ಥ ಬ್ರಾಹ್ಮಣರಾಗಿದ್ರು ಅನ್ನುತ್ತೆ ಇತಿಹಾಸ.

ಅಂದಹಾಗೆ ಬಹು ಹಿಂದಿನಿಂದಲೂ ದೇಶಸ್ಥ ಬ್ರಾಹ್ಮಣರ ಸಾಂಪ್ರದಾಯಿಕ ಉದ್ಯೋಗ ಪೌರೋಹಿತ್ಯ ಮತ್ತು ಗ್ರಾಮ ಲೆಕ್ಕಿಗ ವೃತ್ತಿ. ಜೊತೆಗೆ ಆಡಳಿತಕ್ಕೆ ಸಂಬಂಧಿಸಿದ ವೃತ್ತಿಗಳಲ್ಲೇ ದೇಶಸ್ಥರು ಫೇಮಸ್ ಆಗಿದ್ದರು. ಪೇಶ್ವೆ, ದಿವಾನ್, ದೇಶಪಾಂಡೆ ಅಥವಾ ಜಿಲ್ಲಾ ಲೆಕ್ಕಾಧಿಕಾರಿಗಳು, ದೇಶಮುಖ್, ಪಾಟೀಲ್ ಮುಂತಾದ ಹುದ್ದೆಗಳು ದೇಶಸ್ಥ ಬ್ರಾಹ್ಮಣರ ಪಾಲಾಗಿದ್ದವು.

ದೇಶಸ್ಥ ಬ್ರಾಹ್ಮಣರ ಮೇಲುಗೈ
ಅದ್ರಲ್ಲೂ ಮಹಾರಾಷ್ಟ್ರದ ರಾಜಕೀಯ, ಸಮಾಜ ಮತ್ತು ಸಂಸ್ಕೃತಿಯಲ್ಲಿ ದೇಶಸ್ಥ ಬ್ರಾಹ್ಮಣರು ಬಹುತೇಕ ಆರಂಭದಿಂದಲೂ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. ಉನ್ನತ ಹುದ್ದೆಗಳು ಮತ್ತು ಆಡಳಿತದ ವಿವಿಧ ಹಂತಗಳಲ್ಲಿ ದೇಶಸ್ಥ ಬ್ರಾಹ್ಮಣರೇ ಮೇಲುಗೈ ಸಾಧಿಸಿದ್ದರು.

ಇದನ್ನೂ ಓದಿ : Bengaluru Airport Closed : ಬೆಂಗಳೂರು ವಿಮಾನ ನಿಲ್ದಾಣ 10 ದಿನಗಳ ಕಾಲ ಬಂದ್

ಶಿವಾಜಿ ಕಾಲದಲ್ಲಿ ಏನಾಗಿತ್ತು?
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತದಲ್ಲೂ ದೇಶಸ್ಥ ಬ್ರಾಹ್ಮಣರು ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಸದ್ಯದ ವಿವಾದಕ್ಕೆ ಕಾರಣವಾದ ಹೇಳಿಕೆ ಛತ್ರಪತಿ ಶಿವಾಜಿ ಕುರಿತಾದದ್ದು. ಶಿವಾಜಿಯ ಹೆಚ್ಚಿನ ಪ್ರಮುಖ ಬ್ರಾಹ್ಮಣ ಅಧಿಕಾರಿಗಳು ದೇಶಸ್ಥ ಬ್ರಾಹ್ಮಣರೇ ಆಗಿದ್ದರು. ಇದೇ ಅಂಶವನ್ನಿಟ್ಟುಕೊಂಡು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಲ್ಹಾದ್ ಜೋಶಿ ಅವರನ್ನು ಟೀಕಿಸಿದ್ದು. ದೀಪಾವಳಿಯ ದಿನವೇ 1796ರಲ್ಲಿ ಶೈವ ಚಿತ್ಪಾವನ ಬ್ರಾಹ್ಮಣನಾದ 2ನೇ ಬಾಜಿರಾವ್ ಪೇಶ್ವೆಯು ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದಾ ಮಠದ ಮೇಲೆ ದಾಳಿ ಮಾಡಿದ್ದ ಎನ್ನಲಾಗುತ್ತೆ. ಆಗ ಆತನ ಮರಾಠಾ ಸೈನಿಕರು ಶೃಂಗೇರಿ ಮಠದ ಸಂಪತ್ತನ್ನು ಲೂಟಿ ಮಾಡಿದ್ದರು. ಈ ಘಟನೆಯನ್ನೇ ಮುಂದಿಟ್ಟುಕೊಂಡು ಮಾಜಿ ಸಿಎಂ ಕುಮಾರಸ್ವಾಮಿ “ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿ ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ ಶಿವಾಜಿ ಮತ್ತು ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಮರಾಠಿ ಪೇಶ್ವೆಗಳ ಮೂಲದ ವ್ಯಕ್ತಿಯನ್ನು ರಾಜ್ಯದ ಮೇಲೆ ಹೇರಲು ಬಿಜೆಪಿ ಹೊರಟಿದೆ. ಅದಕ್ಕೆ ನನ್ನ ವಿರೋಧವಿದೆ” ಎಂದು ಹೇಳಿದ್ದಾರೆ.

ಒಟ್ಟಾರೆ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯ ದೇಶಸ್ಥ ಬ್ರಾಹ್ಮಣ ಪದದ ಹಿಂದೆ ಹುಡುಕುತ್ತಾ ಹೋದರೆ ಇತಿಹಾಸದ ಪುಟ ಪುಟಗಳಲ್ಲೂ ಕುತೂಹಲಕಾರಿ ವಿಷಯಗಳು ಹೊರಬರೋದಂತೂ ಸತ್ಯ!

ಇದನ್ನೂ ಓದಿ : Congress party symbol : ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಸರ್ಕಸ್: ಪಕ್ಷದ ಚಿಹ್ನೆ ಬದಲಿಸಿದ ನಾಯಕರು

(What is the Meaning of Deshasta Brahimin? H D Kumaraswamy and Pralhad Joshi Controversy)

Comments are closed.