ಉಡುಪಿ: (Cow hug day in udupi) ಇತ್ತೀಚೆಗಷ್ಟೇ ಪ್ರಾಣಿ ಕಲ್ಯಾಣ ಮಂಡಳಿ ಪ್ರೇಮಿಗಳ ದಿನದಂದು ಗೋ ಅಪ್ಪುಗೆ ದಿನವನ್ನು ಆಚರಿಸುವಂತೆ ಆದೇಶ ಹೊರಡಿಸಿತ್ತು. ಆದರೆ ವಿವಾದದ ನಡುವೆ ಈ ಆದೇಶವನ್ನು ಪ್ರಾಣಿ ಕಲ್ಯಾಣ ಮಂಡಳಿ ಕೈಬಿಟ್ಟಿತ್ತು. ಆದರೆ ಉಡುಪಿಯ ಮಣಿಪಾಲದ ಶಿವಪಾಡಿ ದೇವಸ್ಥಾನದಲ್ಲಿ ಗೋ ಆಲಿಂಗನ ಮಾಡುವ ಮೂಲಕ ಗೋ ಅಪ್ಪುಗೆಯ ದಿನವನ್ನು ಆಚರಿಸಲಾಯಿತು.
ಮುದ್ದಾಗಿರುವ ಆಕಳು ಕರುಗಳನ್ನು ನೋಡಿದರೆ ಅಪ್ಪಿಕೊಳ್ಳಬೇಕು ಎನ್ನುವಷ್ಟು ಮುಗ್ಧತೆ. ಈ ಮುಗ್ದ ಕರುಗಳ ಮೈದಡವುತ್ತಿರೂ ಪ್ರಣಿಪ್ರೀಯರು. ಇದು ಪ್ರೇಮಿಗಳ ದಿನದಂದು ಉಡುಪಿಯಲ್ಲಿ ಆಚರಿಸಿದ ವಿಶಿಷ್ಟ ಪ್ರೇಮಿಗಳ ದಿನಾಚರಣೆಯ ತುಣುಕು. ಗೋ ಆಲಿಂಗನ ಸೂಚನೆಯನ್ನು ಪಾಲಿಸುವಂತೆ ಪ್ರೇಮಿಗಳ ದಿನದಂದು ಮಣಿಪಾಲದ ಉಮಾಮಹೇಶ್ವರ ದೇವಸ್ಥಾನದಲ್ಲಿ ಗೋ ಆಲಿಂಗನ ಮಾಡಿ ಗೋ ಪೂಜೆ ಮಾಡಿ ಸಂಭ್ರಮಿಸಿದರು. ಆಕಳ ಕರುಗಳ ಎದುರು ಕುಳಿತು ಕರುಗಳನ್ನು ಅಪ್ಪಿ ಕುಳಿತು ಫೋಟೋ ತೆಗೆದುಕೊಂಡು ಆನಂದಿಸಿದರು.
ಒಟ್ಟಾರೆಯಾಗಿ ಪ್ರಾಣಿ ಕಲ್ಯಾಣ ಮಂಡಳಿಯ ಆದೇಶದಂತೆ ಉಡುಪಿಯಲ್ಲಿ ಗೋ ಆಲಿಂಗನ ನಡೆದಿದ್ದು, ಈ ಗೋ ಆಲಿಂಗನ, ಗೋ ಪೂಜೆ ವಿಚಿತ್ರ ಎನಿಸಿದರೂ ವಿಭಿನ್ನ ಕೂಡ ಹೌದು. ಪಶ್ಚಿಮದ ಸಂಸ್ಕೃತಿಯ ಪ್ರಗತಿಯಿಂದಾಗಿ ವೈದಿಕ ಸಂಪ್ರದಾಯಗಳು ಅಳಿವಿನ ಅಂಚಿನಲ್ಲಿದೆ. ಪಶ್ಚಿಮದ ನಾಗರಿಕತೆ ನಮ್ಮ ಭೌತಿಕ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯುವಂತೆ ಮಾಡಿದೆ. ಪ್ರಾಣಿ ಮಂಡಳಿಯ ಪ್ರಕಾರ, ಹಸುವಿನಿಂದ ಸಿಗುವ ಅಪಾರ ಪ್ರಯೋಜನಗಳಿಂದಾಗಿ ಅದನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಹಾಗೂ ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ದಕ್ಷಿಣ ಕನ್ನಡ: ಕುಕ್ಕೆ, ಧರ್ಮಸ್ಥಳಕ್ಕೆ ರಾಜ್ಯಪಾಲರ ಭೇಟಿ
ಇದನ್ನೂ ಓದಿ : Drug consumption case: ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಅರೆಸ್ಟ್
ಭಾರತೀಯ ಸಂಸ್ಕೃತಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಹಸು ಬೆನ್ನೆಲುಬಾಗಿದೆ ಹಾಗೂ ಹಸು ನಮ್ಮ ಜೀವನಕ್ಕೆ ನೆರವಾಗುವ ಜಾನುವಾರು ಸಂಪತ್ತು ಹಾಗೂ ಜೀವವೈವಿಧ್ಯತೆಯನ್ನು ಪ್ರತಿನಿಧಿಸುವ ಪ್ರಾಣಿಯಾಗಿದೆ. ಹಸು ಮನುಕುಲವನ್ನು ತಾಯಿಯಂತೆ ಪೋಷಣೆಯ ಪ್ರಕೃತಿ ಹೊಂದಿರುವುದರಿಂದ ಕಾಮಧೇನು ಹಾಗೂ ಗೋಮಾತೆ ಎಂದು ಕರೆಸಿಕೊಳ್ಳುತ್ತದೆ
Cow hug day in udupi: Cow hug day in Udupi on Valentine’s Day