Valentine’s Day : ವ್ಯಾಲಂಟೈನ್ಸ್ ಡೇ ಸ್ಪೆಷಲ್ : ಟೀಸರ್ ರಿಲೀಸ್ ಮಾಡಿದ ‘ಬಾನ ದಾರಿಯಲ್ಲಿ’ ಸಿನಿತಂಡ

ಸ್ಯಾಂಡಲ್‌ವುಡ್‌ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ಟೀಸರನ್ನು ವ್ಯಾಲಂಟೈನ್ಸ್ ಡೇ (Valentine’s Day) ಸ್ಪೆಷಲ್ ಆಗಿ ಸಿನಿತಂಡ ರಿಲೀಸ್‌ ಮಾಡಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ರೊಮ್ಯಾಂಟಿಕ್ ಲವ್‌ಸ್ಟೋರಿಯಲ್ಲಿ ನಟ ಗಣೇಶ್‌ ಜೊತೆಯಾಗಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸ್ತಿದ್ದಾರೆ.

ನಟ ಗಣೇಶ್‌ ಹಾಗೂ ಪ್ರೀತಂ ಕಾಂಬಿನೇಷನ್‌ನಲ್ಲಿ ಈಗಾಗಲೇ 3 ಸಿನಿಮಾಗಳು ಬಂದಿವೆ. ಇದೀಗ 4ನೇ ಸಿನಿಮಾವಾದ ‘ಬಾನ ದಾರಿಯಲ್ಲಿ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀವಾರೆ ಟಾಕೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪ್ರೀತಂ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ತಿ ಡೈಲಾಗ್ಸ್ ಸಿನಿಮಾಕ್ಕಿದೆ. ಮೊದಲ ನೋಟದಲ್ಲೇ ಸಿನಿಮಾ ಟೀಸರ್ ಸಖತ್ ಕಿಕ್ ಕೊಡುತ್ತಿದೆ. ಭಾವನಾತ್ಮಕ ಸನ್ನಿವೇಶಗಳನ್ನು ಗಣೇಶ್ ನಟನೆ ಸಿನಿಪ್ರೇಕ್ಷಕರನ್ನು ಮೋಡಿ ಮಾಡಲಿದೆ.

“ತ್ರಿಬಲ್ ರೈಡಿಂಗ್” ನಂತರ ಗಣಿ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಟೀಸರ್ ಹಿಟ್ ಆಗಿದೆ. ಟೀಸರ್‌ನಲ್ಲಿ ಇದು ಪ್ರೀತಿಕಥೆ ಅಲ್ಲ, ಪ್ರೀತಿಯ ಕುರಿತಾದ ಕಥೆ ಎಂದು ಸಿನಿತಂಡ ಹೇಳಿದೆ. ‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಗಣೇಶ್ ಕ್ರಿಕೆಟರ್ ಪಾತ್ರದಲ್ಲಿ ಮಿಂಚಿದ್ರೆ, ನಾಯಕಿ ರುಕ್ಮಿಣಿ ಸ್ವಿಮ್ಮಿಂಗ್ ಕೋಚ್ ಲೀಲಾ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಪ್ರೀತಿ, ಪಜೀತಿಯ ಕಥೆ ಸಿನಿಮಾದಲ್ಲಿದೆ. ಲವ್ ಸ್ಟೋರಿ ಸಿನಿಮಾಗಳನ್ನು ಮಾಡುವುದರಲ್ಲಿ ಪ್ರೀತಂ ಎತ್ತಿದ್ದ ಕೈ ಎನ್ನಲಾಗಿದೆ. ಈ ಬಾರಿ ಕೂಡ ಒಂದೊಳ್ಳೆ ಪ್ರೇಮಕಥೆಯನ್ನು ಕಟ್ಟಿಕೊಟ್ಟಿರೋದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮಕಥೆಯಂತೆ ಕಂಡರೂ ಬಹುತೇಕ ಕಥೆ ನಟ ಗಣೇಶ್ ಹಾಗೂ ರುಕ್ಮಿಣಿ ಪಾತ್ರಗಳ ಸುತ್ತಾ ಸುತ್ತುವಂತೆ ಕಾಣುತ್ತಿದೆ.

‘ಬಾನ ದಾರಿಯಲ್ಲಿ’ ಸಿನಿಮಾಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಟೀಸರ್ ಬಿಜಿಎಂ ಸಖತ್ ಕಿಕ್ ಕೊಡುತ್ತಿದೆ. ಇನ್ನು ಅದ್ಭುತ ಲೊಕೇಶನ್‌ಗಳಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಸಿಜಿ ವರ್ಕ್ ಕೂಡ ಸೊಗಸಾಗಿದೆ. ಗಣಿ ಕ್ರಿಕೆಟರ್ ಆಗಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸ್ತಿದ್ದು, ರುಕ್ಮಿಣಿ, ರೀಷ್ಮಾ ಗ್ಲಾಮರ್ ಟಚ್ ಸಿನಿಮಾಕ್ಕಿದೆ. ಟೀಸರ್ ಭರವಸೆ ಮೂಡಿಸಿದ್ದು, ಅಭಿಮಾನಿಗಳು ಗಣಿ ಈಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ. ‘ಗಾಳಿಪಟ- 2’ ನಂತರ ಬಂದ ‘ತ್ರಿಬಲ್ ರೈಡಿಂಗ್’ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ‘ಬಾನ ದಾರಿಯಲ್ಲಿ’ ಸಿನಿಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಹುಟ್ಟು ಹಾಕಿದೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಲವ್‌ ಕಹಾನಿ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ : Deepika Das : ದುಬೈ ಟ್ರಿಪ್‌ನಲ್ಲಿ ಕ್ರಿಸ್ ಗೇಲ್ ಜತೆಗಿನ ಫೋಟೊ ಹಂಚಿಕೊಂಡ ದೀಪಿಕಾ ದಾಸ್ : ವೈರಲ್‌ ಆಯ್ತು ಪೋಟೋ

ಇದನ್ನೂ ಓದಿ : ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿರುವ ಸ್ಯಾಂಡಲ್‌ವುಡ್‌ನ ಲವ್‌ಸ್ಟೋರಿ ಸಿನಿಮಾಗಳು ಯಾವುವು ಗೊತ್ತಾ ?

ಪ್ರೀತಿಗೆ ಯಾವುದೇ ಭಾಷೆ ಇಲ್ಲ, ಪ್ರೀತಿಗೆ ಇರೋದು ಹೃದಯದ ಚಿಹ್ನೆ ಮಾತ್ರ ಎಂದು ಗಣಿ ಹೇಳುವ ಡೈಲಾಗ್ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಟೀಸರ್ ನೋಡುತ್ತಿದ್ದರೆ,ಇದೊಂದು ಎಮೋಷನಲ್ ಲವ್‌ಸ್ಟೋರಿ ಅನ್ನೋದು ಗೊತ್ತಾಗುತ್ತಿದೆ. ಇನ್ನು ಎಮೋಷನಲ್ ಸನ್ನಿವೇಶಗಳಲ್ಲಿ ಗಣೇಶ್ ಅದ್ಭುತವಾಗಿ ನಟಿಸುತ್ತಾರೆ. ಟೀಸರ್‌ನಲ್ಲೇ ಅದರ ಝಲಕ್ ನೋಡಬಹುದು. ಇಡೀ ಸಿನಿಮಾ ಇದೇ ರೀತಿ ಪ್ರೇಕ್ಷಕರನ್ನು ಕಾಡುವ ಸುಳಿವು ಸಿಗುತ್ತಿದೆ. ಬೆಂಗಳೂರು, ಚೆನ್ನೈ, ಮಂಗಳೂರು ಹಾಗೂ ಕೀನ್ಯಾದಲ್ಲಿ ಸಿನಿಮಾ ಶೂಟಿಂಗ್ ನಡೆಸಿದ್ದಾರೆ. ಅಪ್ಪು ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿತ್ತು. ಆದರೆ ‘ಕಬ್ಜ’ ಸಿನಿಮಾ ಕೂಡ ಅದೇ ದಿನ ಬರುತ್ತಿರುವುದರಿಂದ ‘ಬಾನ ದಾರಿಯಲ್ಲಿ’ ರಿಲೀಸ್ ಡೇಟ್ ಬದಲಾಗುವ ಸಾಧ್ಯತೆಯಿದೆ.

Valentine’s Day Special : Actor Ganesh starrer Baana Daariyalli released teaser

Comments are closed.