Mangalore : ಸರಕಾರಿ ಕಚೇರಿಯಲ್ಲಿ ಹಲ್ಲೆ ಪ್ರಕರಣ : ಉಪನ್ಯಾಸಕರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆಂದ ಆರೋಪಿ !

ಮಂಗಳೂರು : ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ ( ಡಯಟ್‌ ) ಕಚೇರಿಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲಿಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ನವೀನ್ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ. ಲೆಕ್ಚರರ್ ವೀಣಾ ನನ್ನ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಲೆಕ್ಚರರ್ ವೀಣಾ ನನ್ನನ್ನು ಅವಮಾನಿಸಿ, ಕಿರುಕುಳ ನೀಡುತ್ತಿದ್ದರು. ಅವರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದು, ಅದರಿಂದ ನನಗೆ ತೊಂದರೆಯಾಗುತ್ತಿದೆ ಎಂದಿದ್ದಾನೆ.

ಇದನ್ನೂ ಓದಿ: ಮಂಗಳೂರು ಡಯಟ್‌ನಲ್ಲಿ ತಲವಾರು ದಾಳಿ : ಆರೋಪಿ ಕುಂದಾಪುರದ ನವೀನ್‌ ಅರೆಸ್ಟ್‌

ಇದೇ ಕಾರಣಕ್ಕೆ ನಿನ್ನೆ ಬ್ಲ್ಯಾಕ್ ಮ್ಯಾಜಿಕ್ ತೆಗೆಯುವಂತೆ ಹೇಳಲು ಕಚೇರಿಗೆ ಬಂದಿದ್ದೆ. ಆದರೆ ವೀಣಾ ಆಫೀಸಿಗೆ ಬಂದಿಲ್ಲ ಎಂದು ಹೇಳಿದರು. ಇದರಿಂದ ಕೋಪ ಬಂದು ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: High Alert : ಕರಾವಳಿಯಲ್ಲಿ ಹೈ ಅಲರ್ಟ್‌ : ಹಬ್ಬದ ಹೊತ್ತಲ್ಲೇ ಸ್ಪೋಟಕ್ಕೆ ಉಗ್ರರ ಟಾರ್ಗೇಟ್‌ !

ಸರ್ಕಾರಿ ಕಚೇರಿಗೆ ನುಗ್ಗಿದ್ದ ಆರೋಪಿ ನವೀನ್ ಅಲ್ಲಿನ ಮೂವರು ಮಹಿಳೆಯರು, ನಿರ್ಮಲಾ, ರೀನಾ ರಾಯ್ ಹಾಗೂ ಗುಣವತಿ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ. ಗಾಯಗೊಂಡವರಲ್ಲಿ ನಿರ್ಮಲಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

(Naveen accused during trial Lecturer Veena says she has done black magic on me.)

Comments are closed.