Drunk and Drive: ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಟೆಂಪೋ ಚಲಾಯಿಸಿದ ಚಾಲಕ: ಬೈಕ್ ಸವಾರನಿಂದ ಕಪಾಳಮೋಕ್ಷ

ಉಡುಪಿ: (Drunk and Drive) ಟೆಂಪೋ ಚಾಲಕನೋರ್ವ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಎರಡು ಬೈಕ್‌ ಗಳನ್ನು ಜಖಂ ಮಾಡಿ ನಂತರದಲ್ಲಿ ಬೀದಿಯಲ್ಲಿ ರಂಪಾಟ ಮಾಡಿದ ಘಟನೆ ನಗರದ ಹೊರವಲಯದ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಉಡುಪಿ ನಗರದ ಡಯಾನದ ಕುಕ್ಕಿಕಟ್ಟೆ ನಿವಾಸಿ ದಿನೇಶ ಎಂಬಾತ ತನ್ನ ಟೆಂಪೋವನ್ನು ಬೀಡಿನಗುಡ್ಡೆಯಿಂದ ಡಯಾನ ಕಡೆ ಚಲಾಯಿಸುತ್ತಿದ್ದು, ಸರ್ಕಲ್‌ ಬಳಿಯಲ್ಲಿ ಟೆಂಪೋವನ್ನು ಅತೀ ವೇಗವಾಗಿ ಚಲಾಯಿಸಿ ಬೈಕ್‌ ಚಾಲಕನಿಗೆ ಢಿಕ್ಕಿ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ ಬೈಕ್‌ ಚಾಲಕನಿಗೆ ಟೆಂಪೋ ಚಾಲಕ ಗದರಿಸಿದ್ದು, ಕೋಪಗೊಂಡ ಬೈಕ್‌ ಸವಾರ ಟೆಂಪೋ ಚಾಲಕನ ಕಪಾಳಕ್ಕೆ ಹೊಡೆದಿದ್ದಾನೆ.

ಇದರಿಂದ ಕೋಪಗೊಂಡ ಟೆಂಪೋ ಚಾಲಕ ಟೆಂಪೋವನ್ನು ಬೈಕ್‌ ಮೇಲೆ ಹತ್ತಿಸಿದ್ದ. ತಕ್ಷಣವೇ ಬೈಕ್‌ ಸವಾರ ಹಾಗೂ ಸಹಸವಾರರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಬೈಕ್‌ ನಿಂದ ಹಾರಿದ್ದಾರೆ. ನಂತರದಲ್ಲಿ ಟೆಂಪೋ ಅಡಿಗೆ ಬಿದ್ದ ಬೈಕ್‌ ಅನ್ನು ಕುಡಿದ ಮತ್ತಿನಲ್ಲಿದ್ದ ಚಾಲಕ ಎಳೆದು ಹೊರತೆಗೆದು ರಸ್ತೆಯ ಮಧ್ಯೆ ಎಸೆದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಟೆಂಪೋ ವನ್ನು ಹಿಂದಕ್ಕೆ ಚಲಾಯಿಸಿದ್ದು, ಹಿಂದಿನಿಂದ ಬರುತ್ತಿದ್ದ ಇನ್ನೊಂದು ಬೈಕ್‌ ಗೆ ಢಿಕ್ಕಿ ಹೊಡೆದಿದ್ದು, ಅ ಬೈಕ್‌ ಕೂಡ ಟೆಂಪೋ ಅಡಿಗೆ ಬಿದ್ದಿದೆ.

ಸದ್ಯ ಬೈಕ್‌ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾನೆ. ಇನ್ನೂ ಕುಡಿದ ಮತ್ತಿನಲ್ಲಿದ್ದ ಚಾಲಕ ಟೆಂಪೋವನ್ನು ಹಿಂದಕ್ಕೆ ಚಲಾಯಿಸುವಾಗ ಅಲ್ಲೇ ನಿಂತಿದ್ದ ಮಹಿಳೆ ಹಾಗೂ ಇನ್ನೂ ಐದು ಮಂದಿ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೇ ಕುಡಿದ ಮತ್ತಿನಲ್ಲಿದ್ದ ಚಾಲಕ ರಸ್ತೆಯಿಡಿ ತಿರುಗಾಡಿ ರಸ್ತೆಬದಿಯಲ್ಲಿ ನಿಂತಿದ್ದ ಇನ್ನೊಂದು ಟೆಂಪೋ ಒಂದರ ಹೆಡ್‌ ಲೈಟ್‌ ಅನ್ನು ಕೂಡ ಪುಡಿಮಾಡಿದ್ದಾನೆ.

ಇದನ್ನೂ ಓದಿ : Karkala Suicide case: ಡೆತ್‌ ನೋಟ್‌ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಚಾಲಕ ಆತ್ಮಹತ್ಯೆ

ಇದನ್ನೂ ಓದಿ : Sexual assault case: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: 20 ವರ್ಷ ಜೈಲು 50 ಸಾವಿರ ದಂಡ

ಇದನ್ನೂ ಓದಿ : Dharmasthala: ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಘಟನೆಯ ವಿಷಯ ತಿಳಿದ ಪೊಲೀಸರು ಟೆಂಪೋ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Drunk and Drive: Drunk and speeding driver in Udupi: slapped by biker

Comments are closed.