ಅಸಂಘಟಿತ ಕಾರ್ಮಿಕರು ಇ- ಶ್ರಮ್‌ನಲ್ಲಿ ಹೆಸರು ನೋಂದಾಯಿಸಿ : ಡಿಸಿ ಡಾ.ಕೆ. ವಿದ್ಯಾಕುಮಾರಿ

ಅಸಂಘಟಿತ ಕಾರ್ಮಿಕರು ಭವಿಷ್ಯಕ್ಕಾಗಿ ಸರಕಾರಿ ಯೋಜನೆಗಳನ್ನು ಪಡೆಯಲು ತಪ್ಪದೇ ಇ-ಶ್ರಮ್‌ನಲ್ಲಿ (E-shram card)‌ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು

ಉಡುಪಿ : ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳೂ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಅಸಂಘಟಿತ ಕಾರ್ಮಿಕರು ಭವಿಷ್ಯದಲ್ಲಿ ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ತಪ್ಪದೇ ಇ-ಶ್ರಮ್‌ನಲ್ಲಿ (E-shram card)‌ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಮಿಕ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ (DC Dr. K Vidyakumari) ಹೇಳಿದರು.

ಸರಕಾರ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವರ್ಗಗಳ ಕಾರ್ಮಿಕರುಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ, ಕಾರ್ಮಿಕರಿಗೆ ವಿಶೇಷ ನೀತಿಗಳು, ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಮಗ್ರ ದತ್ತಾಂಶವಿದ್ದಾಗ ಮಾತ್ರ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಸಾಧ್ಯ. ಈ ಹಿನ್ನೆಲೆ ಪ್ರತಿಯೊಬ್ಬರೂ ಇ-ಶ್ರಮ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಇ-ಶ್ರಮ್‌ ಯೋಜನೆಯಡಿ 1,85,791 ಜನ ನೋಂದಾಯಿಸಿಕೊಂಡಿದ್ದಾರೆ. ಉಳಿದವರು ಸಹ ನೋಂದಾಯಿಸಿಕೊಳ್ಳಬೇಕು.

E-shram card : Unorganized workers register name in e-shram : DC Dr.K. Vidyakumari
Image Credit to Original Source

ಇ-ಶ್ರಮ್‌ ನೋಂದಾಣಿಗೆ ಬೇಕಾಗುವ ದಾಖಲೆಗಳ ವಿವರ :
ಇ-ಶ್ರಮ್ ನಲ್ಲಿ ನೋಂದಾಯಿಸಲು ಕಾರ್ಮಿಕರು ಆಧಾರ್ ಕಾರ್ಡ್‌ನೊಂದಿಗೆ ತಮ್ಮ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯತೆಯ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆಯ ವಿವರ ಇತ್ಯಾದಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಹಾಗೆಯೇ ಅಧಿಕೃತ ವೆಬ್‌ ಸೈಟ್‌ ಆದ https eshram.gov.inನಲ್ಲಿಯೂ ನೋಂದಾಯಿಸಲು ಅವಕಾಶವಿದೆ.

ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, 18 ರಿಂದ 40 ವರ್ಷದೊಳಗಿನ ಅಂಗಡಿ ಮಾಲಿಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಎಣ್ಣೆ ಗಿರಣಿ ಮಾಲೀಕರು, ವರ್ಕ್ ಶಾಪ್ ಮಾಲೀಕರು, ಕಮಿಷನ್ ಎಜೆಂಟ್ ಗಳು, ರಿಯಲ್ ಎಸ್ಟೇಟ್ ಬ್ರೋಕರ್ಗಳು, ಸಣ್ಣ ಹೋಟೆಲ್ ರೆಸ್ಟೋರೆಂಟ್‌ಗಳ ಮಾಲೀಕರು ಸೇರಿದಂತೆ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡ ಸ್ವಯಂ ಉದ್ಯೋಗಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

E-shram card : Unorganized workers register name in e-shram : DC Dr.K. Vidyakumari
Image Credit -Varthabhavan 

ಸಮಾಜದಲ್ಲಿನ ಅನಿಷ್ಠ ಪದ್ಧತಿಯಾದ ಬಾಲ ಕಾರ್ಮಿಕ ಪದ್ಧತಿಯನ್ನು ಜಿಲ್ಲೆಯಲ್ಲಿ ಹೋಗಲಾಡಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಬಾಲ ಕಾರ್ಮಿಕರುಗಳನ್ನು ನೇಮಿಸಿಕೊಂಡಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ : ವಾಣಿಜ್ಯ ಸಿಲಿಂಡರ್‌ ಬೆಲೆ : ಎಲ್‌ಪಿಜಿ ಗ್ಯಾಸ್‌ ಬೆಲೆ 158 ರೂ.ಕಡಿತ : ನಿಮ್ಮೂರಲ್ಲಿ ಎಷ್ಟು ಬೆಲೆ ಪರಿಶೀಲಿಸಿ

ಮಲ್ಪೆ ಹಾಗೂ ಗಂಗೊಳ್ಳಿಯ ಬಂದರುಗಳಲ್ಲಿ ಮಕ್ಕಳು ಮೀನನ್ನು ಆಯುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಆಗಿದ್ದಾಂಗೆ ಅಧಿಕಾರಿಗಳು ಅನಿರೀಕ್ಷಿತ ದಾಳಿಗಳನ್ನು ಮಾಡಬೇಕು ಎಂದ ಅವರು, ಬಾಲಕಾರ್ಮಿಕರು ಒಂದೊಮ್ಮೆ ಸಿಕ್ಕಿದ್ದಲ್ಲಿ ಅವರುಗಳಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು. ಸರಕಾರ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಆತ್ಮನಿರ್ಭರ ಯೋಜನೆಯಡಿ 10,000 ರೂ. ಸಾಲವನ್ನು ಪ್ರಥಮ ಬಾರಿ ನೀಡಿದ್ದು, ಅವುಗಳನ್ನು ಹಿಂದಿರುಗಿಸಿದವರಿಗೆ 20,000 ರೂ. ವರೆಗೆ ಸಾಲವನ್ನು ನೀಡಲಾಗುತ್ತಿತ್ತು. ಇದು ಮುಂದುವರೆದು 20,000 ರೂ. ಸಾಲವನ್ನು ತೀರಿಸಿದವರಿಗೆ 50,000 ರೂ. ವರೆಗೆ ಸಾಲವನ್ನು ವಿತರಿಸಲಾಗುವುದು. ಇದರ ಲಾಭವನ್ನು ಪಡೆಯಬೇಕೆಂದರು. ಇದನ್ನೂ ಓದಿ : ನಿಮ್ಮ ಆಧಾರ್‌ ಕಾರ್ಡ್‌ನ್ನು ಯಾರೆಲ್ಲಾ ಬಳಸುತ್ತಿದ್ದಾರೆ ಗೊತ್ತಾ ? ಮೊಬೈಲ್‌ನಲ್ಲೇ ಪರಿಶೀಲಿಸಿಕೊಳ್ಳಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಇ-ಶ್ರಮ್ನಲ್ಲಿ ನೋಂದಾಯಿಸಲು ಇತರೆ ಇಲಾಖೆಗಳ ಸಹಯೋಗದೊಂದಿಗೆ ನೋಂದಣಿ ಶಿಬಿರಗಳನ್ನು ಏರ್ಪಡಿಸಿ, ಹೆಚ್ಚಿನ ನೋಂದಣಿ ಮಾಡಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್ , ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ವರ್ಗದ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

E-shram card : Unorganized workers register name in e-shram : DC Dr.K. Vidyakumari

Comments are closed.