ಜೂನ್‌ 1 ರಿಂದ ಮೀನುಗಾರಿಕೆ ನಿಷೇಧ ; 2 ತಿಂಗಳು, ಕರಾವಳಿಯಲ್ಲಿ ಮೀನುಗಾರಿಕೆ ಬ್ರೇಕ್‌

ಉಡುಪಿ/ ಮಂಗಳೂರು : (Fishing Banned) ಕಳೆದ ಹತ್ತು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಮೀನುಗಾರಿಕೆಗೆ ಬ್ರೇಕ್‌ ಬೀಳಲಿದೆ. ಜೂನ್‌ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ಎಲ್ಲಾ ಯಾಂತ್ರೀಕೃತ ದೋಣಿಹಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರಿಕೃತ ದೋಣಿ ಮತ್ತು ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆದರೆ ನಾಡದೋಣಿ ಹಾಗೂ ಸಾಂಪ್ರದಾಯಿಕ ಕರಾವಳಿ ಮೀನುಗಾರಿಕೆಯನ್ನು ನಡೆಸಲು ಅನುಮತಿ ನೀಡಲಾಗಿದೆ. ಅಲ್ಲದೇ ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯ ಸಾಮರ್ಥ್ಯದ ಮೋಟಾರಿಕೃತ ಇಂಜಿನ್‌ ಬಳಕೆ ಮಾಡಬಹುದಾಗಿದೆ.

ಇಲಾಖೆ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸುವ ದೋಣಿ ಹಾಗೂ ಮೀನುಗಾರರ ವಿರುದ್ದ ಕರ್ನಾಟಕ ಕಡಲು ಮೀನುಗಾರಿಕೆ ಕಾಯ್ದೆ ೧೯೮೬ರ ಅಡಿಯಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗಲಿದ್ದಾರೆ. ಅಲ್ಲದೇ ಒಂದು ವರ್ಷಗಳ ಅವಧಿಗೆ ಡಿಸೇಲ್‌ ಮೇಲಿನ ಸಹಾಯಧನ ಪಡೆಯಲು ಅನರ್ಹತೆಯನ್ನು ಪಡೆದುಕೊಳ್ಳಲಿದ್ದಾರೆ. ಮೀನುಗಾರರ ಹಿತದೃಷ್ಟಿಯಿಂದ ಹೊರಡಿಸಿರುವ ಆದೇಶವನ್ನು ಪಾಲನೆ ಮಾಡುವಂತೆ ಮೀನುಗಾರಿಕಾ ಜಂಟಿ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿನ ಎರಡು ತಿಂಗಳ ಕಾಲ ಮೀನುಗಳು ಮೊಟ್ಟೆ ಇಡುವ ಅವಧಿಯಾಗಿರುವ ಹಿನ್ನೆಲೆಯಲ್ಲಿ ವರ್ಷಂಪ್ರತಿ ಮೀನುಗಾರಿಕೆಯನ್ನು (Fishing Banned) ನಿಷೇಧಿಸಲಾಗುತ್ತದೆ. ಕರಾವಳಿಯ ಮಲ್ಪೆ, ಮಂಗಳೂರು, ಹೆಜಮಾಡಿ, ಹಂಗಾರಕಟ್ಟೆ, ಗಂಗೊಳ್ಳಿ, ಭಟ್ಕಳ, ಹೊನ್ನಾವರ, ತದಡಿ, ಬೇಲೆಕೇರಿ ಬಂದರುಗಳ ಮೂಲಕ ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಲಿವೆ.

ಮಂಗಳೂರು ದಕ್ಕೆಯಲ್ಲಿ ಪರ್ಸಿನ್‌ ಹಾಗೂ ಟ್ರಾಲ್‌ ಬೋಟ್‌ ಸೇರಿದಂತೆ ಒಟ್ಟು 1,400 ಬೋಟುಗಳಿದ್ರೆ, ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಗಂಗೊಳ್ಳಿ ಬಂದರಿನಲ್ಲಿ ಒಟ್ಟು 2166 ಬೋಟುಗಳು ವರ್ಷಂಪ್ರತಿ ಮೀನುಗಾರಿಕೆಯನ್ನು ನಡೆಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮೀನುಗಾರಿಕೆಯಿಂದ ಸಾವಿರಾರು ಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಮೀನುಗಾರರು ಕೊಂಚ ನಿರಾಳರಾಗಿದ್ರು. ಕಳೆದ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆ ಪ್ರತಿಕೂಲ ಹವಾಮಾನವಿದ್ದು, ಸರಿಯಾದ ಸಮಯದಲ್ಲಿಯೇ ತೂಫಾನ್‌ ಆಗಿರುವುದು ಮೀನುಗಾರಿಕೆಗೆ ವರದಾನವಾಗಿ ಪರಿಣಮಿಸಿತ್ತು.

ಮೀನುಗಾರಿಕೆ ವಿವರ :
ದಕ್ಷಿಣ ಕನ್ನಡ ಜಿಲ್ಲೆ
2020-21 : 1.39 ಲಕ್ಷ ಮೆ.ಟನ್‌- 1924.50 ಕೋಟಿ
2021-22 : 2.91 ಲಕ್ಷ ಮೆ.ಟನ್‌- 3801.60 ಕೋಟಿ

ಉಡುಪಿ ಜಿಲ್ಲೆ
2020-21 : 1.04 ಲಕ್ಷ ಮೆ.ಟನ್‌ -1109.58 ಕೋಟಿ
2021-22 : 1.80 ಲಕ್ಷ ಮೆ.ಟನ್‌ -1850 ಕೋಟಿ ರೂ.

ಇದನ್ನೂ ಓದಿ : ಮುಂದಿನ 3 ಗಂಟೆಯಲ್ಲಿ ಬಿರುಗಾಳಿ ಮಳೆ : ಉಡುಪಿ, ಚಿಕ್ಕಮಗಳೂರು, ದ.ಕ., ಶಿವಮೊಗ್ಗ ಜಿಲ್ಲೆಗೆ ಎಚ್ಚರಿಕೆ

ಇದನ್ನೂ ಓದಿ : ಟಾಟಾ ಸುಮೋ ಕ್ರೂಸರ್ ಅಪಘಾತ: 7 ಸಾವು, ಒಬ್ಬರಿಗೆ ಗಂಭೀರ ಗಾಯ

Comments are closed.