Haladi Srinivasa Shetty retires: ಹಾಲಾಡಿಯವರು ರಾಜಕೀಯ ನಿವೃತ್ತಿ ಘೋಷಿಸಿರುವುದು ಸ್ವಂತ ನಿರ್ಧಾರವೇ ? ಈ ಬಗ್ಗೆ ಜನರ ಅಭಿಪ್ರಾಯವೇನು..

ಕುಂದಾಪುರ : ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಪಡೆದಿರುವ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivasa Shetty retires) ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸ್ನೇಹಿತ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಟಿಕೆಟ್ ನೀಡುವಂತೆ ಖುದ್ದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಬಿಜೆಪಿ ಹೈಕಮಾಂಡ್ಗೆ ಸೂಚಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಿರಣ್ ಕೊಡ್ಗಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸೋಲಿಲ್ಲದ ಸರದಾರ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಈ ರಾಜಕೀಯ ನಿವೃತ್ತಿ ತೀರ್ಮಾನಕ್ಕೆ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಹಲವರು ಅವರನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಹಾಲಾಡಿಯವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವುದು ಸಕಾಲಿಕ ನಿರ್ಧಾರವೇ ಎಂಬ ಪ್ರಶ್ನೆಗೆ ಜನರಿಂದ ಬಂದ ಉತ್ತರ ಹೀಗಿದೆ.

ಹೌದು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದ ಕಾಲದಲ್ಲಿಯೇ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಸೋಲಿನ ರುಚಿ ನೀಡುವ ಮೂಲಕ ಬಿಜೆಪಿ ಪಕ್ಷಕ್ಕೆ ನೆಲೆ ಕಲ್ಪಿಸಿಕೊಟ್ಟವರು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು. ನಂತರದಲ್ಲಿ ಅಶೋಕ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ ಅವರನ್ನೂ ಸೋಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನಂತರ ಪಕ್ಷೇತರರಾಗಿ ಸ್ಪರ್ಧಿಸಿ ಕ್ಷೇತ್ರದಲ್ಲಿ ಪ್ರಚಾರವನ್ನೇ ಮಾಡದೇ ಗೆಲುವು ಕಂಡಿದ್ದ ಖ್ಯಾತಿಗೆ ಹಾಲಾಡಿಯವರು ಪಾತ್ರರಾಗಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಹಲವು ಪ್ರಯೋಗಗಳನ್ನು ನಡೆಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದರೂ ಕೂಡ ಬಿಜೆಪಿ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಜಾತೀವಾರು ರಾಜಕೀಯ ಲೆಕ್ಕಾಚಾರವನ್ನು ನಡೆಸುತ್ತಿದೆ. ಇದೀಗ ವಯಸ್ಸು ಹಾಗೂ ಜಾತಿಯ ಲೆಕ್ಕಾಚಾರದಡಿಯಲ್ಲಿ ಹಾಲಾಡಿ ನಿವೃತ್ತಿ ಘೋಷಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇನ್ನೊಂದು ಕಡೆಯಲ್ಲಿ ಇನ್ನೊಬ್ಬರಿಗೆ ಅವಕಾಶ ಕಲ್ಪಿಸುವ ಸಲುವಾಗಿಯೇ ಹಾಲಾಡಿವರು ನಿವೃತ್ತಿ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸ್ವತಃ ಹಾಲಾಡಿಯವರೇ ನಿವೃತ್ತಿ ಘೋಷಣೆಗೂ ಮುನ್ನ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಕುಂದಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸು ಕಂಡಿದ್ದ ಹಾಲಾಡಿಯವರು ಸ್ವತಃ ತಾವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳಿಗೆ ಒಂದೊಮ್ಮೆ ಶಾಕ್‌ ನೀಡಿತ್ತು. ಸತತ ಐದು ಬಾರಿ ಶಾಸಕರಾಗಿದ್ದರೂ ಕೂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಬಿಜೆಪಿ ಸಚಿವ ಸ್ಥಾನ ನೀಡದೇ ವಂಚಿಸಿದೆ ಅನ್ನೋ ನೋವು ಕ್ಷೇತ್ರದ ಮತದಾರರು ಹಾಗೂ ಅಭಿಮಾನಿಗಳದ್ದು. ಸಚಿವ ಸ್ಥಾನ ನೀಡುವುದಾಗಿ ಹೇಳಿ ವಿಧಾನಸೌಧಕ್ಕೆ ಕರೆಯಿಸಿ ಬರಿಗೈಯಲ್ಲಿ ಅವರನ್ನು ಕಳುಹಿಸಿದ ಕಹಿ ನೆನಪು ಇಂದಿಗೂ ಮಾಸಿಲ್ಲ. ಈ ಮಧ್ಯೆ ಹಾಲಾಡಿಯವರು ನಿವೃತ್ತಿ ಘೋಷಿಸಿರುವುದು ಸಕಾಲಿಕ ನಿರ್ಧಾರವೇ ಎಂಬ ಪ್ರಶ್ನೆಗೆ ಅವರ ಅಭಿಮಾನಿಗಳು ಉತ್ತರ ಕೊಟ್ಟಿದ್ದು ಹೀಗೆ..

“ರೇಪಿಸ್ಟರು, ರೌಡಿಗಳು ಬಂದರು, ಇವರನ್ನು ಕಾಯೋಕೆ ಪೊಲೀಸರು ಬಿಜೆಪಿಗೆ ಬಂದಾಯಿತು. ಇನ್ನೂ ಬಿಜೆಪಿಯಲ್ಲಿ ಸಜ್ಜನರಿಲ್ಲ. ಈ ಕಾರಣಕ್ಕೆ ಶೆಟ್ರು ಹೊರಗೆ ಬಂದರಷ್ಟೇ” ಎಂದು ಒಬ್ಬರು ಹೇಳಿದರೆ, “ಕಲ್ಲಡ್ಕನಿಗೆ ದುಡ್ಡು ಕೊಟ್ಟರೆ ಮಂತ್ರಿ ಮಾಡ್ತಿದ್ದ ” ಎಂದು ಇನ್ನೊಬ್ಬರು ಹೇಳಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಹಾಲಾಡಿಯವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದೊಮ್ಮೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ನೀಡದೇ ಇದ್ರೆ ಈ ಬಾರಿ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಲ್ಲ ಎಂಬ ಮಾತುಗಳು ಕೇಳಿಬಂದಿದೆ.

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ದಿಸುವ ಕುರಿತು ಕೊನೆಗೂ ಮೌನ ಮುರಿದ ಅನಿತಾ ಕುಮಾರಸ್ವಾಮಿ

Haladi Srinivasa Shetty retires: Is Haladi’s decision to retire from politics his own decision? What do people think about this?

Comments are closed.