Heavy Rain Alert in Coastal‌ : ಮುಂದಿನ 4 ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : (Heavy Rain Alert in Coastal) ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶವಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೂ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಸೂಚಿಸಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಜೂನ್‌ 18ರವರೆಗೂ ಭಾರೀ ಮಳೆಯಾಗಲಿದ್ದು, ಬಿತ್ತನೆ ಬೀಜ ಮೊಳಕೆ ಒಡೆದು ಹಸಿರಾಗಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ರಾತ್ರಿ ಕೂಡ ಗುಡುಗು ಮಿಂಚಿನೊಂದಿಗೆ ಮಳೆಯಾಗಿದ್ದು, ಇಂದು ಕೂಡ ಅದೇ ರೀತಿ ಮಳೆಯಾಗುವ ಸಾಧ್ಯತೆ ಇರುತ್ತದೆ. ಇನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡುಗು, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಒಣಹವೆ ಮುಂದುವರೆಯಲಿದೆ , ಕಾರವಾರ, ಹೊಸಕೋಟೆ, ತಿಪಟೂರು, ಗೋಣಿಕೊಪ್ಪಲು, ಕೋಟ, ಹೊನ್ನಾವರ, ಮಾಲೂರು, ಅಂಕೋಲಾ, ಮಂಕಿ, ಬೆಳ್ತಂಗಡಿ, ಹುನಸೂರು, ಕದ್ರಾ, ಬೇಲಿಕೇರಿ, ಪುತ್ತೂರು, ಕುಂದಾಪುರ, ಜ್ಞಾನಭಾರತಿ, ದೊಡ್ಡಬಳ್ಳಾಪುರ, ಟೀ ನರಸೀಪುರ, ಸರಗೂರು, ಭಾಗಮಂಡಲದಲ್ಲಿ ಕೂಡ ಮಳೆಯಾಗಲಿದೆ.

ಇದನ್ನೂ ಓದಿ : Shimoga Airport : ಶಿವಮೊಗ್ಗ ವಿಮಾನ ನಿಲ್ದಾಣ ರಾಜ್ಯ ಸರಕಾರದಿಂದ ನಿರ್ವಹಣೆ

ಚಂಡಮಾರುತ ಅಲೆಯಿಂದ ಕರಾವಳಿ ಭಾಗದಲ್ಲಿ ಕಡಲ ಕೊರೆತ ತಡೆಯಲು ಹಾಕಿದ್ದ ತಡೆಗೋಡೆ ಕೂಡ ಕುಸಿದಿದ್ದು, ಈ ಭಾಗದ ಜನರು ಆತಂಕಗೊಂಡಿದ್ದಾರೆ. ಹೀಗಾಗಿ ಸರಕಾರ ಈ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಕಡಲ್ಕೊರೆತ ತಡೆಯಲು ಕಲ್ಲುಗಳನ್ನು ಹಾಕುವ ಕೆಲಸ ಕೂಡ ಜಿಲ್ಲಾಡಳಿತ ಪ್ರಾರಂಭಿಸಿದೆ.

Heavy Rain Alert in Coastal: There is a possibility of heavy rain in the southern hinterland and coast of the state for the next 4 days

Comments are closed.