ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ : ಜುಲೈ 1ರ ವರೆಗೆ ಯೆಲ್ಲೋ ಅಲರ್ಟ್‌

ಉಡುಪಿ : Yellow alert : ಕರಾವಳಿಯಲ್ಲಿ ಕಳೆದೊಂದು ವಾರದಿಂದಲೂ ಉತ್ತಮ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯಿಂದಲೂ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ಹೆಬ್ರಿ, ಕಾಪು, ಉಡುಪಿ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಜುಲೈ 1ರ ವರೆಗೆ ಜಿಲ್ಲಾಡಳಿತ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಇಂದು ಮುಂಜಾನೆಯಿಂದಲೇ ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಸರಾಸರಿ 42.6 ಮಿ.ಮೀ. ಮಳೆ ಸುರಿದಿದ್ದು, ಕಾಪುವಿನಲ್ಲಿ 54 ಮಿ.ಮೀ. ಹೆಬ್ರಿಯಲ್ಲಿ 51.9 ಮಿ.ಮೀ., ಬ್ರಹ್ಮಾವರದಲ್ಲಿ 47.2 ಮಿ.ಮೀ., ಕಾರ್ಕಳದಲ್ಲಿ 42.8 ಮಿ.ಮೀ., ಬೈಂದೂರಿನಲ್ಲಿ 39.1 ಮಿ.ಮೀ., ಕುಂದಾಪುರದಲ್ಲಿ 32.9 ಮಿ.ಮೀ. ಮಳೆಯಾಗಿದೆ.

ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗವ ಸಾದ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ, ನದಿ, ಹಳ್ಳ, ಕೊಳಗಳಿಗೆ ಇಳಿಯಬಾರದು. ಅಲ್ಲದೇ ತಗ್ಗು ಪ್ರದೇಶದಲ್ಲಿರುವ ಜನತೆ ಎಚ್ಚರಿಕೆಯಿಂದ ಇರುವಂತೆ ಉಡುಪಿ ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿದೆ. ಜಿಲ್ಲೆಯಲ್ಲಿ ಮಳೆ ಹಾನಿಯನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಸರ್ವ ಸಜ್ಜಿತವಾಗಿದೆ. ಜಿಲ್ಲೆಯಲ್ಲಿ ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಒಟ್ಟು 9 ಬೋಟ್‌ಗಳಿದ್ದು, ಬೈಂದೂರು, ಮಲ್ಪೆ, ಕುಂದಾಪುರ, ಕಾರ್ಕಳ, ಉಡುಪಿಯಲ್ಲಿ ಒಟ್ಟು 7 ಬೋಟ್‌ಗಳು ಲಭ್ಯವಿದೆ. ಅಲ್ಲದೇ ಬ್ರಹ್ಮಾವರ, ಪಡುಬಿದ್ರಿಯಲ್ಲಿ ತಲಾ 1 ಬೋಟ್‌ಗಳ ಜೊತೆಗೆ 7 ಜನರ ತಂಡವನ್ನು ನಿಯೋಜನೆ ಮಾಡಲಾಗಿದೆ.

ಇನ್ನು ಗೃಹರಕ್ಷಕ ದಳದಿಂದ ಜಿಲ್ಲೆಯ ಸಮುದ್ರ ತೀರ ಪ್ರದೇಶಗಳಲ್ಲಿ 10 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಮಂಗಳೂರು ಕೇಂದ್ರ ಕಚೇರಿಯಲ್ಲಿ 100 ಸಿಬ್ಬಂದಿಗಳನ್ನು ಒಳಗೊಂಡ, ಎಸ್‌ಡಿಆರ್‌ಎಫ್‌ ತಂಡ ಹಾಗೂ 25 ಸಿಬ್ಬಂದಿಗಳ ಎನ್‌ಡಿಆರ್‌ಎಫ್‌ ತಂಡವನ್ನು ನಿಯೋಜನೆ ಮಾಡಲಾಗಿದೆ. ಮಳೆಹಾನಿಗೆ ಸಂಬಂಧಿಸಿದಂತೆ ಜನರು ಉಡುಪಿ ಜಿಲ್ಲಾ ಕಂಟ್ರೋಲ್‌ ರೂಂ ಸಂಖ್ಯೆ 1077/08202574802, ಜಿಲ್ಲಾ ಅಗ್ನಿಶಾಮಕ ಕಚೇರಿ 0820-2520333 ಹಾಗೂ ಜಿಲ್ಲಾ ಗೃಹ ರಕ್ಷಕ ದಳದ ದೂರವಾಣಿ ಸಂಖ್ಯೆ 0820-2533650ಗೆ ಮಾಹಿತಿಯನ್ನು ನೀಡಬಹುದಾಗಿದೆ.

ಇದನ್ನೂ ಓದಿ : Maravanthe Beach : ಕಡಲ್ಕೊರೆತದ ಭೀತಿಯಲ್ಲಿ ಮರವಂತೆ ಬೀಚ್‌ : ಆತಂಕದಲ್ಲಿ ಪ್ರವಾಸಿಗರು

ಇದನ್ನೂ ಓದಿ : PM Kisan Yojana : ಪಿಎಂ ಕಿಸಾನ್‌ ಯೋಜನೆಯಡಿ ಕೂಡಲೇ ತಮ್ಮಇ-ಕೆವೈಸಿ ಪೂರ್ಣಗೊಳಿಸಿ : ಕೇಂದ್ರ ಸರಕಾರದ ಘೋಷಣೆ

Comments are closed.