Heavy Rainfall Alert : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರ ವರೆಗೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದ ಕರಾವಳಿಯಲ್ಲೊ ದಿನದಿಂದ ದಿನಕ್ಕೆ ಮಳೆರಾಯನ ಆರ್ಭಟ (Heavy Rainfall Alert) ಹೆಚ್ಚಾಗುತ್ತಿದೆ. ಜೂನ್‌ ತಿಂಗಳ ಆರಂಭದಿಂದ ಕಣ್ಮರೆಯಾಗಿದ್ದ ಮಳೆ ತಿಂಗಳು ಮಗಿಯುವ ಹೊತ್ತಿಗೆ ವರುಣನ ಆರ್ಭಟ ಜೋರಾಗಿದೆ. ಹೀಗಾಗಿ ಜುಲೈ 10ರವರೆಗೂ ಜೋರಾಗಿ ಮಳೆ ಸುರಿಯಲಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಕರಾವಳಿ ಜಿಲ್ಲೆಗಳ ತಗ್ಗು ಪ್ರದೇಶಳು ಜಲಾವೃತಗೊಳ್ಳುವಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ.

ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನೆ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ಗಂಟೆಗೆ 64.5 ಮಿ.ಮೀ ನಿಂದ 115ಮಿ.ಮೀ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಹತ್ತು ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದ್ದು, ಈ ಪ್ರದೇಶದಲ್ಲಿ ವಾಸಿಸುವ ಮೀನುಗಾರರು, ಸ್ಥಳೀಯರು, ಪ್ರವಾಸಿಗರು ಸಮುದ್ರದ ಬಳಿ ಹೋಗಬಾರದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ : ಬೈಂದೂರು : ರಸ್ತೆ ಮರ ತೆರವು ಕಾರ್ಯಾಚರಣೆ ; ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಜಸ್ಟ್‌ ಮಿಸ್‌

ಇದನ್ನೂ ಓದಿ : Mangalore Bike Accident : ಮಂಗಳೂರು : ಬೈಕ್ ಅಪಘಾತ ಇಬ್ಬರ ಬಾಲಕರ ಸಾವು

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ ತಿಂಗಳಲ್ಲಿ ಮುಂಗಾರು ಮಳೆ ಚುರುಗೊಳ್ಳಲಿದೆ ಎಂದು ತಿಳಿಸಿದೆ. ಹೀಗಾಗಿ ಮಳೆ ಕೊರತೆ ಉಂಟಾಗುವುದಿಲ್ಲ ಸಾಮಾನ್ಯವಾಗಿ ಆಗುವಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಆದರೆ ಜುಲೈ 2 ರಿಂದ ಮುಂಗಾರು ಮಾರುತಗಳು ಮತ್ತಷ್ಟು ಪ್ರಬಲಗೊಳ್ಳುವ ಸಾಧ್ಯತೆ ಇರುತ್ತದೆ.

Heavy Rainfall Alert: Heavy rainfall is likely in coastal districts of the state till July 10

Comments are closed.