Heavy Rainfall In Coastal : ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಾದ (Heavy Rainfall In Coastal) ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯೊಂದಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಆದರೆ ನಿನ್ನೆ ಸಂಜೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದಿಂದ ಕೂಡಿರುತ್ತದೆ.

ಜುಲೈ 20ರವರೆಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇರುವುದಿರಮದ ಹಳದಿ ಅಲರ್ಟ್‌ ಘೋಷಿಸಲಾಗಿದೆ. ನಂತರದ ದಿನಗಳಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಬೆಳಗ್ಗಿನಿಂದ ಜಿಲ್ಲೆಗಳಲ್ಲಿ ಸರಾಸರಿ 24ಮೀ.ಮೀ. ಮಳೆಯಾಗಿದೆ. ಮುಂಗಳೂರಿನಲ್ಲಿ 25 ಮೀ.ಮೀ., ಬಂಟ್ವಾಳದಲ್ಲಿ 20.1 ಮೀ.ಮೀ, ಬೆಳ್ತಂಗಡಿಯಲ್ಲಿ 31.6ಮೀ.ಮೀ, ಪುತ್ತೂರಿನಲ್ಲಿ 11.5 ಮೀ.ಮೀ. ಕಡಬ 19.2 ಮೀ.ಮೀ, ಸುಳ್ಯದಲ್ಲಿ 36.7 ಮೀ.ಮೀನಷ್ಟು ಮಳೆಯಾಗಿದೆ.

ಇದನ್ನೂ ಓದಿ : ಉಡುಪಿ : ಕಳಪೆ ಗುಣಮಟ್ಟದ ಟೈಲ್ಸ್ ಪೂರೈಕೆ, ‌ಅಂಗಡಿ, ಕಂಪೆನಿಗೆ 1 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ

ಇದನ್ನೂ ಓದಿ : Mangalore News : ಆಟ ಆಡುತ್ತಿದ್ದಾಗ ಉಯ್ಯಾಲೆ ಹಗ್ಗ ಕುತ್ತಿಗೆ ಸಿಕ್ಕಿ ಬಾಲಕ ಸಾವು

ವರ್ಷಂಪ್ರತಿಯಂತೆ ಆಗುವ ಮಳೆಗೆ ಹೋಲಿಸಿದರೆ ಶೇಕಡಾ 110ರಷ್ಟು ಮಳೆ ಆಗಬೇಕು. ಆದರೆ ಈ ಬಾರೀ ಕಷ್ಟ ಸಾಧ್ಯ ಎನ್ನಲಾಗಿದೆ. ವಾಡಿಕೆಯಷ್ಟು ಮಳೆ ಬೀಳುವ ಸಾಧ್ಯತೆ ಶೇಕಡಾ 25ರಷ್ಟು ಮಾತ್ರ ಇರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬರಗಾಲ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

Heavy Rainfall In Coastal: Heavy rainfall is possible in these districts including the coast: Yellow alert is announced

Comments are closed.