ದಕ್ಷಿಣ ಕನ್ನಡ : Hindu activists vandalized the shop : ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ ಸಚಿವರಾದ ಅಂಗಾರ, ಸುನೀಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ರ ಚಳಿ ಬಿಡಿಸುವ ಕೆಲವನ್ನು ಹಿಂದೂ ಕಾರ್ಯಕರ್ತರು ಮಾಡಿದ್ದಾರೆ. ಸಾಕಷ್ಟು ಆಕ್ರೋಶವನ್ನು ಎದುರಿಸುತ್ತಿರುವ ಬಿಜೆಪಿ ಸರ್ಕಾರವು ಈ ಪ್ರಕರಣದ ಕುಲಂಕುಷ ತನಿಖೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ಒಟ್ಟು 27 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಶಂಕಿತರನ್ನು ವಿಚಾರಣೆಗೆ ಒಳಪಡಿಸುತ್ತಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶಂಕಿತರು ಪೊಲೀಸ್ ಠಾಣೆಗೆ ಬರುತ್ತಿದ್ದಂತೆಯೇ ಅವರ ಕುಟುಂಬಸ್ಥರು ಠಾಣೆಯ ಮುಂದೆ ಜಮಾಯಿಸಿದ ಪ್ರಸಂಗ ಕೂಡ ನಡೀತು. ಶಂಕಿತರ ಕುಟುಂಬಸ್ಥರು ಠಾಣೆ ಮುಂದೆ ಜಮಾಯಿಸುತ್ತಿದ್ದಂತೆಯೇ ಪೊಲೀಸರು ಇಲ್ಲಿಂದ ಕದಲದೇ ಹೋದಲ್ಲಿ ನಿಮ್ಮ ಮೇಲೂ ಎಫ್ಐಆರ್ ದಾಖಲು ಮಾಡಬೇಕಾಗುತ್ತೆ ಎಂದು ವಾರ್ನಿಂಗ್ ನೀಡಿ ಠಾಣೆಯಿಂದ ಕಳುಹಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಪೊಲೀಸರು ಜಾಕೀರ್ ಹಾಗೂ ಮೊಹಮ್ಮದ್ ಶಫೀಕ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರ ವಿಚಾರಣೆ ನಡೆಸಿದ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳು ದೊರಕಿದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.ಇವರಿಬ್ಬರು ನೇರವಾಗಿ ಹತ್ಯೆಯಲ್ಲಿ ಭಾಗಿಯಾಗದೇ ಇದ್ದರೂ ಸಹ ಹಂತಕರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಶಫೀಕ್ ಹಂತಕರಿಗೆ ಕೊಲೆ ಮಾಸ್ಟರ್ ಪ್ಲಾನ್ ರೂಪಿಸಲು ಸಹಾಯ ಮಾಡಿದ್ದರೆ ಜಾಕೀರ್ ಕೊಲೆ ನಡೆಯುವ ಮುನ್ನ ಪ್ರವೀಣ್ ಚಲನವಲನಗಳ ಬಗ್ಗೆ ಹಂತಕರಿಗೆ ಪಿನ್ ಟು ಪಿನ್ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಇನ್ನು ಶಫೀಕ್ ಬಂಧನದ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶ ಹೊರ ಹಾಕಿದ ಹಿಂದೂ ಕಾರ್ಯಕರ್ತರು ಸುಳ್ಯದ ಗುತ್ತಿಗಾರಿ ಎಂಬಲ್ಲಿ ಮುಸ್ಲಿಮರಿಗೆ ಸೇರಿದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿದ್ದಾರೆ. 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ಶಫೀಕ್ ಕೆಲಸ ಮಾಡುತ್ತಿದ್ದ ಅಂಗಡಿ ಸೇರಿದಂತೆ ಮುಸ್ಲಿಂ ಮಾಲೀಕರಿಗೆ ಸೇರಿದ ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ.
ಆರೋಪಿಗಳಾದ ಶಫೀಕ್ ಹಾಗೂ ಜಾಕೀರ್ನನ್ನು ಬೆಳ್ಳಾರೆ ಪೊಲೀಸ್ ಠಾಣೆಯಿಂದ ಪುತ್ತೂರು ಕೋರ್ಟ್ಗೆ ಪೊಲೀಸರು ಹಾಜರು ಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : CT Ravi : ಪಿಎಫ್ಐ ಸಂಘಟನೆ ಬ್ಯಾನ್ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ
ಇದನ್ನೂ ಓದಿ : B.Y Vijayendra : ಮೃತ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ
Hindu activists vandalized the shop where accused Shafiq was working