ಮಂಗಳೂರು : Hindu awareness letter : ಪ್ರವೀಣ್ ನೆಟ್ಟಾರು , ಮಸೂದ್ ಹಾಗೂ ಫಾಜಿಲ್ ಹತ್ಯೆಗಳ ಬಳಿಕ ಕಡಲ ನಗರಿಯಲ್ಲಿ ಕೋಮು ಸಂಘರ್ಷಗಳು ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಇಂದು ಗಣೇಶ ಚತುರ್ಥಿಗೆ ಧರ್ಮ ಸಂಘರ್ಷದ ಕರಿ ನೆರಳು ಬೀಳಬಹುದೇ ಎಂಬ ಆತಂಕ ಕೂಡ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ಕೂಡ ಸಖತ್ ಅಲರ್ಟ್ ಆಗಿದ್ದಾರೆ.
ಕರಾವಳಿಯಲ್ಲಿ ಗಣೇಶೋತ್ಸವಕ್ಕೂ ಧರ್ಮದಂಗಲ್ನ ಕರಿ ನೆರಳು ಆವರಿಸಿದೆ. ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಜೊತೆಯಲ್ಲಿ ಜನರ ಕೈಗೆ ಮತ್ತೊಂದು ಕರ ಪತ್ರ ಕೂಡ ಸೇರುತ್ತಿದೆ. ಹಿಂದೂ ಸುರಕ್ಷಾ ಸಮಿತಿ ಪುತ್ತೂರು ಜಿಲ್ಲೆಯ ಹೆಸರಿನಲ್ಲಿ ಈ ಕರಪತ್ರವನ್ನು ಹಂಚಲಾಗುತ್ತಿದೆ. ಇದೇ ಮೊದಲ ಬಾರಿಗೆ ಮನೆ ಮನೆಗೆ ಹಿಂದೂ ಸುರಕ್ಷಾ ಸಮಿತಿಯಿಂದ ಕರಪತ್ರಗಳು ತೆರಳಿವೆ .
ಹಿಂದೂ ಸುರಕ್ಷಾ ಸಮಿತಿಯು ನೀಡಿರುವ ಈ ಕರಪತ್ರದಲ್ಲಿ ಶಿವಮೊಗ್ಗದ ಹರ್ಷ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರದ ಪೂರ್ವಭಾವಿಯಾಗಿ ಈ ಕೊಲೆಗಳನ್ನು ಮಾಡಲಾಗುತ್ತಿದೆ ಎಂದು ಈ ಕರಪತ್ರದಲ್ಲಿ ಬರೆಯಲಾಗಿದೆ. ಹೀಗಾಗಿ ನಾವು ಅನ್ಯಧರ್ಮದವರಿಗೆ ವ್ಯಾಪಾರ ನಿಷೇಧ ಮಾಡೋಣ ಎಂದು ಕರೆ ನೀಡಲಾಗಿದೆ.
ಮನೆಯ ಮಕ್ಕಳನ್ನು ಆಗಾಗ ದೇವಸ್ಥಾನಕ್ಕೆ ಕರೆದುಕೊಂಡು ಹೋಗೋಣ. ಮಕ್ಕಳಿಗೆ ಹಿಂದೂ ಆಚಾರ- ವಿಚಾರಗಳ ಬಗ್ಗೆ ಸಂಸ್ಕಾರವನ್ನು ನೀಡೋಣ. ಹಿಂದೂಗಳ ಅಂಗಡಿಗಳಿಂದಲೇ ಬಟ್ಟೆ, ಚಪ್ಪಲಿ, ಎಲೆಕ್ಟ್ರಾನಿಕ್ ವಸ್ತುಗಳು, ತರಕಾರಿ, ಮೀನು, ಮಾಂಸ, ದಿನಸಿಗಳನ್ನು ಖರೀದಿ ಮಾಡೋಣ.ಮನೆಯಲ್ಲಿ ಬೆಳೆದ ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಹಿಂದೂ ವ್ಯಾಪಾರಿಗಳಿಗೇ ಮಾರಾಟ ಮಾಡೋಣ. ಭೂಮಿ ಮಾರಾಟ ಅಥವಾ ಲೀಸ್ಗೆ ನೀಡುವ ಸಂದರ್ಭದಲ್ಲಿಯೂ ಹಿಂದೂಗಳನ್ನೇ ಆಯ್ಕೆ ಮಾಡಿಕೊಳ್ಳೋಣ. ಜಾತಿ -ಭೇದವನ್ನು ಮರೆತು ನಾವೆಲ್ಲ ಬಂಧು ಭಾವ ಮೆರೆಯೋಣ ಎಂದು ಕರಪತ್ರದಲ್ಲಿ ಬರೆಯಲಾಗಿದೆ.
ಪ್ರತಿಯೊಂದು ಗ್ರಾಮಗಳಲ್ಲಿಯೂ ಅನ್ಯಮತೀಯ ಶಕ್ತಿಗಳ ಅನೈತಿಕ ಕೃತ್ಯವನ್ನು ತಡೆಯೋಣ. ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಘೋಷ ವಾಕ್ಯದೊಂದಿಗೆ ಈ ಕರಪತ್ರವನ್ನು ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆಯೊಂದಿಗೆ ಮನೆ ಮನೆಗೂ ಹಂಚಿಕೆ ಮಾಡಲಾಗಿದೆ.
ಇದನ್ನು ಓದಿ : Amazon Flipkart parcels : ಅಮೆಜಾನ್, ಫ್ಲಿಪ್ ಕಾರ್ಟ್ ಪಾರ್ಸಲ್ ಗಳ ಗತಿ ಏನಾಯ್ತು ನೋಡಿದ್ರೆ ನೀವೇ ಶಾಕ್ ಆಗ್ತೀರಾ
ಇದನ್ನೂ ಓದಿ : Mikhail Gorbachev: ಸೋವಿಯತ್ ಒಕ್ಕೂಟದ ಕೊನೇ ನಾಯಕ ಮಿಖಾಯಿಲ್ ಗೋರ್ಬಚೇವ್ ಇನ್ನಿಲ್ಲ
Hindu awareness letter along with Public Ganeshotsav invitation letter