ಮಂಗಳೂರು : ಹುಟ್ಟಿದ ಮಗುವಿಗೆ ತಾಯಿ ಹಾಲು ಅಮೃತ ಸಮಾನ.ಆದರೆ ನಾನಾ ಕಾರಣಗಳಿಂದ ಹುಟ್ಟಿದ ಮಕ್ಕಳು ಕೆಲವೊಮ್ಮೆ ತಾಯಿಹಾಲಿನಿಂದ ವಂಚಿತರಾಗು ತ್ತಾರೆ. ಹೀಗಾಗಿ ಕೆಲವು ಪ್ರಕರಣಗಳಲ್ಲಿ ಇದೇ ಕಾರಣಕ್ಕೆ ನವಜಾತ ಶಿಶುಗಳು ಪ್ರಾಣ ಕಳೆದುಕೊಳ್ಳುವ ಸಂದರ್ಭವೂ ಇದೆ. ಆದರೆ ಇನ್ಮುಂದೆ ಇಂಥಹ ನವಜಾತ ಶಿಶುಗಳ ಸಾವಿಗೆ ಕಡಿವಾಣ ಹಾಕಲು ಮಂಗಳೂರಿನಲ್ಲಿ ನವಜಾತ ಶಿಶುಗಳಿಗಾಗಿ ತಾಯಿ ಹಾಲಿನ ಬ್ಯಾಂಕ್ (Human Milk Bank) ನಿರ್ಮಿಸಲಾಗುತ್ತಿದೆ.
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ರಕ್ಷಣೆಗಾಗಿ ಇದೇ ಮೊದಲಬಾರಿಗೆ ಹ್ಯುಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಲು ಸಿದ್ಧತೆ ನಡೆದಿದೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ಸುತ್ತಮುತ್ತಲಿನ 7 ಜಿಲ್ಲೆಗಳ ತಾಯಂದಿರು ಹೆರಿಗೆಗೆ ಅವಲಂಬಿಸಿರುವ ಆಸ್ಪತ್ರೆ. ಇಲ್ಲಿ ಪ್ರತಿನಿತ್ಯ 700 ಕ್ಕೂ ಅಧಿಕ ಹೆರಿಗೆಯಾಗುತ್ತದೆ. ಆದರೆ ಈ ಪೈಕಿ ಹಲವು ಮಕ್ಕಳು ಅವಧಿಪೂರ್ಣಗೊಳ್ಳದೇ ಜನಿಸುತ್ತವೆ ಹಾಗೂ ಕೆಲವುಮಕ್ಕಳು ಹುಟ್ಟಿದ ತಕ್ಷಣ ತಾಯಿಯನ್ನು ಕಳೆದುಕೊಂಡ ಪ್ರಕರಣಗಳು ಇವೆ. ಇಂಥಹ ಮಕ್ಕಳು ಬದುಕಲು ತಾಯಿಯ ಎದೆಹಾಲು ಅತಿ ಅವಶ್ಯವಾಗಿರುತ್ತದೆ. ಆದರೆ ತಾಯಿ ಹಾಲು ಲಭ್ಯವಿಲ್ಲದ ಕಾರಣಕ್ಕೆ ಶಿಶುಗಳು ಸಾವನ್ನಪ್ಪುತ್ತವೆ.
ಈಗ ಇಂಥಹ ಮಕ್ಕಳಿಗಾಗಿ ತಾಯಿ ಎದೆ ಹಾಲಿನ ಬ್ಯಾಂಕ್ ಸ್ಥಾಪನೆಯಾಗಲಿದೆ. ಮಂಗಳೂರಿನ ರೋಟರಿ ಕ್ಲಬ್ ಸಹಯೋಗದಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭವಾಗಲಿದ್ದು, 45 ಲಕ್ಷ ವೆಚ್ಚದಲ್ಲಿ ಬ್ಯಾಂಕ್ ಸ್ಥಾಪನೆಯಾಗಲಿದೆ. ಪ್ರಸಕ್ತ ಹೆರಿಗೆಯಲ್ಲಿ ಶೇಕಡಾ 30 ರಷ್ಟು ಅವಧಿಪೂರ್ಣ ಜನನವಾಗುತ್ತಿದೆ. ಇಂಥಮಕ್ಕಳಿಗೆ ಲವಂಣಾಶ, ಪ್ರೋಟಿನ್, ಶರ್ಕರಪಿಷ್ಠ, ಫ್ಯಾಟ್, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣ. ಅತ್ಯಧಿಕವಾಗಿದ್ದು ಇದು ಶಿಶುವಿನ ಪಾಲಿಗೆ ಅಮೃತ ಎನ್ನಿಸುತ್ತದೆ.
ಹೀಗಾಗಿ ಇನ್ಮುಂದೆ ಎದೆಹಾಲು ಡೊನೇಟ್ ಮಾಡುವ ತಾಯಂದಿರನ್ನು ಸಂಪರ್ಕಿಸಿ ಎದೆಹಾಲನ್ನು ಉಪಕರಣದ ಸಹಾಯದಿಂದ ಪಂಪ್ ಮಾಡಿಸಿ ಫ್ಯಾಶ್ಚುರೈಸೇಶನ್ ಪ್ರಕ್ರಿಯೆ ಮಾಡಿ ಆ ಬಳಿಕ ಶೀತಲೀಕರಣ ಮಾಡಿ ಎದೆಹಾಲು ಸಂಗ್ರಹಿಸಿಡಲಾಗುತ್ತದೆ. ಮಂಗಳೂರಿನಲ್ಲಿ ಈ ಹ್ಯುಮನ್ ಮಿಲ್ಕ್ ಬ್ಯಾಂಕ್ ಆರಂಭವಾಗೋದರಿಂದ ಸುತ್ತಮುತ್ತಲಿನ 7 ಜಿಲ್ಲೆಗಳ ತಾಯಂದಿರಿಗೆ ಸಹಾಯವಾಗಲಿದ್ದು ಶಿಶುಗಳಿಗೆ ವರದಾನವಾಗಲಿದೆ.
ಇದನ್ನೂ ಓದಿ : 9ನೇ ಡೋಸ್ ಲಸಿಕೆ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಭೂಪ..!
ಇದನ್ನೂ ಓದಿ : ತುಳುವರಿಗೆ ಮತ್ತೆ ನಿರಾಸೆ : 8ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆ ಇಲ್ಲ ಎಂದ ಕೇಂದ್ರ ಸರಕಾರ
(Human Milk Bank to be set up in Mangalore )