college student suicide : ಸಹೋದರಿಯರೇ ನನ್ನನ್ನು ಕ್ಷಮಿಸಿ ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಹೈದರಾಬಾದ್ : ಇಲ್ಲಿನ ಬಾಚುಪಲ್ಲಿಯಲ್ಲಿರುವ ವಿಎನ್​ಆರ್​ ವಿಜ್ಞಾನ ಜ್ಯೋತಿ ಇನ್​ಸ್ಟಿಟ್ಯೂಟ್​ ಆಫ್​ ಇಂಜಿನಿಯರಿಂಗ್ ( college student suicide )​ ಹಾಗೂ ಟೆಕ್ನಾಲಜಿ ಕ್ಯಾಂಪಸ್​ ಹಾಸ್ಟೇಲು ಆವರಣದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್​ ಓದುತ್ತಿದ್ದ ವಿದ್ಯಾರ್ಥಿಯು ಶವವಾಗಿ ಪತ್ತೆಯಾಗಿದ್ದಾನೆ.

ನಾಗರ್​ಕರ್ನೂಲ್​​ ಜಿಲ್ಲೆಯ 18 ವರ್ಷದ ವಿದ್ಯಾರ್ಥಿ ಶಿವನಾಗು 12 ಅಂತಸ್ತಿನ ಕಟ್ಟಡದ ಟೆರಾಸ್​ನಿಂದ ಜಿಗಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಶಿವನಾಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಬಾಚುಪಲ್ಲಿ ಎಸ್​ಐ ಶಿವಶಂಕರ್​ ಹೇಳಿದ್ದಾರೆ. ಗುರುವಾರ ಬೆಳಗ್ಗೆ 6:30ರ ಸುಮಾರಿಗೆ ಶಿವನಾಗು ತನ್ನ ಕೋಣೆಯಿಂದ ಒಬ್ಬಂಟಿಯಾಗಿ ಹೊರಬಂದಿದ್ದನ್ನು ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಸ್ಟೆಲ್​ನಲ್ಲಿರುವ ಶಿವನಾಗುವಿನ ಕೊಠಡಿಯಿಂದ ಸೂಸೈಡ್​ ನೋಟ್​ ಹಾಗೂ ಮೊಬೈಲ್​ ಫೋನ್​ನ್ನು ವಶಕ್ಕೆ ಪಡೆದಿದ್ದಾರೆ.

ಸೂಸೈಡ್​ ನೋಟ್​ ನೋಡಿದ ಪೊಲೀಸರಿಗೆ ಶಾಕ್​ ಆಗಿದೆ. ಏಕೆಂದರೆ ಆತ ಸೂಸೈಡ್​ ನೋಟನಲ್ಲಿ ನಾನು ಈ ಹಿಂದೆ ಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಬರೆದಿದ್ದಾನೆ. 9 ಹಾಗೂ 10ನೇ ತರಗತಿಯಲ್ಲಿ ಇದ್ದ ವೇಳೆಯಲ್ಲೂ ಆತ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸೂಸೈಡ್​ ನೋಟ್​​ನಲ್ಲಿ ಬರೆದಿದ್ದಾನೆ. ಆದರೆ ವಿವಿಧ ಕಾರಣಗಳಿಂದಾಗಿ ಅದು ಸಕ್ಸಸ್​ ಆಗಿರಲಿಲ್ಲವಂತೆ.


ಹಲವಾರು ಸಂದರ್ಭಗಳಲ್ಲಿ ನಾನು ಸಹೋದರಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದೇನೆ. ದಯಮಾಡಿ ನನ್ನನ್ನು ಕ್ಷಮಿಸಿ. ಲವ್​ ಯೂ ಅಮ್ಮ , ಲವ್​ ಯೂ ಡ್ಯಾಡಿ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆಯಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ತಂದೆ ಸಿಆರ್​ಪಿಎಫ್​​ನಲ್ಲಿ ಹೆಡ್​ ಕಾನ್ಸ್​ಟೇಬಲ್​ ಆಗಿದ್ದಾರೆ. ಆತ್ಮಹತ್ಯೆ ಪತ್ರವನ್ನು ವಿಶ್ಲೇಷಣೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಿಆರ್​ಪಿಸಿ ಸೆಕ್ಷನ್​ 174ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಈ ನಡುವೆ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ವಿದ್ಯಾರ್ಥಿ ಸಂಘ ಸಂಸ್ಥೆಗಳು ಹಾಗೂ ಕುಟುಂಬ ಸದಸ್ಯರು ಆರೋಪಿಸಿದ್ದು ಮಾತ್ರವಲ್ಲದೇ ಕಾಲೇಜು ಆವರಣದ ಹೊರಗೆ ಕೆಲ ಕಾಲ ಪ್ರತಿಭಟನೆಯನ್ನು ನಡೆಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಕಿರುಕುಳ ಹಾಗೂ ಒತ್ತಡದಿಂದಾಗಿ ಶಿವನಾಗು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : Karachi blast : ಕರಾಚಿಯಲ್ಲಿ ಭಾರೀ ಸ್ಫೋಟ : 13 ಸಾವು, 12 ಮಂದಿ ಗಂಭೀರ

ಇದನ್ನೂ ಓದಿ: Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

Sorry sisters for being rude: Hyderabad college student suicide note before jumping from terrace

Comments are closed.