June 20 power cut : ಉಡುಪಿ : ಜೂ.20ಕ್ಕೆ ಜಿಲ್ಲೆಯ ಹಲವೆಡೆ ವಿದ್ಯುತ್‌ ವ್ಯತ್ಯಯ

ಉಡುಪಿ : (June 20 power cut) ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಗಳ ಕಾರಣದಿಂದ ಜೂ.20ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

ಕಾರ್ಕಳ ವಿದ್ಯುತ್‌ ಉಪಕೇಂದ್ರದ ಪ್ರದೇಶಗಳಾದ ಮುಂಡ್ಲಿ, ತೆಳ್ಳಾರು, ಪಲಾಯಿಪಕ್ಯಾರು, ಕಜೆ, ಪೊಲ್ಲಾರು, ಉದ್ದಪಲ್ಕೆ, ಬಂಗ್ಲೆ ಗುಡ್ಡೆ, ಬಂದೀಮಠ, ಕಲ್ಲೊಟ್ಟೆ, ಪೆರ್ವಾಜೆ, ಪರಪ್ಪು, ಗುಂಡ್ಯಡ್ಕ, ಪದವು, ಬೊರ್ಗಲ್‌ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಕುಕ್ಕಂದೂರು, ಅಯ್ಯಪ್ಪನಗರ, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ದುರ್ಗಾ, ಮಲೆಬೆಟ್ಟು, ಕಡಂಬಳ, ಹೆಮುರ್ಡೆ, ಚಿಕ್ಕಾಲ್‌ ಬೆಟ್ಟು, ಮಂಗಿಲಾರು, ಅಜೆಕಾರು, ಅಂಡಾರು, ಕಡ್ತಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ, ಕಾರ್ಕಳ ಟೌನ್‌, ಬೈಲೂರು, ನೀರೆ, ಕೌಡೂರು, ಬೈಲೂರು ಟೌನ್‌, ಟಿ.ಎಂ.ಸಿ. ವಾಟರ್‌ ಸಪ್ಲೆ, ಕೆ.ಹೆಚ್‌.ಬಿ. ಕೊಲೋನಿ, ಜೋಡುರಸ್ತೆ, ಹಿರ್ಗಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ವರೆಗೆ ವಿದ್ಯುತ್‌ ವ್ಯತ್ಯಯ ಇರುತ್ತದೆ.

ಹೆಬ್ರಿ ಉಪವಿದ್ಯುತ್‌ ಸ್ಥಾವರದ ಸುತ್ತಮುತ್ತಲಿನ ಪ್ರದೇಶಗಳಾದ ಹೆಬ್ರಿ ಪೇಟೆ, ಗುಳಿಬೆಟ್ಟು, ಮಠದಬೆಟ್ಟು, ಬಂಗಾರಗುಡ್ಡೆ, ರಾಜೀವನಗರ, ಇಂದಿರಾನಗರ, ಹೆಬ್ರಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್‌ ಇರುವುದಿಲ್ಲ.

ವರಾಹಿ ವಿದ್ಯುದಾಗಾರ ಸುತ್ತಮುತ್ತಲಿನ ಪ್ರದೇಶಗಳಾದ ಮಣಿಪಾಲ, ನಿಟ್ಟೂರು, ಬ್ರಹ್ಮಾವರ, ಕುಂಜಿಬೆಟ್ಟು, ಮಲ್ಪೆ, 33ಕೆ.ವಿ ಉದ್ಯಾವರ, ಶಿರ್ವ ಫೀಡರಿನ ಉಡುಪಿ ತಾಲೂಕು (ನಗರ ಸಭೆ ಪ್ರದೇಶ ಸಹಿತ), ಮಣಿಪಾಲ (ನಗರ ಸಹಿತ) ಉಪವಿಭಾಗ ಏರಿಯಾ, ಬ್ರಹ್ಮವಾರ ತಾಲೂಕು, ಕಾಪು ತಾಲೂಕು (ಪುರಸಭಾ ಪ್ರದೇಶ ಸಹಿತ)ದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಬ್ರಹ್ಮಾವರ ಉಪವಿದ್ಯುತ್‌ ಕೇಂದ್ರ ಪ್ರದೇಶಗಳಾದ ಮಟಪಾಡಿ, ರಾಮನಕುದ್ರು,, ಕೊಳಂಬೆ, ಅಗ್ರಹಾರ, ಚಾಂತಾರು, ಹೇರೂರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಗಣೇಶ್‌ ಕಲಾಮಂದಿರ, ಕೆ.ಕೆ.ಪಾರ್ಮ್ಸ್‌, ಹೆಗ್ಗುಂಜೆ, ಕಾಡೂರು, ಪೆಜ ಮಂಗೂರು, ಕೊಕ್ಕರ್ಣೆ, ಕೆಂಜೂರು, ಸಂತಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಮಣಿಪಾಲ ವಿದ್ಯುತ್‌ ಉಪಕೇಂದ್ರ ಸುತ್ತಮುತ್ತಲಿನ ಪ್ರದೇಶಗಳಾದ ಹಯಗ್ರೀವ ನಗರ, ಲಕ್ಷ್ಮೀಂದ್ರ ನಗರ, ಇಂದ್ರಾಳಿ, ರೈಲ್ವೆ ನಿಲ್ದಾಣಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕರೆಂಟ್‌ ಇರುವುದಿಲ್ಲ.

ಗಂಗೊಳ್ಳಿ ವಿದ್ಯುತ್‌ ಉಪಕೇಂದ್ರ ಪ್ರದೇಶಗಳಾದ ಗಂಗೊಳ್ಳಿ, ಮುಳ್ಳಿಕಟ್ಟೆ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ : Heavy Rain Alert in Coastal : ಹವಾಮಾನ‌ ವರದಿ : ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 4 ದಿನ‌‌ ಭಾರೀ ಮಳೆ

ಕುಂದಾಪುರ ವಿದ್ಯುತ್‌ ಉಪಕೇಂದ್ರಗಳಾದ ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳ್ಳಹಳ್ಳಿ, ಅಸೋಡು, ಕೊರ್ಗಿ, ಯಡಾಡಿ-ಮತ್ಯಡಿ, ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಸ್ಥಾವರ, ಬಸ್ರೂರು, ಆನಗಳ್ಳಿ ಮತ್ತು ಕಂದಾವರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್‌ ವ್ಯತ್ಯಯವಾಗಲಿದೆ.

June 20 power cut: Udupi: On June 20, there was power cut in many parts of the district

Comments are closed.