ಭಾನುವಾರ, ಜೂನ್ 15, 2025
HomeCoastal NewsAkhilapajamannu: ಶಾರದೆ ಅವತಾರದಲ್ಲಿ ಅಖಿಲಾ ಪಜಮಣ್ಣು…! ಅಷ್ಟಲಕ್ಷ್ಮೀ ಪೋಟೋಶೂಟ್ ಗೆ ಜೊತೆಯಾದ ಸಪ್ತಪಾವೂರು…!!

Akhilapajamannu: ಶಾರದೆ ಅವತಾರದಲ್ಲಿ ಅಖಿಲಾ ಪಜಮಣ್ಣು…! ಅಷ್ಟಲಕ್ಷ್ಮೀ ಪೋಟೋಶೂಟ್ ಗೆ ಜೊತೆಯಾದ ಸಪ್ತಪಾವೂರು…!!

- Advertisement -

ಬಗೆ ಬಗೆಯ ಪೋಟೋಶೂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವಾಗಲೇ ಗಾಯಕಿ ಅಖಿಲಾ ಪಜಮಣ್ಣು ಶಾರದೆ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಅಖಿಲಾ ಪಜಮಣ್ಣುಗೆ ನಟಿ ಸಪ್ತಸಾವೂರು ಸಾಥ್ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕರಾವಳಿ ಭಾಗದಲ್ಲಿ ಶಾರದೆ ಹಾಗೂ ಅಷ್ಟಲಕ್ಷ್ಮೀ ಪೋಟೋಶೂಟ್ ಗಮನ ಸೆಳೆಯುತ್ತಿದೆ. ನಟಿ ಚೈತ್ರಾ ರೈ ಶಾರದೆಯಾಗಿ ಮಿಂಚಿದ್ದ ಬೆನ್ನಲ್ಲೇ ಈಗ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಗಾಯಕಿ ಹಾಗೂ ನಿರೂಪಕರಿ ಅಖಿಲಾ ಪಜಮಣ್ಣು ಕೂಡ ಶಾರದೆಯಾಗಿ ಮಿಂಚಿದ್ದಾರೆ.

ಮನಸೆಳೆಯುವ ಅಲಂಕಾರ, ಮುಡಿಯಲ್ಲಿ ನಗುವ ಮಲ್ಲಿಗೆ ಜೊತೆ ಕೈಯಲ್ಲಿ ವೀಣೆ ಹಿಡಿದು ಸಾಕ್ಷಾತ ಶಾರದೆಯೇ ಧರೆಗಿಳಿದಂತೆ ಅಖಿಲಾ ಪಜಮಣ್ಣು ಪೋಟೋಗೆ ಪೋಸ್ ನೀಡಿದ್ದು, ದಯಾ ಕುಕ್ಕುಜೆ ಪೋಟೋ ಕಿಕ್ಲಿಸಿದ್ದಾರೆ.

ಕೇವಲ ಶಾರದೆ ಮಾತ್ರವಲ್ಲ ಅಖಿಲಾ ಪಜಮಣ್ಣು ಜೊತೆ ಸಹಿಪ್ರಾಶಾಲೆ ಖ್ಯಾತಿಯ ನಟಿ ಸಪ್ತಪಾವೂರು ಇನ್ನು ಹಲವರು ಸೇರಿ ಅಷ್ಟಲಕ್ಷ್ಮೀ ಅವತಾರವನ್ನೇ ಸಿದ್ಧಪಡಿಸಿದ್ದಾರೆ.

https://www.instagram.com/reel/CScD89shP5h/?utm_medium=copy_link

ಕುದ್ರೋಳಿಯ ಗೋಕರ್ಣಾಥೇಶ್ವರ ದೇಗುಲದಲ್ಲಿ ನಡೆದ ಈ ಪೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.  

RELATED ARTICLES

Most Popular