ಪಕ್ಕದ ಮನೆಯ ಮುಂದೆ ಮೂತ್ರ ಮಾಡಿದ ಮಗು : ಮಗುವಿನ ತಾಯಿಯನ್ನು ಚಾಕುವಿನಿಂದ ಕೊಂದ ಬಾಲಕ

ನವದೆಹಲಿ : ನಾಲ್ಕು ವರ್ಷದ ಮಗು ಪಕ್ಕದ ಮನೆಯ ಮುಂಭಾಗದಲ್ಲಿ ಮೂತ್ರ ಮಾಡಿತ್ತು. ಇದೇ ವಿಚಾರಕ್ಕೆ ಪಕ್ಕದ ಮನೆಯವರು ಜಗಳವಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಾಲಕನೋರ್ವ ಮಗುವಿನ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

ಇಂತಹ ಅಮಾನವೀಯ ಘಟನೆ ನಡೆದಿರೋದು ಈಶಾನ್ಯ ದೆಹಲಿಯ ಅಮಾನ್‌ ವಿಹಾರ್‌ನಲ್ಲಿ. ಸಾವಿತ್ರಿ ರಾಣಾ ಎಂಬವರೇ ಕೊಲೆಯಾದ ದುರ್ದೈವಿ. ಕಳೆದೊಂದು ವಾರದ ಹಿಂದೆಯಷ್ಟೇ ಸಾವಿತ್ರಿ ಅವರ ನಾಲ್ಕು ವರ್ಷದ ಮಗ ಪಕ್ಕದ ಮನೆಯ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದು ಪಕ್ಕದ ಮನೆಯವರ ಕೋಪಕ್ಕೆ ಕಾರಣವಾಗಿತ್ತು. ಮನೆಯವರ ಜೊತೆಗೆ ಮನೆಯಲ್ಲಿದ್ದ ಬಾಲಕ ಕೂಡ ಸಾವಿತ್ರಿ ಜೊತೆಗೆ ಜಗಳವಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಬಾಲಕ ರಾತ್ರಿಯ ಹೊತ್ತಲ್ಲಿ ಸಾವಿತ್ರಿ ಅವರ ಮನೆಗೆ ಬಂದು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಾವಿತ್ರಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಕೊಂಡಿರುವ ಪೊಲೀಸರು ಇದೀಗ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಈಶಾನ್ಯ ದೆಹಲಿ ವಿಭಾಗದ ಡಿಸಿಪಿ ಪ್ರಣವ್​ ತಾಯಲ್​ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಗಳು ವರದಿ ಮಾಡಿವೆ.

Comments are closed.