ಮಂಗಳೂರು : drone training to the police : ಇವತ್ತಿನ ದಿನದಲ್ಲಿ ಸಾಕಷ್ಟು ಸಂದರ್ಭದಲ್ಲಿ ಹದ್ದಿನ ಕಣ್ಣು ಎಂದೆ ಕರೆಸಿಕೊಂಡಿರುವ ಡ್ರೋನ್ ಕ್ಯಾಮರಾ ಬಳಕೆಯಾಗುತ್ತಿದೆ. ಫೋಟೋ ಶೂಟ್ ನಿಂದ ಹಿಡಿದು ಭದ್ರತೆ ವಿಚಾರದವರೆಗೂ ಈ ಡ್ರೋಣ್ ಕ್ಯಾಮರಾವನ್ನು ಉಪಯೋಗಿಸಲಾಗುತ್ತಿದೆ. ಇದೀಗ ಪೊಲೀಸ್ ಅಧಿಕಾರಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ವಲಯ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡ್ರೋನ್ ಕುರಿತಾದ ತರಬೇತಿ ನೀಡಲಾಗುತ್ತಿದೆ.
ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಎರಡು ವಾರಗಳ ಈ ತರಬೇತಿ ಕಾರ್ಯಕ್ರಮಕ್ಕೆ ಐ.ಜಿ.ಪಿ ದೇವಜ್ಯೋತಿ ರೇ ಚಾಲನೆ ನೀಡಿದರು. ಪೊಲೀಸ್ ಅಧಿಕಾರಿಗಳಿಗೆ ಈ ತರಬೇತಿಯನ್ನು ದೇಶದಲ್ಲಿಯೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಪ್ರಥಮವಾಗಿ ಪಶ್ಚಿಮ ವಲಯದ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಆಂತರಿಕಾ ವಿಭಾಗ ಬೆಂಗಳೂರಿನ ತಜ್ಞರ ತಂಡವು ತರಬೇತಿಯನ್ನು ನೀಡುತ್ತಿದೆ. ಡ್ರೋನ್ ಕುರಿತಾದ ವಿವರಗಳು ಮತ್ತು ಕಾನೂನುಗಳನ್ನು ತಿಳಿಸಲಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಡ್ರೋನ್ ನ ಮತ್ತು ಅದರ ಪರಿಕರಗಳ ಉಪಯೋಗ ಮತ್ತು ಡ್ರೋನ್ ಆಪರೇಟ್ ಮಾಡುವ ಬಗ್ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ರಾತ್ರಿ ಸಮಯದಲ್ಲಿ ಸೂಕ್ಷ್ಮ ಪ್ರದೇಶ, ಕಾಡು, ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಕೂಡ ಡ್ರೋನ್ ನ್ನು ಹಾರಿಸಿ ಮಾಹಿತಿ ಸಂಗ್ರಹಣೆಯ ಬಗ್ಗೆಯು ಸಹ ತರಬೇತಿಯನ್ನು ನೀಡಲಾಗುತ್ತಿದೆ. ಇಂದಿನಿಂದ ಈ ತರಬೇತಿಗೆ ಚಾಲನೆ ನೀಡಲಾಗಿದ್ದು ಮುಂದಿನ ಎರಡು ವಾರಗಳ ಕಾಲ ತರಬೇತಿ ಕಾರ್ಯ ನಡೆಯಲಿದೆ. ತರಬೇತಿಯಲ್ಲಿ ಪಶ್ಚಿಮ ವಲಯದ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಮತ್ತು ಮಂಗಳೂರು ಪೊಲೀಸ್ ಕಮೀಷನರೇಟ್ ಘಟಕದ ಒಟ್ಟು 27 ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸುತ್ತಿದ್ದಾರೆ. ಪಶ್ಷಿಮ ವಲಯ ಮಂಗಳೂರು ಮತ್ತು ಆಂತರಿಕ ಭದ್ರತಾ ವಿಭಾಗ ಬೆಂಗಳೂರು ರವರ ಸಹಯೋಗದಲ್ಲಿ ಈ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಡ್ರೋನ್ ನ್ನು ಇನ್ನಷ್ಟು ಉಪಯೋಗಕಾರಿಯಾಗಿ ಬಳಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದನ್ನು ಓದಿ : Mukesh Ambani : ರಿಲಯನ್ಸ್ ರೀಟೇಲ್ ವ್ಯವಹಾರಗಳ ಮುಖ್ಯಸ್ಥೆಯಾಗಿ ಮುಕೇಶ್ ಅಂಬಾನಿ ಪುತ್ರಿ ಇಶಾ ನೇಮಕ
ಇದನ್ನೂ ಓದಿ : Coffee Nadu Chandu: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಶಿವಣ್ಣರನ್ನು ಭೇಟಿಯಾದ ಕಾಫಿನಾಡು ಚಂದು : ಅನುಶ್ರೀಯಿಂದ ವಿಶೇಷ ಗಿಫ್ಟ್
Karnataka has given drone training to the police for the first time in the country