Condoms From Swiggy : ಸ್ವಿಗ್ಗಿಯಲ್ಲಿ ಐಸ್​ಕ್ರೀಂ, ಚಿಪ್ಸ್​ ಆರ್ಡರ್​ ಮಾಡಿದವನಿಗೆ ಸಿಕ್ಕಿದ್ದು ಕಾಂಡೋಮ್​​ : ವೈರಲ್​ ಆಯ್ತು ಟ್ವೀಟ್​

Condoms From Swiggy :ಈಗೆಲ್ಲಾ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡೋದು ಕಾಮನ್​ ಆಗಿಬಿಟ್ಟಿದೆ. ಅದೇ ರೀತಿ ಕೊಯಮತ್ತೂರಿನ ವ್ಯಕ್ತಿಯೊಬ್ಬರು ತಮ್ಮ ಮಕ್ಕಳಿಗೆ ಸ್ವಿಗ್ಗಿ ಆ್ಯಪ್​ನಲ್ಲಿ ಐಸ್​ಕ್ರೀಮ್​ ಹಾಗೂ ಚಿಪ್ಸ್​ಗಳನ್ನು ಆರ್ಡರ್​ ಮಾಡಿದ್ದರು. ಆದರೆ ಸ್ವಿಗ್ಗಿ ಡೆಲಿವರಿ ಪಡೆದ ಬಳಿಕ ಶಾಕ್​ ಆಗಿದ್ದಾರೆ. ಏಕೆಂದರೆ ಐಸ್​ಕ್ರೀಂ ಹಾಗೂ ಚಿಪ್ಸ್​ಗಳ ಬದಲಾಗಿ ಅವರಿಗೆ ಡೆಲಿವರಿ ಬಾಯ್​​ ಕಾಂಡೋಮ್​ಗಳನ್ನು ನೀಡಿದ್ದಾರೆ. ಈ ಸಂಬಂಧ ಮಾಡಲಾದ ಒರಿಜಿನಲ್​ ಟ್ವೀಟ್ ಡಿಲೀಟ್ ಆಗಿದೆ. ಆದರೆ ಇದರ ಸ್ಕ್ರೀನ್​ಶಾಟ್​ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.


ಡೆಲಿವರಿ ರೂಪದಲ್ಲಿ ಕಾಂಡೋಮ್​ ಬದಲು ಐಸ್​ಕ್ರೀಂ ಹಾಗೂ ಚಿಪ್ಸ್​ ಪಡೆದವನ ಕತೆ ಏನಾಗಿರಬಹುದು ಎಂಬುದೇ ನನಗೆ ಯೋಚನೆಯಾಗಿದೆ ಎಂದು ಟ್ವೀಟ್​ ಮಡಲಾಗಿದೆ. ಈ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಕಾಂಡೋಮ್​ ಬದಲು ಆತ ಕೂತು ಚಿಪ್ಸ್​ ಸೇವಿಸುತ್ತಿರಬಹುದು ಎಂದು ನೆಟ್ಟಿಗರು ಕೂಡ ನಕ್ಕಿದ್ದಾರೆ.

ಫುಡ್​ ಡೆಲಿವರಿ ಆ್ಯಪ್​ಗಳಲ್ಲಿ ಈ ರೀತಿ ಡೆಲಿವರಿ ಪ್ರಾಡಕ್ಟ್​​ಗಳು ಉಲ್ಟಾ ಪಲ್ಟಾ ಆದ ಅನೇಕ ಪ್ರಕರಣಗಳನ್ನು ನಾವು ಕಾಣುತ್ತಲೇ ಇದ್ದೇವೆ. ಆದರೆ ಈ ಬಾರಿ ಮಾತ್ರ ಆಹಾರದ ಜಾಗದಲ್ಲಿ ಕಾಂಡೋಮ್​ಗಳು ಬಂದಿದ್ದು ಮಾತ್ರ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.


ಕೆಲವು ದಿನಗಳ ಹಿಂದೆ ಜೊಮ್ಯಾಟೋದಲ್ಲಿ ಕೇಕ್​ ಆರ್ಡರ್​ ಮಾಡಿದ್ದ ಮಹಿಳೆಯೊಬ್ಬರು ಇದೇ ರೀತಿ ಪರಿಸ್ಥಿತಿಯನ್ನು ಎದುರಿಸಿದ್ದರು. ವೈಷ್ಣವಿ ಮೋಂಡ್ಕರ್​​ ಕೇಕ್​ ಆರ್ಡರ್​ ಮಾಡಿದ್ದ ಬೆನ್ನಲ್ಲೇ ಡೆಲಿವರಿ ಬಾಯ್​ಗೆ ಸೂಚನೆಯೊಂದನ್ನು ನೀಡಿದ್ದರು. ಇದರಲ್ಲಿ ಅವರು 500 ರೂಪಾಯಿ ಚೇಂಜ್​ ತನ್ನಿ ಎಂದು ಬರೆದಿದ್ದರು. ವಿಚಿತ್ರ ಅಂದರೆ ಕೇಕ್​​ ಮೇಲೆ 500 ರೂಪಾಯಿ ಚೇಂಜ್​ ತನ್ನಿ ಎಂದು ಬರೆದು ಡೆಲಿವರಿ ಬಾಯ್​ ಫುಡ್ ಡೆಲಿವರಿ ಮಾಡಿದ್ದನು.

ಇದನ್ನು ಓದಿ : Coffee Nadu Chandu: ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಮೂಲಕ ಶಿವಣ್ಣರನ್ನು ಭೇಟಿಯಾದ ಕಾಫಿನಾಡು ಚಂದು : ಅನುಶ್ರೀಯಿಂದ ವಿಶೇಷ ಗಿಫ್ಟ್​

ಇದನ್ನೂ ಓದಿ :drone training to the police : ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಡ್ರೋನ್​ ತರಬೇತಿ ನೀಡಿದೆ ಕರ್ನಾಟಕ

Man Orders Ice-Cream, Gets Condoms From Swiggy; Twitter Wonders What ‘Çondom Guy’ Got

Comments are closed.