Karnataka rainfall alert : ರಾಜ್ಯದಲ್ಲಿ ನಾಳೆ ಭಾರೀ‌ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಬಿಸಿಲಿನ ತಾಪಮಾನ (Karnataka rainfall alert) ಏರಿಕೆ ಕಂಡಿದೆ. ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೂ ಬಿಸಿಲಿ ವಾತಾವರಣದಿಂದ ಕೂಡಿದ್ದು, ರಾತ್ರಿ ವೇಳೆ ರಾಜ್ಯದ ಬಹುತೇಕ ಕಡೆ ತುಂತುರು ಮಳೆಯಾಗಿದೆ. ಇಲ್ಲಿಯವರೆಗೆ ರಾಜ್ಯ ಮತ್ತು ಅಲ್ಲಿ ಕೆಂಪು, ಹಸಿರು ಮತ್ತು ಹಳದಿ ಮಿಶ್ರಿತ ಎಚ್ಚರಿಕೆಯನ್ನು ನೀಡಲಾಗಿತ್ತು, ಆದರೆ ಇಂದಿನ ಹವಾಮಾನ ವರದಿಯು ಲಘು ಮಳೆಯನ್ನು ಸೂಚಿಸಿದೆ. ಕರ್ನಾಟಕದ ಹವಾಮಾನ ವರದಿ ಪ್ರಕಾರ, ಆಗಸ್ಟ್ 5, 6 ರಂದು ಭಾರೀ ಮಳೆಯ ಮನ್ಸೂಚನೆ ನೀಡಲಾಗಿದೆ.

ಆದರೆ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಇಂದು ಸಾಧಾರಣ ಮಳೆಯ ಎಚ್ಚರಿಕೆ ನೀಡಲಾಗಿದೆ. ಜತೆಗೆ ಚಂಡಮಾರುತದ ಎಚ್ಚರಿಕೆಯನ್ನೂ ನೀಡಲಾಗಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಶನಿವಾರ ಆಗಸ್ಟ್ 5 ರಂದು ಲಘು ಮಳೆಯಾಗಲಿದೆ.

ಆಗಸ್ಟ್‌ 6 ರಂದು ಭಾನುವಾರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ನಾಳೆ ಕೋಲಾರದಲ್ಲೂ ಲಘು ಮಳೆಯಾಗುವ ಮುನ್ಸೂಚನೆ ಇದೆ. ಕೋಲಾರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಭಾನುವಾರ ಲಘು ಮಳೆಯಾಗಲಿದೆ. ಇದನ್ನೂ ಓದಿ : Soujanya case : ಧರ್ಮಸ್ಥಳ ಭಕ್ತರ ಪ್ರತಿಭಟನೆ : ಸೌಜನ್ಯ ತಾಯಿ, ಸಹೋದರನ ಮೇಲೆ ಹಲ್ಲೆ, ಪ್ರಕರಣ ದಾಖಲು

ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರು ಕೃಷಿ ಕೆಲಸಕ್ಕೆ ಮರಳುತ್ತಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇಂದು ಮಳೆ ಸ್ವಲ್ಪ ಕಡಿಮೆಯಾಗಲಿದ್ದು, ನಾಳೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಲಘು ಮಳೆಯಾಗಲಿದೆ. ಆದರೆ, ಕರಾವಳಿಯಲ್ಲಿ ಇನ್ನೂ ಒಂದೆರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

Karnataka rainfall alert: Heavy rain is likely in the state tomorrow

Comments are closed.