Karnataka Rains : ಕರಾವಳಿಯಲ್ಲಿ ಬಿಸಿಲ ಆರ್ಭಟ, ನಾಳೆಯಿಂದ ಮತ್ತೆ ವರುಣಾರ್ಭಟ : ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಬಿರು ಬಿಸಿಲಿನಿಂದ ಮಳೆರಾಯ (Karnataka Rains) ಕಣ್ಮರೆಯಾಗಿದ್ದು, ಮತ್ತೆ ವರುಣನ ಆಗಮನಕ್ಕಾಗಿ ಜನ ಎದುರು ನೋಡುತ್ತಿದ್ದಾರೆ. ಇನ್ನು ಇಂದಿನಿಂದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ತಿಂಗಳ ಮಧ್ಯದಲ್ಲಿ ಮಳೆ ಜೋರಾಗಿದ್ದು, ತಿಂಗಳ ಕೊನೆಯಲ್ಲಿ ಸ್ವಲ್ಪ ಬಿಡುವು ಕೊಟ್ಟಿದ್ದರಿಂದ ಬಿಗಿ ಹಿಡಿದುಕೊಂಡ ಉಸಿರು ಬಿಡುವಂತೆ ಆಗಿದೆ. ಆದರೆ ಮತ್ತೆ ಇಂದಿನಿಂದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಇನ್ನುಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : Soujanya murder case : ಸೌಜನ್ಯ ಕೊಲೆ ಪ್ರಕರಣ : ಭಕ್ತರು ಗೊಂದಲಕ್ಕೆ ಒಳಗಾಗದಂತೆ ಡಾ. ವೀರೇಂದ್ರ ಹೆಗ್ಗಡೆ ಮನವಿ

ಇದನ್ನೂ ಓದಿ : World Breast feeding : ಉಡುಪಿ : ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಕ್ಕೆ ಆಗಸ್ಟ್‌ 3ರಿಂದ 5ರ ತನಕ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಒಳನಾಡಿನ ಕೆಲವು ಭಾಗದಲ್ಲಿ ಬಿರುಗಾಳಿಯು 30 ರಿಂದ 40 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಕರಾವಳಿ ವ್ಯಾಪ್ತಿಯಲ್ಲಿ ಬಿರುಗಾಳಿ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಕಾರಣದಿಂದ ಮೀನಿಗಾರರು, ಪ್ರವಾಸಿಗರು ಹಾಗೂ ಸ್ಥಳೀಯರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

Karnataka Rains: Sunny weather on the coast, rain again from tomorrow: Yellow alert announced

Comments are closed.