Karnataka Weather : ಕರಾವಳಿ ಜಿಲ್ಲೆಗಳಲ್ಲಿ ಇಳಿಕೆ ಕಂಡ ಮಳೆ : ಆದ್ರೂ ಸಮುದ್ರಕ್ಕೆ ಇಳಿಯದಿರಿ ಎಂದ ಹವಾಮಾನ ಇಲಾಖೆ

ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆರಾಯನ ಆರ್ಭಟ (Karnataka Weather) ಕಡಿಮೆಯಾಗಿದ್ದು, ತಾಪಮಾನ ಏರಿಕೆ ಕಂಡಿದೆ. ಹೀಗಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಕುರಿತು ಯಾವುದೇ ಮುನ್ಸೂಚನೆ ನೀಡಿಲ್ಲ.

ನಿನ್ನೆ ಉಡುಪಿಯಲ್ಲಿ 31 ಡಿ.ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದ್ದು, ಉಳಿದಂತೆ ದಕ್ಷಿಣ ಕನ್ನಡ 29.8 ಡಿ.ಸೆ. ಇದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 28.7 ಡಿ.ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣದಿಂದ ಕೂಡಿದ್ದು, ಮಳೆ ಕುರುಹು ಕೂಡ ಇಲ್ಲವಾಗಿದೆ.

ಆದರೆ ರಾಜ್ಯದಲ್ಲಿ ಆಗಸ್ಟ್‌ 3, 4 ಮತ್ತು 5 ರಂದು ಮತ್ತೆ ವರುಣಾರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇನ್ನು ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದ್ದು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : Dr. K Vidyakumari : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳು ಕಡಿಮೆ ಇದ್ದರೂ ಸಮುದ್ರದ ಕಡೆ ಸುಳಿಯಬೇಡಿ ಎಂದು ಹವಾಮಾನ ಇಲಾಖೆ ಹೇಳಿದೆ. ಮೀನುಗಾರರು, ಪ್ರವಾಸಿಗರು ಹಾಗೂ ಸ್ಥಳೀಯರು ಸಮುದ್ರಕ್ಕೆ ಇಳಿಯಬೇಡಿ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೇ ಸಮುದ್ರ ತೀರದಲ್ಲಿ ಗಂಟೆಗೆ 65 ಕಿ.ಮೀ ವೇಗದ ಗಾಳಿ ಆಗಗುವ ಮನ್ಸೂಚನೆಯನ್ನು ನೀಡಿದ್ದು, ಈ ಕಾರಣದಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಲಿದೆ ಎಂದು ತಿಳಿಸಿದೆ.

Karnataka Weather : Rain seen decreasing in coastal districts : Do not go into the sea, says Meteorological Department

Comments are closed.