Karnataka Weather Report : ಕರಾವಳಿಯಲ್ಲಿ ‌ಭಾರೀ ಮಳೆ : 4 ದಿ‌ನ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು : Karnataka Weather Report : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ವಾರ ಆರಂಭದಲ್ಲಿ ವರುಣನ ಆರ್ಭಟ ಕೊಂಚ ಇಳಿಕೆ ಕಂಡಿತು. ಆದರೆ ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಜೋರಾಗುವ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಾಳಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಪ್ರವಾಸಿಗರು, ಸ್ಥಳೀಯರು ಹಾಗೂ ಮೀನುಗಾರರು ಕಡಲ ತೀರಕ್ಕೆ ಹೋಗದಂತೆ, ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇನ್ನು ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹೇಳಿದೆ.

ಸುಳ್ಯ, ಮಂಗಳೂರು, ಪಣಂಬೂರು, ಅಂಕೋಲಾ, ಮರವಂತೆ, ಮಾವಿನಕಾಡು, ಬೈಂದೂರು, ಮೂಡಿಗೆರೆ, ಉಡುಪಿ, ಮಲ್ಪೆ, ಮುರುಡೇಶ್ವರ, ನಾಪೋಕ್ಲು, ಲಿಂಗನಮಕ್ಕಿ, ಕೊಟ್ಟಿಗೆಹಾರ, ಕೊಪ್ಪ, ಶೃಂಗೇರಿ, ಆಗುಂಬೆ, ಧರ್ಮಸ್ಥಳ, ಉಜಿರೆ, ಕಳಸ, ಹೊನ್ನಾವರ, ಶಿರಸಿ, ಸಿದ್ದಪುರ, ಸಾಗರ, ಶಿವಮೊಗ್ಗ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ.

ಇದನ್ನೂ ಓದಿ : Kundapura Kannada Habba : ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ಸ್ ತಂಡ : ವಿಶ್ವ ಕುಂದಾಪುರ ಕನ್ನಡ ಹಬ್ಬ

ಇದನ್ನೂ ಓದಿ : Heavy Rain Alert : ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ

ವರ್ಷಂಪ್ರತಿಯಂತೆ ಆಗುವ ಮಳೆಗೆ ಹೋಲಿಸಿದರೆ ಶೇಕಡಾ 110ರಷ್ಟು ಮಳೆ ಆಗಬೇಕು. ಆದರೆ ಈ ಬಾರೀ ಕಷ್ಟ ಸಾಧ್ಯ ಎನ್ನಲಾಗಿದೆ. ವಾಡಿಕೆಯಷ್ಟು ಮಳೆ ಬೀಳುವ ಸಾಧ್ಯತೆ ಶೇಕಡಾ 25ರಷ್ಟು ಮಾತ್ರ ಇರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬರಗಾಲ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

Karnataka Weather Report : Heavy rains on the coastal : 4 day yellow alert announced

Comments are closed.