ಕೊರಗಜ್ಜ, ಬಬ್ಬುಸ್ವಾಮಿ ಕಾಣಿಕೆ ಡಬ್ಬಕ್ಕೆ ಕಾಂಡೋಮ್ ಹಾಕಿ ವಿಕೃತಿ : ರಕ್ತಕಾರಿ ಮೃತಪಟ್ಟ ಯುವಕ…!!

ಮಂಗಳೂರು : ಬಬ್ಬುಸ್ವಾಮಿ ಹಾಗೂ ಕೊರಗಜ್ಜನ ದೈವಸ್ಥಾನದ ಕಾಣಿಕೆ ಹಬ್ಬಕ್ಕೆ ಕಾಂಡೋಮ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಕ್ಷಮೆಯಾಚಿಸಿದ್ದಾನೆ. ಇನ್ನೋರ್ವ ಯುವಕ ಮೃತಪಟ್ಟಿರುವ ಘಟನೆ ಮಂಗಳೂರಲ್ಲಿ ನಡೆದಿದೆ‌.

ಮಂಗಳೂರು ನಗರದ ಎಮ್ಮೆಕೆರೆಯಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜಾತ್ರೆಯೊಂದು ನಡೆದಿದ್ದು, ಭಕ್ತರ ಸಮ್ಮುಖದಲ್ಲಿಯೇ ಯುವಕ ಓರ್ವ  ಕೊರಗಜ್ಜನ ಗುಡಿಯ ಮುಂದೆ ಬಂದು ಕ್ಷಮೆಯಾಚನೆ ಮಾಡಿದ್ದಾನೆ. ತಾನು ಕೊರಗಜ್ಜನ ದೈವದ ಕಾಣಿಕೆ ಹುಂಡಿಗೆ ತಾನು ಹಾಗೂ ಸ್ನೇಹಿತ ಕಾಂಡೋಮ್ ಹಾಕಿರುವುದನ್ನು ಒಪ್ಪಿಕೊಂಡಿದ್ದಾನೆ.

ಈ ವೇಳೆಯಲ್ಲಿ ದುಷ್ಕೃತ್ಯವೆಸಗಿದ್ದ ಸ್ನೇಹಿತ ಮಾನಸಿಕವಾಗಿ ಅಸ್ವಸ್ಥಗೊಂಡು, ನಂತರದಲ್ಲಿ ಗೋಡೆಗೆ ತಲೆ ಒಡೆದುಕೊಂಡು ಸಾವನ್ನಪ್ಪಿರುವ ಕುರಿತು ತಿಳಿಸಿದ್ದಾನೆ. ಇದರಿಂದಾಗಿ‌ ನೆರೆದಿದ್ದ ಭಕ್ತರು ಕೊರಗಜ್ಜ ಹಾಗೂ ಬಬ್ಬುಸ್ವಾಮಿ ಪವಾಡವನ್ನು ಕಣ್ಣಾರೆ ಕಂಡಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ಮಂಗಳೂರು ನಗರದ ಹಲವು ಕಡೆಗಳಲ್ಲಿನ ದೈವಸ್ಥಾನಗಳಲ್ಲಿನ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಗೂ ಅವಾಚ್ಯ ಶಬ್ದಗಳ ಬರಹಗಳನ್ನು ಬರೆದು ವಿಕೃತಿ ಮೆರೆಯಲಾಗಿತ್ತು. ಇದರ ಬೆನ್ನಲ್ಲೆ ಕೊರೊಗಜ್ಜ ಭಕ್ತರು ವಿಕೃತಿ ಮೆರೆದವರಿಗೆ ಶಿಕ್ಷೆ‌ ನೀಡುವಂತೆಯೇ ದೇವರಲ್ಲಿ ಮೊರೆಯಿಟ್ಟಿದ್ದರು. ಇದೀಗ ಆರೋಪಿ ತಪ್ಪೊಪ್ಪಿಕೊಂಡಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

Comments are closed.