ಮಂಗಳೂರು : ಕೊರಗಜ್ಜನ ಕೋಲ ನಡೆಯುತ್ತಿದ್ದ ವೇಳೆಯಲ್ಲಿ ಕಟ್ಟಡದ ಮೇಲೆ ನಿಂತು ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ ನಡೆದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರು ಹೊರವಲಯದ ತೊಕ್ಕಟ್ಟು ಜಂಕ್ಷನ್ ಬಳಿ ನಡೆದಿದೆ.

ಕೋಡಿ ನಿವಾಸಿ ಮಹಮ್ಮದ್ ಹಫೀಝ್ ಎಂಬಾತನೇ ಬಂಧಿತ ಆರೋಪಿ. ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದು, ಈ ಸಮಯದಲ್ಲಿ ಅಲ್ಲೇ ಇರುವ ಬಿಲ್ಡಿಂಗ್ ಮೇಲೆ ನಿಂತು ಪೊಲೀಸ್ ವಾಹನಕ್ಕೆ ಪಕ್ಕದ ಕಲ್ಲೆಸೆತ ನಡೆದಿದೆ. ಕೂಡಲೇ ಪೊಲೀಸರು ಹಾಗೂ ಸ್ಲಳೀಯರು ಸೇರಿ ಆರೋಪಿಯನ್ನು ಬಂಧಿಸಿದ್ದಾರೆ.

ಸ್ಥಳದಲ್ಲಿ ನಡೆಯುತ್ತಿದ್ದ ಕೊರಗಜ್ಜನ ಕೋಲ ಸ್ಥಳದ ಸಮೀಪದಲ್ಲೇ ಕೃತ್ಯ ನಡೆದಿರುವುದು ಕೋಮು ಸಾಮರಸ್ಯ ಕದಡಲು ಯತ್ನಿಸಿದ ಎನ್ನಲಾಗಿದ್ದು, ಭಕ್ತಾಧಿಗಳು ಸಂಯಮದಿಂದ ವರ್ತಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.