ಕರಾವಳಿ ಕಾಂಗ್ರೆಸ್ ನಾಯಕರು ಅನ್ಯ ರಾಜ್ಯ, ಜಿಲ್ಲೆಯಲ್ಲಿ ಚುನಾವಣಾ ಪಾಠ ಹೇಳುವುದಕ್ಕೆ ಸೀಮಿತವೇ… ?

ಮಂಗಳೂರು : ಕರಾವಳಿ ಕಾಂಗ್ರೆಸ್ ನಲ್ಲಿ ಬಹುದೊಡ್ಡ ನಾಯಕರು ಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಓಡಾಡುತ್ತಿದ್ದಾರೆ. ಆದರೆ ಬೇರೆ ಜಿಲ್ಲೆ ರಾಜ್ಯಗಳಿಗೆ ಚುನಾವಣಾ ಪಾಠ ಹೇಳುವುದಕ್ಕೆ ತೆರಳುವ ಈ ನಾಯಕರುಗಳು ತಮ್ಮ ಜಿಲ್ಲೆಯಲ್ಲಿ ಚುನಾವಣೆಗಳನ್ನು ಗೆಲ್ಲದೆ ಇರುವುದನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

ರಾಜ್ಯ, ರಾಷ್ಟ್ರಮಟ್ಟದಲ್ಲಿ ಐವನ್ ಡಿಸೋಜಾ, ಪಿ.ವಿ.ಮೋಹನ್, ಯು.ಟಿ.ಖಾದರ್, ಲಾವಣ್ಯ ಬಳ್ಳಾಳ್, ಕವಿತಾ ಸನಿಲ್ ಮಹತ್ವದ ಹುದ್ದೆಗಳನ್ನು ಪಡೆದು ರಾಜ್ಯ ರಾಷ್ಟ್ರಮಟ್ಟದಲ್ಲಿ ಓಡಾಡುತ್ತಿದ್ದಾರೆ. ಚುನಾವಣಾ ತಂತ್ರಗಾರಿಕೆಯಾಗಿ ಬೇರೆ ರಾಜ್ಯ ಜಿಲ್ಲೆಗಳಲ್ಲಿ ಓಡಾಡುವ ಈ ನಾಯಕರುಗಳಿಗೆ ತಮ್ಮ ಜಿಲ್ಲೆಯಲ್ಲಿ ಯಾವುದೇ ತಂತ್ರಗಾರಿಕೆ ಮಾಡಲು ಸಾಧ್ಯವಾಗದಿರುವುದು ಆಶ್ಚರ್ಯದ ಸಂಗತಿ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯು.ಟಿ. ಖಾದರ್ ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತು. ನಂತರ ನಡೆದ ಮಂಗಳೂರು ಮಹಾನಗರ ಪಾಲಿಕೆ ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ಕ್ಷೇತ್ರಗಳು ಐವನ್ ಡಿಸೋಜಾ ಮತ್ತು ಪಿವಿ ಮೋಹನ್, ಕವಿತಾ ಸನಿಲ್ ರವರ ಕ್ಷೇತ್ರವಾಗಿತ್ತು. ಇಲ್ಲಿ ಹೀನಾಯವಾಗಿ ಸೋತ ನಂತರ ಐವನ್ ಡಿಸೋಜ ಮತ್ತು ಪಿವಿ ಮೋಹನ್ ರವರನ್ನು ಕೇರಳದ ಚುನಾವಣೆಗೆ ಉಸ್ತುವಾರಿಯಾಗಿ ನಿಯೋಜನೆ ಮಾಡಲಾಯಿತು. ಮಹಾನಗರ ಪಾಲಿಕೆಯಲ್ಲಿ ಇವರ ನಡೆಯದ ತಂತ್ರಗಾರಿಕೆ ಇನ್ನು ಕೇರಳದಲ್ಲಿ ಏನು ನಡೆಯಬಹುದು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರಶ್ನಿಸುತ್ತಿದ್ದಾರೆ.

ಇನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳ ಹಿನ್ನಡೆ ಅನುಭವಿಸಿತ್ತು. ರಾಜ್ಯ , ರಾಷ್ಟ್ರಮಟ್ಟದಲ್ಲಿ ಓಡಾಡುತ್ತಿರುವ ಯು.ಟಿ.ಖಾದರ್, ಐವನ್, ಪಿ.ವಿ.ಮೋಹನ್, ಲಾವಣ್ಯ ಬಳ್ಳಾಳ್ ತಂತ್ರಗಾರಿಕೆ ಎಲ್ಲಿ ಹೋಗಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸದ ನಾಯಕರು ಗಳು ಪ್ರಚಾರದ ಗೀಳಿನ ಹಿಂದೆ ಬಿದ್ದಿದ್ದಾರೆ ಎನ್ನುತ್ತಾರೆ ಹಿರಿಯ ನಾಯಕರೊಬ್ಬರು. ಬಿಜೆಪಿ ತಳಮಟ್ಟದಿಂದ ಪಕ್ಷವನ್ನು ಸದೃಢವಾಗಿ ಕರಾವಳಿ ಪಯಲ್ಲಿ ಬೆಳೆಸುತ್ತಿದೆ, ಆದರೆ ಕಾಂಗ್ರೆಸ್ಸಿಗರು ಸ್ವತಃ ಪ್ರಚಾರದ ಹಿಂದೆ ಹೋಗಿ ಪಕ್ಷವನ್ನ ದುರ್ಬಲ ಗೊಳಿಸುತ್ತಿದ್ದಾರೆ. ಹೈಕಮಾಂಡ್, ಕೆಪಿಸಿಸಿ  ಮೆಚ್ಚಿಸಲು ಮಾಡುವ ಸರ್ಕಸ್ ನಿಂದ ಕರಾವಳಿ ಕಾಂಗ್ರೆಸ್ಸಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುತ್ತಾರೆ ಹಿರಿಯ ನಾಯಕರೊಬ್ಬರು.

https://kannada.newsnext.live/couples-photoshoot-firstnight-concept-bride-drinks-smoke/

Comments are closed.