ಭಾನುವಾರ, ಏಪ್ರಿಲ್ 27, 2025
HomeCoastal Newsಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ 2023

ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ 2023

- Advertisement -

ಕೋಟ (Udupi News) : ಪಂಚವರ್ಣ ಯುವಕ ಮಂಡಲ ಕೋಟ (Panchavarna Yuvaka Mandala) ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ (Panchavarna Mahila mandala) ವತಿಯಿಂದ ವರ್ಷಂಪ್ರತಿ ನೀಡಲಾಗುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ (Panchavarna Rajyothsava Award 2023) ಕನ್ನಡದ ಖ್ಯಾತ ನಟ ದೊಡ್ಡಣ್ಣ ( Actor Doddanna) ಅವರು ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕೋಟದಲ್ಲಿರುವ ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಪ್ರತೀ ವರ್ಷವೂ ರಾಜ್ಯೋತ್ವವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಬಾರಿ ಸದ್ಭಾವನಾ 2023 (Sadbhavana 2023) ಶೀರ್ಷಿಕೆಯಲ್ಲಿ ಪಂಚವರ್ಣ ರಾಜ್ಯೋತ್ಸವ ಕಾರ್ಯಕ್ರಮವು ನವೆಂಬರ್‌ 10 ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

Kota Panchvarna Yuvaka Mandal Sadbhavana Award 2023 to veteran Kannada actor Doddanna
Image credit to Original Source

ಕಳೆದ ಹಲವು ವರ್ಷಗಳಿಂದಲೂ ಪಂಚವರ್ಣ ಯುವಕ ಮಂಡಲ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಬಾರಿ ಕನ್ನಡಚಲನ ಚಿತ್ರರಂಗದ ಖ್ಯಾತ ನಟ ದೊಡ್ಡಣ್ಣ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯು 15ಸಾವಿರ ಮೌಲ್ಯದ ಬೆಳ್ಳಿ ಸ್ಮರಣಿ ಹಾಗೂ ನಗದು ಒಳಗೊಂಡಿದೆ. ಈಗಾಗಲೇ ಹಲವು ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯವನ್ನು ಪಂಚವರ್ಣ ಯುವಕ ಮಂಡಲ ಮಾಡಿದೆ. ಈ ಮೂಲಕ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ರಾಜ್ಯಮಟ್ಟದ ಪ್ರಶಸ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದೆ.

ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್ ನಿಂದ ಹೊರಬಿತ್ತು ಸಿಹಿಸುದ್ದಿ : ತೆರೆಗೆ ಬರಲಿದೆ ಕೆಜಿಎಫ್ 3

ಇನ್ನು ಸದ್ಭಾವನಾ 2023 ಕಾರ್ಯಕ್ರಮದಲ್ಲಿ ಅಮ್ಮುಚ್ಚಿ ಎಂಬ ನೆನಪು ಚಿತ್ರದ ನಾಯಕ, ರಂಗನಟ ಡಾ.ರಾಧಾಕೃಷ್ಣ ಉರಾಳ ಅವರಿಗೆ ವಿಶೇಷ ಅಭಿನಂದನೆ ಯನ್ನು ಸಲ್ಲಿಸಲಾಗುತ್ತದೆ. ಅಲ್ಲದೇ ಈ ಬಾರಿಯ ವಿಶೇಷ ಪುರಸ್ಕಾರಕ್ಕೆ ಪರಿಸರ ಸ್ನೇಹಿ ಸಂಘಟನೆ ಅನ್ನೋ ಖ್ಯಾತಿಗೆ ಪಾತ್ರವಾಗಿರುವ ಕ್ಲೀನ್‌ ತ್ರಾಸಿ ಆಯ್ಕೆಯಾಗಿದೆ.

ಇದೇ ಸಂದರ್ಭದಲ್ಲಿ ಸಾಧಕರಿಗೆ ಸಮ್ಮಾನ ಮಾತ್ರವಲ್ಲದೇ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ , ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನೀಡಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಮಂಗಳೂರು ಪ್ರಸಿದ್ಧ ನಾಟಕ ತಂಡ ದೇವದಾಸ್ ಕಾಪಿಕಾಡ್ ನಿರ್ದೇಶನದ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ ತಿಳಿಸಿದ್ದಾರೆ.

Kota Panchvarna Yuvaka Mandal Sadbhavana Award 2023 to veteran Kannada actor Doddanna
Image Credit to Original Source

ಕನ್ನಡದ ಹಿರಿಯ ನಟ ದೊಡ್ಡಣ್ಣಗೆ ಪ್ರತಿಷ್ಠಿತ ಪ್ರಶಸ್ತಿ :

ಕನ್ನಡ ಚಲನಚಿತ್ರ ರಂಗ ಕಂಡ ಶ್ರೇಷ್ಠ ಕಲಾವಿದರಲ್ಲಿ ದೊಡ್ಡಣ್ಣ ಕೂಡ ಒಬ್ಬರು. ಕೂಡ ಬಾಳಿದರೆ ಸ್ವರ್ಗ ಸುಖ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದೊಡ್ಡಣ್ಣ, ಹಾಸ್ಯ ಕಲಾವಿದರಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಾಸ್ಯ ಮಾತ್ರವಲ್ಲದೇ ಖಳನಾಯಕ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿಯೂ ಗಮನ ಸೆಳೆದಿದ್ದಾರೆ.

ರಂಗಭೂಮಿ ಕಲಾವಿದರಾಗಿದ್ದ ದೊಡ್ಡಣ್ಣ ಸ್ಯಾಂಡಲ್‌ವುಡ್‌ನಲ್ಲಿ ಇದುವರೆಗೂ ಬರೋಬ್ಬರಿ 500 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಂಗ್ಲಿಯಾನಾ, ಸಿಬಿಐ ಶಂಕರ್‌, ರಾಣಿ ಮಹಾರಾಣಿ, ಸೋಲಿಲ್ಲದ ಸರದಾರ, ಕರಳಿನ ಕೂಗು, ಯಾರೇ ನೀನು ಚೆಲುವೆ, ಹಲೋ ಯಮ, ಚಂದ್ರ ಚಕೋರಿ, ರಕ್ತ ಕಣ್ಣೀರು, ಮೌರ್ಯ, ಮಹಾರಾಯ ಸಿನಿಮಾಗಳು ಹೆಚ್ಚು ಪ್ರಖ್ಯಾತಿಯನ್ನು ತಂದುಕೊಟ್ಟಿವೆ.

ಇದನ್ನೂ ಓದಿ : Inamdar Movie: ತೆರೆಗೆ ಬರಲು ಸಿದ್ದವಾಯ್ತು ಮತ್ತೊಂದು ಕನ್ನಡ ಸಿನಿಮಾ ಇನಾಮ್ದಾರ್‌

1998-99  ರಲ್ಲಿ ತೆರೆಕಂಡ ಟುವ್ವಿ ಟುವ್ವಿ ಟುವ್ವಿ ಸಿನಿಮಾದ ನಟನೆಗಾಗಿ ದೊಡ್ಡಣ್ಣ ಅವರಿಗೆ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೇ ಈಗಾಗಲೇ ಹಲವು ಪ್ರಶಸ್ತಿಗಳು ದೊಡ್ಡಣ್ಣ ಅವರ ಮುಡಿಗೇರಿವೆ. ಇದೀಗ ರಾಜ್ಯದ ಮೊತ್ತೊಂದು ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಹಿರಿಯ ನಟ ದೊಡ್ಡಣ್ಣ ಅವರ ಮುಡಿಗೇರಿದೆ.

Kota Panchvarna Yuvaka Mandal Sadbhavana Award 2023 to veteran Kannada actor Doddanna

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular