ಏಕದಿನ ವಿಶ್ವಕಪ್‌ 2023 ಇಂದಿನಿಂದ ಆರಂಭ : ಇಂಗ್ಲೆಂಡ್‌ ವಿರುದ್ದ ಸೇಡು ತೀರಿಸಿಕೊಳ್ಳುತ್ತಾ ನ್ಯೂಜಿಲ್ಯಾಂಡ್‌

ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2023 ) ಇಂದಿನಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ರನ್ನರ್ಸ್‌ ಅಪ್‌ ನ್ಯೂಜಿಲ್ಯಾಂಡ್‌ ತಂಡಗಳು (England vs New zealand) ಸೆಣೆಸಾಡಲಿದೆ

ಅಹಮದಾಬಾದ್‌ : ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2023 ) ಇಂದಿನಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ರನ್ನರ್ಸ್‌ ಅಪ್‌ ನ್ಯೂಜಿಲ್ಯಾಂಡ್‌ ತಂಡಗಳು (England vs New zealand) ಸೆಣೆಸಾಡಲಿದೆ. ಅಲ್ಲದೇ ನ್ಯೂಜಿಲೆಂಡ್‌ ಇಂಗ್ಲೆಂಡ್‌ ವಿರುದ್ದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿಸಿದೆ.

ಕಳೆದ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಸೋಲಿಸುವ ಮೂಲಕ ಇಂಗ್ಲೆಂಡ್‌ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್‌ ಜಯಿಸಿತ್ತು. ಆದ್ರೆ ಈ ಬಾರಿಯ ವಿಶ್ವಕಪ್‌ ಉದ್ಘಾಟನಾ ಪಂದ್ಯ ಕಳೆದ ಬಾರಿಯ ಫೈನಲ್‌ ಪಂದ್ಯವನ್ನು ನೆನಪಿಸುವಂತಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕಾಗಿ ಎರಡೂ ತಂಡಗಳು ಈಗಾಗಲೇ ಸಜ್ಜಾಗಿವೆ. ಸದ್ಯ ಎರಡೂ ತಂಡಗಳು ಬಲಿಷ್ಠವಾಗಿದ್ದು, ಇಂಗ್ಲೆಂಡ್‌ ತಂಡ ಜೋಸ್‌ ಬಟ್ಲರ್‌ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ.

 ICC ODI World Cup 2023 England vs New zealand Live Updates Narendra modi Stadium Ahamedabad
Image Credit to Original Source

ಇದನ್ನೂ ಓದಿ : ವಿಶ್ವಕಪ್ 2023 ತಂಡದಲ್ಲಿ ಸಿಗದ ಸ್ಥಾನ : ನಿವೃತ್ತಿ ಘೋಷಿಸಲು ಮುಂದಾದ ಭಾರತದ ಖ್ಯಾತ ಆಟಗಾರರು

ಇಂಗ್ಲೆಂಡ್‌ ತಂಡದಲ್ಲಿ ಜಾನಿ ಬೈರ್‌ಸ್ಟೋವ್‌, ಡೇವಿಡ್‌ ಮಲನ್‌, ಜೋರೂಟ್‌, ಬೆನ್‌ಸ್ಟೋಕ್‌ ಅವರಂತ ಖ್ಯಾತ ನಾಮ ಆಟಗಾರರಿದ್ದಾರೆ. ಸ್ಯಾಮ್‌ ಕರನ್‌, ಲಿಯಾಮ್‌ ಲಿವಿಂಗ್‌ ಸ್ಟೋನ್‌, ಮೊಯಿನ್‌ ಆಲಿ ಆಲ್‌ರೌಂಡರ್‌ ಸ್ಥಾನವನ್ನು ತುಂಬಲಿದ್ದಾರೆ. ಮಾರ್ಕ್ ವುಡ್‌, ಡೇವಿಡ್ ವಿಲ್ಲಿ, ಕ್ರಿಸ್‌ ವೋಕ್ಸ್‌, ಆದಿಲ್‌ ರಶೀದ್‌ ಅವರಂತ ಬೌಲರ್‌ಗಳು ತಂಡಕ್ಕೆ ಪ್ಲಸ್‌ ಪಾಯಿಂಟ್.‌

ಇನ್ನು ನ್ಯೂಜಿಲ್ಯಾಂಡ್‌ ತಂಡ ಕೂಡ ಬಲಿಷ್ಠವಾಗಿದೆ. ಡೆವೋನ್‌ ಕಾನ್ವೇ, ವಿಲ್‌ ಯಂಗ್‌, ಡೇರಿಲ್‌ ಮಿಚೆಲ್‌ ಬ್ಯಾಟಿಂಗ್‌ ಬಲ ಹೆಚ್ಚಿಸಿದೆ. ರಚಿನ್‌ ರವೀಂದ್ರ, ಇಶಾ ಸೋದಿ, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೋಲ್ಟ್‌, ಜೇಮ್ಸ್‌ ನಿಶಮ್‌ ಅವರಂತಹ ಆಟಗಾರರು ತಂಡಕ್ಕೆ ಬಲ ತುಂಬಲಿದ್ದಾರೆ.

ಇದನ್ನೂ ಓದಿ : ವಿರುಷ್ಕಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : 2 ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ

ಇಂಗ್ಲೆಂಡ್ Playing XI: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್/ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್

 ICC ODI World Cup 2023 England vs New zealand Live Updates Narendra modi Stadium Ahamedabad
Image credit to Original Source

ನ್ಯೂಜಿಲೆಂಡ್ Playing XI: ಡೆವೊನ್ ಕಾನ್ವೇ, ವಿಲ್ ಯಂಗ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್ / ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್

ಇಂಗ್ಲೆಂಡ್ ತಂಡ :
ಜೋಸ್ ಬಟ್ಲರ್ (ನಾಯಕ ), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ಹ್ಯಾರಿ ಬ್ರೂಕ್, ಗಸ್ ಅಟ್ಕಿನ್ಸನ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ

ನ್ಯೂ ಜಿಲ್ಯಾಂಡ್ :
ಟಾಮ್ ಲ್ಯಾಥಮ್ (ನಾಯಕ ), ಡೆವೊನ್ ಕಾನ್ವೇ, ವಿಲ್ ಯಂಗ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಇಶ್ ಸೋಧಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್

ICC ODI World Cup 2023 England vs New zealand Live Updates Narendra modi Stadium Ahamedabad

Comments are closed.