ಕುಂದಾಪುರ : ಬೀಜಾಡಿ, ಗೋಪಾಡಿ, ಮಣೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸರ್ಕಲ್ ಗಳಲ್ಲಿ ಅಮವಾಸ್ಯೆಯ ದಿನದಂದು ಮಾಟ, ಮಂತ್ರ ಮಾಡಿಸುತ್ತಿದ್ದ ವ್ಯಕ್ತಿಯನ್ನು (sorcerer Arrest) ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ನಡೆದಿದೆ.
ಅಮವಾಸ್ಯೆ ಬಂದ್ರೆ ಸಾಕು ರಸ್ತೆಯ ಸರ್ಕಲ್‌ಗಳಲ್ಲಿ ಮಾಟ, ಮಂತ್ರ ಮಾಡಿ ಮಾಟಗಾರ ಎಸ್ಕೇಪ್ ಆಗುತ್ತಿದ್ದ. ಕಳೆದ ಕೆಲವು ತಿಂಗಳಿನಿಂದಲೂ ಮಣೂರು, ಬೀಜಾಡಿ, ಗೋಪಾಡಿ ಗ್ರಾಮಸ್ಥರು ಮಾಟಗಾರನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇಂದು ಸಂಜೆಯ ವೇಳೆಯಲ್ಲಿ ಮಾಟ ಮಾಡುವ ಸಲುವಾಗಿ ಬೀಜಾಡಿ ಗ್ರಾಮದ ಹೆಬ್ರಿ ಮನೆ ಸರ್ಕಲ್ ಬಳಿಯಲ್ಲಿ ಮಾಟಗಾರ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ : ಕಾರ್ಕಡ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪತ್ನಿ ಕೊಲೆಗೈದು ರಾತ್ರಿಯಿಡಿ ಮನೆಯಲ್ಲೇ ಕುಳಿತಿದ್ದ ಪತಿ !
ಕೂಡಲೇ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಮಾಟಗಾರನನ್ನು ಸೆರೆ ಹಿಡಿದು ಥಳಿಸಿದ್ದಾರೆ. ಗ್ರಾಮಸ್ಥರ ಮುಂದೆ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾನು ದೇವಸ್ಥಾನವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ ಅಂತಾ ಹೇಳಿದ್ದಾನೆ. ಆದರೆ ಆತ ತಾನು ಎಲ್ಲಿಯವನು ಅನ್ನೋದನ್ನು ಬಾಯಿಬಿಟ್ಟಿಲ್ಲ. ಇದೀಗ ಗ್ರಾಮಸ್ಥರು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಗ್ರಾಮ ಸುರಕ್ಷಾ ಯೋಜನೆ : ತಿಂಗಳಿಗೆ 1500 ರೂಪಾಯಿ ಪಾವತಿಸಿ, 34 ಲಕ್ಷ ರೂ. ಪಡೆಯಿರಿ
ಕಾರಣೀಕ ಮೆರೆದ ಚಾತ್ರಬೆಟ್ಟು ಬಡಾಗಡಿ ನಾಗ ಬೊಬ್ಬರ್ಯ ದೇವರು ..!
ಗ್ರಾಮದಲ್ಲಿ ಪ್ರತೀ ಅಮವಾಸ್ಯೆಯ ದಿನದಂದು ಮಾಟ, ಮಂತ್ರ ನಡೆಯುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಎಷ್ಟೇ ಹುಡುಕಾಟ ನಡೆಸಿದ್ದರೂ ಕೂಡ ಮಾಟಗಾರ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿರಲಿಲ್ಲ. ಅಂತಿಮವಾಗಿ ಗ್ರಾಮಸ್ಥರು ಕಳೆದ ತಿಂಗಳು ಬೀಜಾಡಿಯ ಚಾತ್ರಬೆಟ್ಟು ಬಡಾಗಡಿ ಶ್ರೀ ನಾಗಬೊಬ್ಬರ್ಯ ದೇವರಿಗೆ ಮೊರೆಯಿಟ್ಟಿದ್ದರು. ಮುಂದಿನ ಅಮವಾಸ್ಯೆಯ ಒಳಗಾಗಿ ಮಾಟ ಮಾಡುವ ವ್ಯಕ್ತಿಯ ಕುರುಹು ತೋರಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದರು.
ಇದನ್ನೂ ಓದಿ : Ration Card e-KYC : ರೇಷನ್ ಕಾರ್ಡ್‌ಗೆ ಇಕೆವೈಸಿ ಕಡ್ಡಾಯ, ತಪ್ಪಿದ್ರೆ ರದ್ದಾಗುತ್ತೆ ಕಾರ್ಡ್
ಸರಿಯಾಗಿ ಒಂದು ತಿಂಗಳು ಕಳೆಯುವ ಮೊದಲೇ ಬಡಾಗಡಿ ನಾಗಬೊಬ್ಬರ್ಯ ದೇವರು ಕಾರಣೀಕ ಮೆರೆದಿದೆ. ಗ್ರಾಮಸ್ಥರು ಬೇಡಿಕೆಯನ್ನು ಈಡೇರಿಸಿದ್ದು, ಬೀಜಾಡಿ ಗ್ರಾಮದಲ್ಲಿಯೇ ಆರೋಪಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
Kundapura Miracle of Naga Bobbarya God A sorcerer caught by the villagers