ಧರ್ಮಸ್ಥಳ: (Lakshdeepotsava 2022) ದೇಶದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳ ಸುಮಾರು ಏಳುನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ನೇತ್ರಾವತಿ ದಡದಲ್ಲಿ ನೆಲೆಗೊಂಡ ಶ್ರೀ ಮಂಜುನಾಥನ ಕ್ಷೇತ್ರವು ನಾಡಿನ ಮೂಲೆ ಮೂಲೆಗಳಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕ್ಷೇತ್ರದತ್ತ ಭಕ್ತರ ದಂಡೇ ಹರಿದು ಬರುತ್ತಿದೆ.
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಧರ್ಮಸ್ಥಳ ಕ್ಷೇತ್ರ ಪ್ರತಿ ದಿನ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಅದರಲ್ಲಿಯೂ ಕಾರ್ತಿಕ ಮಾಸದ ಕೊನೆಯ ದಿನಗಳಲ್ಲಿ ನಡೆಯುವ ಲಕ್ಷದೀಪೋತ್ಸವ(Lakshdeepotsava 2022)ದ ಸಮಯದಲ್ಲಂತೂ ಲಕ್ಷಾಂತರ ಭಕ್ತರ ದಂಡು ಹರಿದು ಬರುತ್ತದೆ. ಧರ್ಮಸ್ಥಳ ಲಕ್ಷದೀಪೋತ್ಸವವು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಪ್ರತಿ ಐದು ದಿನಗಳಲ್ಲಿಯೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆಯಲಿದೆ. ಕ್ಷೇತ್ರದತ್ತ ಹರಿದು ಬರುವ ಭಕ್ತರಿಗೆ ಮನರಂಜನೆಯನ್ನು ನೀಡಲು ಕ್ಷೇತ್ರದ ಮಂಡಳಿಯವರು ವ್ಯವಸ್ಥೆಯನ್ನು ಕಲ್ಪಿಸಿದ್ದು, ಐದು ದಿನಗಳ ಕಾಲ ಸಂಗೀತ ರಸಮಂಜರಿ, ವಸ್ತು ಪ್ರದರ್ಶನ, ನಾಟ್ಯ ವೈಭವ ಸೇರಿದಂತೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದ್ದು, ಕ್ಷೇತ್ರದಾದ್ಯಂತ ದೀಪಗಳು ಝಗಮಗಿಸುತ್ತಿವೆ. ಪ್ರತಿವರ್ಷದಂತೆ ಕ್ಷೇತ್ರದ ಸುತ್ತಮುತ್ತಲಿನ ಪರಿಸರ ದೀಪಗಳಿಂದ ಕಂಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಕ್ತರು ದೇಗುಲದತ್ತ ಹರಿದು ಬರುತ್ತಿದ್ದು, ಧರ್ಮದೇವರಾದ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವದ ವಿಶೇಷತೆ ಎಂದರೆ, ಉತ್ಸವದ ಕೊನೆಯ ದಿನ ದೇವರ ಮೂರ್ತಿಯನ್ನು ಹೊತ್ತು ಭಕ್ತರ ದರ್ಶನಕ್ಕಾಗಿ ಮೆರವಣಿಗೆ ನಡೆಯುತ್ತದೆ. ಮಂಜುನಾಥನ ಮೂರ್ತಿಯೊಂದಿಗೆ ಕ್ಷೇತ್ರದ ಆವರಣದಲ್ಲಿ ಮೆರವಣಿಗೆ ನಡೆದು ಐದು ಕಟ್ಟೆಗಳಲ್ಲಿ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಲಕ್ಷ ದೀಪಗಳಿಂದಲೇ ಕ್ಷೇತ್ರವನ್ನು ಸಿಂಗಾರಗೊಳಿಸುತ್ತಿದ್ದರೆ, ಈಗಿನ ಕಾಲದಲ್ಲಿ ವಿದ್ಯುತ್ ದೀಪಗಳಿಂದ ಕ್ಷೇತ್ರವನ್ನು ಸಿಂಗರಿಸಲಾಗುತ್ತದೆ.

ಇದನ್ನೂ ಓದಿ : Dharamsthala Lakshdeepotsava: ಧರ್ಮಸ್ಥಳ ಲಕ್ಷದೀಪೋತ್ಸವ: ಇಲ್ಲಿದೆ ಕಾರ್ಯಕ್ರಮಗಳ ವಿವರ
ಇದನ್ನೂ ಓದಿ : ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವನ ಸನ್ನಿಧಿಯಲ್ಲಿ ದೀಪದ ಬೆಳಕಲ್ಲಿ ದೇವರ ವಿಶ್ವರೂಪ ದರ್ಶನ
ಈಗಾಗಲೇ ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಪ್ರಾರಂಭವಾಗಿದ್ದು, ಸಾಲು ಸಾಲು ದೀಪಗಳ ಅಲಂಕಾರ ಭಕ್ತರನ್ನು ಸ್ವಾಗತಿಸುತ್ತಿದೆ. ಅದನ್ನು ನೋಡಲೆಂದೇ ಭಕ್ತರು ಹೆಚ್ಚಿನ ರೀತಿಯಲ್ಲಿ ಆಗಮಿಸುತ್ತಿದ್ದು, ಪ್ರತಿದಿನ ಕ್ಷೇತ್ರದಲ್ಲಿ ಜನಸಮೂಹ ಮನೆಮಾಡಿದೆ.

(Lakshdeepotsava 2022) One of the famous religious places in the country, Dharmasthala has a history of about seven hundred years. Located on the banks of the Netravati, Sri Manjunath’s Kshetra attracts people from all corners of the country. Right now, the Lakshdeepotsava program is going on in Dharamsthala and devotees are flocking to the area.