ಭಾನುವಾರ, ಏಪ್ರಿಲ್ 27, 2025
HomeCoastal NewsLokayukta Justice BS Patil: ಧರ್ಮಸ್ಥಳ ಭೇಟಿ ನೀಡಿದ ಲೋಕಾಯಕ್ತ ನ್ಯಾಯಮೂರ್ತಿ: ದೇವರ ದರ್ಶನ ಬಳಿಕ...

Lokayukta Justice BS Patil: ಧರ್ಮಸ್ಥಳ ಭೇಟಿ ನೀಡಿದ ಲೋಕಾಯಕ್ತ ನ್ಯಾಯಮೂರ್ತಿ: ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಭೇಟಿ

- Advertisement -

ಬೆಳ್ತಂಗಡಿ : (Lokayukta Justice BS Patil) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕರ್ನಾಟಕ ಲೋಕಾಯಕ್ತ ನ್ಯಾಯಮೂರ್ತಿ ಶ್ರೀ.ಬಿ.ಎಸ್.ಪಾಟೀಲ್ ಮತ್ತು ಪತ್ನಿ ಶೋಭಾ ಪಾಟೀಲ್ ಜ.7 ರಂದು ಸಂಜೆ ಅಗಮಿಸಿ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದು, ಜ.8 ರಂದು (ಇಂದು) ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡ ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಲೋಕಾಯುಕ್ತ ನ್ಯಾಯಮೂರ್ತಿಯಾದ ಶ್ರೀ.ಬಿ.ಎಸ್.‌ ಪಾಟೀಲ್‌ (Lokayukta Justice BS Patil) ಅವರು ತಮ್ಮ ಪತ್ನಿ ಶೋಭಾ ಪಾಟೀಲ್‌ ಜೊತೆ ಜ.7 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಇಂದು ಬೆಳಿಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವರ ದರ್ಶನದ ನಂತರದಲ್ಲಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲದೇ ಕರ್ತವ್ಯದ ನಿಮಿತ್ತ ಬಂದಿದ್ದ ಬಿ.ಎಸ್.ಪಾಟೀಲ್‌ ಅವರು ದೇವಸ್ಥಾನ ವಾತಾವರಣದ ಬಗ್ಗೆಯೂ ಹೊಗಳಿಕೆಯ ಮಾತನ್ನಾಡಿದ್ದಾರೆ.

Lokayukta Justice BS Patil: Lokayukta Justice Visits Dharmasthala: Visits Dharmakita after Darshan of God

ದೇವರ ದರ್ಶನದ ಬಳಿಕ ಮಧ್ಯಮಗಳೊಂದಿಗೆ ಮಾತಾನಾಡಿದ ನ್ಯಾಯಮೂರ್ತಿ ಶ್ರೀ.ಬಿ.ಎಸ್.ಪಾಟೀಲ್ ಅವರು, ” ನಾನು ಕರ್ತವ್ಯದ ನಿಮಿತ್ತ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲದೇ ದೇವರ ದರ್ಶನವನ್ನು ಪಡೆದುಕೊಂಡು ಧರ್ಮಾಧಿಕಾರಿಯನ್ನೂ ಭೇಟಿ ಮಾಡಿದ್ದೇನೆ. ದೇವಸ್ಥಾನದ ಈ ಒಳ್ಳೆಯ ವಾತಾವರಣ ನನಗೆ ತುಂಬಾ ಖುಷಿ ಕೊಟ್ಟಿದೆ. ಇಲ್ಲಿಗೆ ಬಂದು ತುಂಬಾ ಸಂತೋಷವಾಯಿತು. ಲೋಕಾಯಕ್ತ ಸಂಸ್ಥೆಯ ಆಕ್ಟ್ ಅಡಿಯಲ್ಲಿ ನಮ್ಮ ಅಧಿಕಾರಿಗಳು ಟ್ರ್ಯಾಪ್ , ರೈಡ್ ಸೇರಿದಂತೆ ಜನರ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಇನ್ನೂ ಕೂಡ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ. ಹೊಸ ವರ್ಷಕ್ಕೆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ” ಎಂದು ಹಾರೈಸಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ತಮಗಾದ ಸಂತೋಷವನ್ನು ಹಂಚಿಕೊಂಡರು.

ಲೋಕಾಯಕ್ತ ನ್ಯಾಯಮೂರ್ತಿಯಾದ ಡಿ.ಸಿ.ಪಾಟೀಲ್‌ ಅವರು ಅಗಮಿಸುವ ವೇಳೆ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್, ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್‌ ಅಧಿಕಾರಿಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಾಯಕ್ತ ಎಸ್ಪಿ ಲಕ್ಷ್ಮೀ ಗಣೇಶ್ , ಎಸ್ಪಿ ಸೈಮಾನ್, ಡಿವೈಎಸ್ಪಿ ಕಲಾವತಿ , ಡಿವೈಎಸ್ಪಿ ಚೆಲುವರಾಜ್ ಮತ್ತು ತಂಡದವರು ಉಪಸ್ಥಿತರಿದ್ದರು.

ಇದನ್ನೂ ಓದಿ : Congress New formula : 2 ಬಂಟ, 2 ಬಿಲ್ಲವ, 2 ಮುಸ್ಲೀಂ,1 ಕ್ರಿಶ್ಚಿಯನ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೊಸ ಸೂತ್ರ

ಇದನ್ನೂ ಓದಿ : Kesarinath Tripathi passed away : ಬಿಜೆಪಿ ಹಿರಿಯ ನಾಯಕ ಕೇಸರಿನಾಥ್‌ ತ್ರಿಪಾಠಿ ವಿಧಿವಶ

Lokayukta Justice BS Patil: Lokayukta Justice Visits Dharmasthala: Visits Dharmakita after Darshan of God

RELATED ARTICLES

Most Popular