US judge Surendran.K patil: ಅಂದು ಶಾಲೆ ಬಿಟ್ಟು ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಬಾಲಕ, ಇಂದು ಅಮೇರಿಕಾದ ನ್ಯಾಯಾಧೀಶ

(US judge Surendran.K patil) ಇತ್ತೀಚೆಗಷ್ಟೇ ಟೆಕ್ಸಾನ್‌ ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ 51 ವರ್ಷದ ಸುರೇಂದ್ರನ್ ಕೆ ಪಟೇಲ್ ಅವರು ಹಿಂದೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಬೀಡಿ ಕಟ್ಟಿ ಮನೆಗೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಅದೇ ವ್ಯಕ್ತಿ ಯುಎಸ್‌ ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ಸುರೇಂದ್ರನ್ (US judge Surendran.K patil) ಅವರು ಶಾಲೆಯನ್ನು ತೊರೆದು ಜೀವನೋಪಾಯಕ್ಕಾಗಿ ದೈನಂದಿನ ಕೂಲಿ ಕೆಲಸವನ್ನು ಕೈಗೊಂಡಿದ್ದರು. ಕುಟುಂಬದ ಆರ್ಥಿಕ ಸ್ಥಿತಿ ಕ್ಷೀಣಿಸಿದ್ದ ಕಾರಣ ಅವರು ಹತ್ತನೇ ತರಗತಿಯ ನಂತರ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಾರೆ. ಸತತ ಒಂದು ವರ್ಷಗಳ ಕಾಲ ಬೀಡಿ ಕಟ್ಟಿ ಜೀವನ ನಡೆಸಿದ ಪಟೇಲ್‌ ತನ್ನ ಜೀವನದ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುತ್ತಾರೆ.

ಬೀಡಿ ಕಟ್ಟುತ್ತಾ ಕೂಲಿ ಮಾಡಿಕೊಂಡಿದ್ದ ಪಟೇಲ್‌ ಅವರಿಗೆ ಜೀವನದ ದೃಷ್ಟಿಕೋನ ಬದಲಾಗಿ ಕಾನೂನು ಪದವಿಯನ್ನು ಪಡೆಯಲು ನಿರ್ಧರಿಸುತ್ತಾರೆ. ಅವರ ನಿರ್ಧಾರಕ್ಕೆ ಹಳ್ಳಿಯ ಸ್ನೇಹಿತರು ಬೆನ್ನೆಲುಬಾಗಿ ನಿಲ್ಲುತ್ತಾರೆ. ಅಲ್ಲದೇ ಹೋಟೆಲ್‌ ಗಳಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡು ಕಾನೂನು ಪದವಿಯನ್ನು ಮುಂದುವರೆಸಿಕೊಂಡು ಹೋದರು. ಭಾರತದಲ್ಲಿ ಕಾನೂನು ಪದವಿ ಪಡೆದ ಪಟೇಲ್‌ ನಂತರದಲ್ಲಿ ಯುಎಸ್‌ ನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಆದರೆ ಅಲ್ಲಿ ಅವರ ಜೀವನ ಪಯಣ ಹಲವು ಅಡೆತಡೆಗಳಿಂದ ತುಂಬಿತ್ತು.

ನ್ಯಾಯಾಧೀಶರ ಸ್ಥಾನಕ್ಕೆ ಪಟೇಲ್‌ ಸ್ಪರ್ಧಿಸುವ ಸಮಯದಲ್ಲಿಅವರ ಭಾಷಾ ಉಚ್ಚಾರಣೆಯನ್ನು ನೋಡಿ ಅದರ ಬಗ್ಗೆ ಕಾಮೆಂಟ್‌ ಗಳನ್ನು ಮಾಡುತ್ತಿದ್ದರಂತೆ. ಅಲ್ಲದೇ ನಕಾರಾತ್ಮಕವಾಗಿ ಪ್ರಚಾರ ಕೂಡ ನಡೆಸಿದ್ದರಂತೆ. ನಂತರದಲ್ಲಿ ತನ್ನದೇ ಸ್ವಂತ ಪಕ್ಷವನ್ನು ಕಟ್ಟಿ ಡೆಮಾಕ್ರಟಿಕ್‌ ಪ್ರೈಮರಿಗೆ ಸ್ಪರ್ಧಿಸುತ್ತಾರೆ. ಇದರಲ್ಲಿ ಗೆದ್ದು ಮುನ್ನುಗ್ಗುತ್ತಾರೆ. ಅಂದು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದವ ಇಂದು ಯುಎಸ್‌ ನಲ್ಲಿ ಸ್ವಂತ ಪಕ್ಷವನ್ನು ಕಟ್ಟಿ ಗೆದ್ದು, ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ.

ಇದನ್ನೂ ಓದಿ : US crime : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ : 5 ಮಕ್ಕಳು ಸೇರಿ, 7 ಮಂದಿಗೆ ಗುಂಡಿಕ್ಕಿ ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

ಇದನ್ನೂ ಓದಿ : Terrorist attack in Rajouri : ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ದಾಳಿ : ನಾಲ್ವರು ಸಾವು, 9 ಮಂದಿಗೆ ಗಾಯ

“ನಾನು ಇದನ್ನು ಸಾಧಿಸುತ್ತೇನೆ ಎಂದು ಯಾರೂ ನಂಬಿರಲಿಲ್ಲ. ಅದರೆ ನಾನು ಇಲ್ಲಿದ್ದೇನೆ, ನಿಮ್ಮ ಭವಿಷ್ಯವನ್ನು ಯಾರಿಗೂ ನಿರ್ಧರಿಸಲು ಬಿಡಬೇಡಿ. ನೀವೊಬ್ಬರೇ ನಿಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಿ ” ಎಂದಿದ್ದಾರೆ.

US judge Surendran.K patil: A boy who used to drop out of school and make a beedi at home, today is an American judge

Comments are closed.