Air India : ಏರ್‌ ಇಂಡಿಯಾ ಮಸ್ಕತ್‌ ವಿಮಾನ ರದ್ದು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಸುಸ್ತಾದ ಪ್ರಯಾಣಿಕರು

ಮಂಗಳೂರು : ಶಾಹೀನ್‌ ಚಂಡ ಮಾರುತದ ಎಫೆಕ್ಟ್‌ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮಸ್ಕತ್‌ಗೆ ತೆರಳಬೇಕಾಗಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಪ್ರಯಾಣ ರದ್ದಾಗಿದೆ. ಆದ್ರೆ ಏರ್‌ ಇಂಡಿಯಾ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗಿನಿಂದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾಗಿದ್ದಾರೆ. ಅಲ್ಲದೇ ಏರ್‌ ಇಂಡಿಯಾಕ್ಕೆ ಹಿಡಿಶಾಪ ಹಾಕಿದ್ದಾರೆ.

ಅರಬ್‌ ರಾಷ್ಟ್ರಗಳಲ್ಲಿ ಶಾಹೀನ್‌ ಚಂಡ ಮಾರುತದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಒಮನ್‌, ಮಸ್ಕತ್‌ ಸೇರಿದಂತೆ ಹಲವು ದೇಶಗಳು ವಿಮಾನ ಹಾರಾಟವನ್ನು ನಿಷೇಧ ಮಾಡಿವೆ. ಆದ್ರೆ ಏರ್‌ ಇಂಡಿಯಾ ಎಕ್‌ಪ್ರೆಸ್‌ ಅಧಿಕಾರಿಗಳು ಪ್ರಯಾಣಿಕರಿಗೆ ಮಾಹಿತಿ ನೀಡುವಲ್ಲಿ ಬೇವಾಬ್ದಾರಿಯನ್ನು ತೋರಿದ್ದಾರೆ. ಮಸ್ಕತ್‌ಗೆ ತೆರಳುವ ಸಲುವಾಗಿ ನೂರಾರು ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಇದನ್ನೂ ಓದಿ : ಶಾಹೀನ್‌ ಚಂಡ ಮಾರುತದ ಎಫೆಕ್ಟ್‌ : ಯುಎಇನಲ್ಲಿ ಹೈ ಅಲರ್ಟ್‌, ಒಮನ್‌ನಲ್ಲಿ ವಿಮಾನ ಹಾರಾಟ ಬಂದ್‌

ಆದರೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಟೇಕಾಫ್‌ ಆಗದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಜೆಯ ವರೆಗೂ ವಿಮಾನ ನಿಲ್ದಾಣದಲ್ಲಿಯೇ ಕಾಡಿದ್ದಾರೆ. ಆದರೆ ಏರ್‌ ಇಂಡಿಯಾ ಅಧಿಕಾರಿಗಳು ಪ್ರಯಾಣಿಕರಿಗೆ ಮಾಹಿತಿಯನ್ನೂ ನೀಡಿಲ್ಲ. ಮಾತ್ರವಲ್ಲ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಸಂಜೆಯ ವೇಳೆಗೆ ಸಿಬ್ಬಂದಿಗಳು ವಿಮಾನ ರದ್ದಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.

ಬೆಳಗಿನಿಂದ ಕಾದು ಕಾದು ಸುಸ್ತಾಗಿದ್ದ ಪ್ರಯಾಣಿಕರು ಏರ್‌ ಇಂಡಿಯಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಅಕ್ಟೋಬರ್ 7ರಂದು ಮತ್ತೆ ಮಸ್ಕತ್ ಪ್ರಯಾಣ ಬೆಳೆಸುವಂತೆ ಪ್ರಯಾಣಿಕರಿಗೆ ಸೂಚನೆಯನ್ನು ನೀಡಿದೆ. ಅಂತಿಮವಾಗಿ ಪ್ರಯಾಣಿಕರು ತಮ್ಮೂರಿನತ್ತ ತೆರಳಿದ್ದಾರೆ.

ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

( Air India cancels Muscat flight, passengers waiting at Mangalore airport )

Comments are closed.