ಮಂಗಳೂರು: ಜನವರಿ ತಿಂಗಳ ಕೊನೆಯ ವಾರದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Mangalore Airport Runway repair) ದಲ್ಲಿ ಹಗಲು ವಿಮಾನ ಹಾರಾಟವನ್ನು ರದ್ದುಗೊಳಿಸಲಿದೆ. ಜನವರಿ 27ರಿಂದ ಮೇ31ರ ನಾಲ್ಕು ತಿಂಗಳ ಅವಧಿಯಲ್ಲಿ ರನ್ ವೇ ದುರಸ್ತಿ ಕಾರ್ಯ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಹಗಲು ಹೊತ್ತು ಹಾರಾಟ ನಡೆಸುವ ದೇಶಿ ಹಾಗೂ ವಿದೇಶಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂದು ವರದಿ ಆಗಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ವಾರದ ಸೋಮವಾರ ದಿಂದ ಶನಿವಾರ ತನಕ ಬೆಳಗ್ಗೆ ಗಂಟೆ 9.30 ರಿಂದ ಸಂಜೆ 6 ಗಂಟೆಯವರೆಗೆ ರನ್ ವೇ ದುರಸ್ತಿ ಕಾಮಗಾರಿ ನಡೆಯಲಿದೆ. ರನ್ ವೇ ಡಾಂಬರೀಕರಣವನ್ನು ಹಗಲು ಸಂದರ್ಭದಲ್ಲಿ ನಡೆಯಲಿದ್ದು, ರಾತ್ರಿ ವಿಮಾನ ಹಾರಾಟ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ. ಕಾಮಗಾರಿ ನಡೆಯುವ ಸಂಧರ್ಭದ ಹಗಲು ಹೊತ್ತಿನಲ್ಲಿ ವಿಮಾನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ರನ್ ವೇ ಬಂದ್ ಮಾಡಿ ಕಾಮಗಾರಿ ನಡೆಸುವುದರಿಂದ ಹಗಲು ವಿಮಾನಗಳನ್ನು ರಾತ್ರಿ ಸಮಯಕ್ಕೆ ನಿಗದಿ ಮಾಡಲು ಸೂಚಿಸಲಾಗಿದೆ.
ಕಾಮಗಾರಿ ನಡೆಯುವ ನಾಲ್ಕು ತಿಂಗಳ ಅವಧಿಯಲ್ಲಿ ಆದಿತ್ಯವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ ಕಾಮಗಾರಿ ನಡೆಯುದಿಲ್ಲ. ಈ ಸಂಧರ್ಭದಲ್ಲಿ ಹಗಲು ಹೊತ್ತು ವಿಮಾನ ಹಾರಾಟ ನಡೆಸಬಹುದಾಗಿದೆ. ಮಂಗಳೂರು ವಿಮಾನನಿಲ್ದಾಣಕ್ಕೆ ಬಂದು ಹೋಗುವ ವಿಮಾನಗಳು ಸಂಜೆ6 ಗಂಟೆಯಿಂದ ಮರುದಿನ ಬೆಳಗ್ಗೆ 9.30ರ ಒಳಗೆ ಹಾರಾಟ ಮಾಡಬೇಕಿದೆ. ಈಗಾಗಲೇ ವಿಮಾನನಿಲ್ದಾಣ ಪ್ರಾಧಿಕಾರ ಮತ್ತು ವಿಮಾನ ನಿಲ್ದಾಣವನ್ನು ಗುತ್ತಿಗೆ ವಹಿಸಿ ಕೊಂಡಿರುವ ಕಂಪನಿ ವಿಮಾನಯಾನ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದು, ವಿಮಾನ ಹಾರಾಟದ ಪರಿಷ್ಕೃತ ಸಮಯ ತಿಳಿಸಲಾಗಿದೆ.
ಇದನ್ನೂ ಓದಿ : Power cuts in udupi: ಉಡುಪಿ: ಜನವರಿ 3 ರಂದು ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ
ಇದನ್ನೂ ಓದಿ : Heart attack-soldier death: ರಜೆಗೆಂದು ಊರಿಗೆ ಬಂದಿದ್ದ ಸೇನಾ ಯೋಧ ಹೃದಯಾಘಾತದಿಂದ ಸಾವು
ಇದನ್ನೂ ಓದಿ : Elephant attack-1 dead: ಒಂಟಿ ಸಲಗದ ದಾಳಿ : ಮಗನನ್ನು ರಕ್ಷಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ತಂದೆ
ಮಂಗಳೂರು ವಿಮಾನನಿಲ್ದಾಣದ ರನ್ ವೇ 2,450 ಮೀ ಉದ್ದ ಮತ್ತು 45 ಮೀಟರ್ ಅಗಲವಿದೆ. ಎರಡು ರನ್ ವೇಗಳನ್ನು ಹೊಂದಿರುವುದು ಈ ವಿಮಾನ ನಿಲ್ದಾಣದ ವಿಶೇಷತೆಯಾಗಿದೆ. ಎರಡು ಕಾಂಕ್ರೀಟ್ ರನ್ ವೇಗಳ ದುರಸ್ಥಿ ಕಾರ್ಯ ನಾಲ್ಕು ತಿಂಗಳ ಅವಧಿಯೊಳಗೆ ಮುಕ್ತಾಯಗೊಳಿಸಲು ಸೂಚನೆ ನೀಡಲಾಗಿದೆ. ಮಂಗಳೂರು ವಿಮಾನನಿಲ್ದಾಣದಲ್ಲಿ 2010 ಮೇ 22ರ ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ವಿಮಾನ ಇನ್ನೇನು ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ ವೇಯಿಂದ ಜಾರಿ ನಿಯಂತ್ರಣ ತಪ್ಪಿ ಭಾರಿ ದುರಂತ ಸಂಭವಿಸಿತ್ತು. ಈ ಮಹಾ ದುರಂತದಲ್ಲಿ 166 ಪ್ರಯಾಣಿಕರ ಪೈಕಿ 158 ಮಂದಿ ಮೃತಪಟ್ಟಿದ್ದರು.
Mangalore Airport Runway repair Daytime flights canceled at Mangalore Airport for 4 months