Presidency Engineering College : ಪ್ರೆಸಿಡೆನ್ಸಿ ಇಂಜಿಯರಿಂಗ್ ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿನಿ ಕೊಲೆ : ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯಕರನಿಂದ ಚಾಕು ಇರಿತ

ಬೆಂಗಳೂರು : ಪ್ರೀತಿ ನಿರಾಕರಿಸಿದಕ್ಕೆ ಪ್ರೀತಿಸಿದ ಹುಡುಗಿಯನ್ನು ಹಾಡು ಹಗಲಿನಲ್ಲೇ ಕಾಲೇಜಿನ ಕ್ಯಾಂಪಸ್‌ಗೆ (Presidency Engineering College) ನುಗ್ಗಿ ಯುವಕನೊರ್ವ ಚಾಕುವಿಂದ ಹಲವು ಬಾರಿ ಚುಚ್ಚಿ ಕೊಲೆಗೈದ ಘಟನೆ ನಡೆದಿದೆ. ಕೂಡಲೇ ಹುಡುಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಯುವತಿ ಮೃತಪಟ್ಟಿದ್ದಾಳೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಗಳೂರಿನ ರಾಜಾನುಕುಂಟೆ ಇಟ್ಗಲ್ಪೂರ್‌ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ. ಮೃತ ಪಟ್ಟ ವಿದ್ಯಾರ್ಥಿನಿ ಲಯಸ್ಮಿತ ಎಂದು ಗುರುತಿಸಲಾಗಿದೆ. ಮೃತ ಲಯಸ್ಮಿತ ರಾಜಾನುಕುಂಟೆ ಇಟ್ಗಲ್ಪೂರ್‌ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಮೃತ ವಿದ್ಯಾರ್ಥಿನಿಯು ಯುವಕನ ಪ್ರೀತಿ ನಿರಾಕರಿಸಿದಕ್ಕೆ ಕೋಪಗೊಂಡು ಪ್ರಿಯಕರ ಪವನ್‌ ಕಲ್ಯಾಣ್‌ ಕಾಲೇಜಿಗೆ ನುಗ್ಗಿ ಆಕೆಯ ಕತ್ತಿಗೆ, ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೆ ಚಾಕು ಇರಿದು ಕೊಲೆ ಮಾಡಿದ್ದು, ಬಳಿಕ ತಾನು ಕೂಡ ಅದೇ ಚಾಕುವನ್ನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಕಾರ್ಕಳದಲ್ಲಿ ಶಾಲಾ ಮಕ್ಕಳ ಪ್ರವಾಸ ಬಸ್‌ ಪಲ್ಟಿ : ಮೂವರು ಶಿಕ್ಷಕಿಯರು, ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಇದನ್ನೂ ಓದಿ : ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ : ಡೆತ್‌ನೋಟ್‌ನಲ್ಲಿ ಬಿಜೆಪಿ ಶಾಸಕರ ಹೆಸರು

ಇದನ್ನೂ ಓದಿ : Terrorist attack in Rajouri : ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ದಾಳಿ : ನಾಲ್ವರು ಸಾವು, 9 ಮಂದಿಗೆ ಗಾಯ

ಇದನ್ನೂ ಓದಿ : Mexican Border Prison : ಮೆಕ್ಸಿಕನ್‌ ಗಡಿ ಕಾರಾಗೃಹದ ಮೇಲೆ ದಾಳಿ : 10 ಭದ್ರತಾ ಸಿಬ್ಬಂದಿ, 4 ಕೈದಿಗಳ ಹತ್ಯೆ

ಇನ್ನೂ ವಿದ್ಯಾರ್ಥಿನಿಗೆ ಚಾಕು ಇರಿದವನು ಬೇರೆ ಕಾಲೇಜಿನ ವಿದ್ಯಾರ್ಥಿ ಆಗಿದ್ದಾನೆ. ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಇಂದು ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Female student murdered in Presidency Engineering College campus: Lover stabbed her for refusing love.

Comments are closed.