ಮಂಗಳೂರು: ಬ್ಯಾಂಕಿಗೆ ಹಣ ಡೆಪಾಸಿಟ್ ಮಾಡಲು ತೆರಳುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ದುಷ್ಕರ್ಮಿಗಳು ಹಲ್ಲೆಯನ್ನು ನಡೆಸಿ, ಬ್ಯಾಗಿನಲ್ಲಿದ್ದಸುಮಾರು 4.20 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮಂಗಳೂರಿನ ಚಿಲಿಂಬಿ ಬಳಿಯಲ್ಲಿ ನಡೆದಿದೆ.
ಬೋಜಪ್ಪ ಎಂಬವರೇ ಪೆಟ್ರೋಲ್ ಬಂಕ್ ಮ್ಯಾನೇಜರ್. ಮಣ್ಣಗುಡ್ಡದ ಐಶ್ವರ್ಯ ಪೆಟ್ರೋಲ್ ಪಂಬ್ ನಲ್ಲಿ ಮ್ಯಾನೇಜರ್ ಆಗಿದ್ದ ಬೋಜಪ್ಪ ಪೆಟ್ರೋಲ್ ಬಂಕ್ ನಲ್ಲಿ ಸಂಗ್ರಹವಾಗಿದ್ದ 4.20 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬ್ಯಾಂಕಿಗೆ ತೆರಳುತ್ತಿದ್ದರು. ಚಿಲಿಂಬಿ ಬಳಿಯಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಬೋಜಪ್ಪ ಮೇಲೆ ಬ್ಯಾಟಿನಿಂದ ಹಲ್ಲೆ ನಡೆಸಿದ್ದಾರೆ. ನಂತರದ ಬೋಜಪ್ಪ ಕೈಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಸ್ವಿಗ್ಗಿ ಡೆಲಿವರಿ ಟೀ ಶರ್ಟ್ ಧರಿಸಿದ್ದರು ಎಂದು ಬೋಜಪ್ಪ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಪೊಲೀಸರು ಇಂತಹ ಪ್ರಕರಣಗಳನ್ನು ಮಟ್ಟಹಾಕಬೇಕಾಗಿದೆ.
ಇದನ್ನೂ ಓದಿ : ಮಂಗಳೂರಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ : ಪೊಲೀಸರ ಎದುರಲ್ಲೇ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಇದನ್ನೂ ಓದಿ : ಪೊಲೀಸಪ್ಪನ ಕಾಮಪುರಾಣ : ಅಪ್ರಾಪ್ತ ಯುವತಿಗೆ ಅಬಾರ್ಷನ್ ಮಾಡಿಸಿದ್ದ ಪೊಲೀಸ್ ಶಿವರಾಜ್ ವಿರುದ್ದ ದೂರು
(Petrol bunk manager attacked in Mangalore, 4 lakh rupee robbery )